ಕನ್ನಡ ವಾರ್ತೆಗಳು

75ನೇ ಅಖಿಲ ಭಾರತ ಅಂತರ್ ವಿವಿ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಉಪಾಂತ್ಯದಂದು ಪದಕಗಳ ಸುರಿಮಳೆ.

Pinterest LinkedIn Tumblr

mudabidre_champion_photo_3

ಮೂಡುಬಿದಿರೆ,ಜ.20: ಇಲ್ಲಿನ ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ 75ನೇ ಅಖಿಲ ಭಾರತ ಅಂತರ್ ವಿವಿ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಉಪಾಂತ್ಯ ದಿನವಾದ ಸೋಮವಾರವೂ ಮೂರು ಕೂಟ ದಾಖಲೆಗಳು ಸ್ಥಾಪನೆಯಾಗಿವೆ.

ಮಹಿಳೆಯರ 5000 ಮೀ. (5 ಕಿ.ಮೀ.) ನಡಿಗೆ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಅಮೃತಸರ ಗುರುನಾನಕ್ ದೇವ್ ವಿವಿಯ ಖುಷ್‌ಬೀರ್ ಕೌರ್, ಮಹಿಳಾ ವಿಭಾಗದ ಶಾಟ್‌ಪುಟ್‌ನಲ್ಲಿ ಅಮೃತಸರ ಗುರುನಾನಕ್ ದೇವ್ ವಿವಿಯ ನವಜೀತ್ ಕೌರ್ ಹಾಗೂ ಪುರುಷರ 1500 ಮೀ. ಓಟದಲ್ಲಿ ಪುಣೆಯ ಸಾವಿತ್ರಿಭಾಯ್ ಪುಲೆ ವಿವಿಯ ಸುರೇಶ್ ವಾಗ್ ಹೊಸ ಕೂಟ ದಾಖಲೆ ಮಾಡಿದ್ದಾರೆ.

mudabidre_champion_photo_4

ನಡಿಗೆಯಲ್ಲಿ ‘ಖುಷ್’ ಬೀರಿದ ಕೌರ್: ಅಮೃತಸರ ಗುರುನಾನಕ್ ದೇವ್ ವಿವಿಯನ್ನು ಪ್ರತಿನಿಧಿಸಿದ ಖುಷ್‌ಬೀರ್ ಕೌರ್ ಅವರು ಮಹಿಳಾ ವಿಭಾಗದ 5 ಕಿ.ಮೀ. ನಡಿಗೆ ಸ್ಪರ್ಧೆಯನ್ನು 22 ನಿಮಿಷ, 05 ಸೆಕೆಂಡ್ಸ್‌ಗಳಲ್ಲಿ ಕ್ರಮಿಸಿ, ಹೊಸ ಕೂಟ ದಾಖಲೆ ಬರೆದರು. ಖುಷ್‌ಬೀರ್ ಕೌರ್ ಅವರು 2011ರಲ್ಲಿ ಇದೇ ಮೈದಾನದಲ್ಲಿ ನಡೆದಿದ್ದ ಅಂತರ್ ವಿವಿ ಕೂಟದಲ್ಲಿ 23 ನಿಮಿಷ, 33.31 ಸೆ.ಗಳಲ್ಲಿ ಕ್ರಮಿಸಿ ಹೊಸ ಕೂಟ ದಾಖಲೆ ನಿರ್ಮಿಸಿದ್ದರು. ತನ್ನದೇ ಹೆಸರಿನಲ್ಲಿದ್ದ ಆ ದಾಖಲೆಯನ್ನು ಈಗ ಮುರಿದು, ಟೈಮಿಂಗ್ಸ್ ಉತ್ತಮ ಪಡಿಸಿಕೊಂಡಿದ್ದಾರೆ. ರಾಷ್ಟ್ರೀಯ ದಾಖಲೆಯೂ (23 ನಿಮಿಷ, 33.31 ಸೆ.) ಕೂಡ ಖುಷ್‌ಬೀರ್ ಕೌರ್ ಹೆಸರಲ್ಲೇ (2011ರಲ್ಲಿ) ಇದೆ.

