ಕನ್ನಡ ವಾರ್ತೆಗಳು

ಕುಂದಾಪುರ ಖಾರ್ವಿಕೇರಿ ಪ್ರಮೋದ ಖಾರ್ವಿ ಕೊಲೆ: ಆರೋಪಿಗಳಿಗೆ ಜಾಮೀನು

Pinterest LinkedIn Tumblr

Kundapura Karvikere_Pramodh Karvi (7)

ಕುಂದಾಪುರ: ಇಲ್ಲಿನ ಖಾರ್ವಿಕೇರಿ ನಿವಾಸಿ ಚಿಪ್ಪು ತೆಗೆಯುವ ಮತ್ತು ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದ ಪ್ರಮೋದ ಖಾರ್ವಿ (22) ಅವರನ್ನು ಅಟ್ಟಿಸಿಕೊಂಡು ಹೋಗಿ ಹೊಳೆಗೆ ದೂಡಿ ಹಾಕಿ ಕೊಲೆ ಮಾಡಿದ ಪ್ರಕರಣದ ಅರೋಪಿಗಳಿಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಶರ್ತಬದ್ಧ ಜಾಮೀನು ನೀಡಿದೆ.

ಆರೋಪಿಗಳಾದ ಜೀವನ್ ಖಾರ್ವಿ, ಹರ್ಬಟ್ ಬೆರೆಟ್ಟೊ, ಜೋಸೆಫ್ ಮತ್ತು ರೋಶನ್ ಬೆರೆಟ್ಟೊ 2014, ಡಿ.13ರಂದುಪ್ರಮೋದ್ ಖಾರ್ವಿಯನ್ನು ಅಟ್ಟಿಸಿಕೊಂಡು ಹೋಗಿ ಖ್ಹಾರ್ವಿಕೇರಿಯ ಕೆನರಾ ಬಾಟ್ಲಿಂಗ್ ಕಂಪನಿ ಎದುರು ಹಲ್ಲೆ ನಡೆಸಿ ಹೊಳೆಗೆ ದೂಡಿ ಕೊಲೆಗೈದಿದ್ದರು ಎಂದು ಕುಂದಾಪುರ ಠಾಣೆಯಲ್ಲಿ ಮ್ರತನ ತಂದೆ ಗಣಪತಿ ಖಾರ್ವಿ ಪ್ರಕರಣ ದಾಖಲಿಸಿದ್ದರು.

ಆರೋಪಿಗಳ ಪರ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.

Write A Comment