ಈ ವಿಭಾಗದಲ್ಲಿ ಪಂಜಾಬಿ ವಿವಿ ಪಟಿಯಾಲಾದ ಪ್ರಿಯಾಂಕಾ (22 ನಿಮಿಷ 59 ಸೆ.) ಬೆಳ್ಳಿ ಪದಕ ಗೆದ್ದುಕೊಂಡರೆ, ಉದಯ್‌ಪುರದ ಮೋಹನ್‌ಲಾಲ್ ಸುಖಾದಿಯಾ ವಿವಿಯ ಭಾವ್ನಾ ಜಾಟ್ (24 ನಿಮಿಷ, 50 ಸೆ.) ಕಂಚಿನ ಪದಕ ತನ್ನದಾಗಿಸಿಕೊಂಡರು.

mudabidre_champion_photo_5

ಶಾಟ್‌ಪುಟ್‌ನಲ್ಲಿ ‘ನವ’ಜೀತ್: ಮಹಿಳಾ ವಿಭಾಗದ ಶಾಟ್‌ಪುಟ್‌ನಲ್ಲಿ 15.51 ಮೀ. ದೂರ ಎಸೆಯುವ ಮೂಲಕ ನವ ದಾಖಲೆ ವೀರರೆನಿಸಿದರು. 2001ರಲ್ಲಿ ನಡೆದ ಕೂಟದಲ್ಲಿ ಗುರುನಾನಕ್ ದೇವ್ ವಿವಿಯ ಹರ್‌ವಂತ್ ಕೌರ್ ಅವರು 14.40 ಮೀ. ಎಸೆದದ್ದು ಈ ವರೆಗಿನ ದಾಖಲೆಯಾಗಿತ್ತು.

ಚಂಡೀಗಢದ ಪಂಜಾಬ್ ವಿವಿಯ ರಮನ್‌ಪ್ರೀತ್ ಕೌರ್ 14.46 ಮೀ. ಎಸೆದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಇವರು ಕೂಡ ಹಿಂದಿನ ಕೂಟ ದಾಖಲೆಯನ್ನು ಅಳಿಸಿದರು. ಪಟಿಯಾಲಾ ಪಂಜಾಬಿ ವಿವಿಯ ಮನ್‌ಪ್ರೀತ್ ಕೌರ್ ಅವರು 14.33 ಮೀ. ಎಸೆದು ಮೂರನೇ ಸ್ಥಾನಿಯಾದರು.

mudabidre_champion_photo_6

ಸುರೇಶ್ ವಾಗ್ ದಾಖಲೆ: ನಾಲ್ಕನೇ ದಿನದ ಕೊನೆಯಲ್ಲಿ ಪುರುಷರ 1500 ಮೀ. ಓಟದಲ್ಲಿ ಪುಣೆಯ ಸಾವಿತ್ರಿಭಾಯ್ ಪುಲೆ ವಿವಿಯ ಸುರೇಶ್ ವಾಗ್ ಅವರು 3 ನಿಮಿಷ, 51.69 ಸೆ.ಗಳಲ್ಲಿ ಓಟ ಮುಗಿಸುವ ಮೂಲಕ ಹೊಸ ಕೂಟ ದಾಖಲೆ ಸ್ಥಾಪಿಸಿದರು. ಹಿಂದಿನ ಕೂಟ ದಾಖಲೆ ಪಂಜಾಬಿ ವಿವಿ ಪಟಿಯಾಲಾದ ವಿಕಾಸ್ ಕುಮಾರ್ (3 ನಿಮಿಷ, 53.30 ಸೆ.) ಅವರ ಹೆಸರಲ್ಲಿತ್ತು. ಕೋಲ್ಕೊತಾ ವಿವಿಯ ಶಶಿಭೂಷಣ್ ಸಿಂಗ್ (3 ನಿಮಿಷ, 53.98 ಸೆ.) ಬೆಳ್ಳಿ ಪದಕ ಹಾಗೂ ಎಂಡಿಯು ರೋಹ್ಟಕ್ ವಿವಿಯ ದಿನೇಶ್ (3 ನಿಮಿಷ, 55.22 ಸೆ.) ಕಂಚಿನ ಪದಕ ಗಳಿಸಿದರು.

ನಾಲ್ಕನೇ ದಿನದ ಫಲಿತಾಂಶ: ಪುರುಷರ ವಿಭಾಗ: ಪೋಲ್‌ವಾಲ್ಟ್: 1. ವಿ. ಕೃಷ್ಣ ಪ್ರಸಾದ್ (ಅಣ್ಣಾ ವಿವಿ ಚೆನ್ನೈ, 4.60 ಮೀ.), 2. ನಿಜಿಲ್ ಜಾಕ್ಸನ್ (ಮಂಗಳೂರು ವಿವಿ, 4.50 ಮೀ.), 3. ಟಿ.ಧರ್ಮರಾಜ್ (ಭಾರತೀದಾಸನ್ ವಿವಿ ತಿರುಚನಾಪಳ್ಳಿ, 4.40 ಮೀ.).

ಡಿಸ್ಕಸ್ ಥ್ರೋ: 1. ಹಪ್ರೀತ್ ಸಿಂಗ್ (ಪಂಜಾಬಿ ವಿವಿ ಪಾಟಿಯಾಲ, 51.90 ಮೀ.), 2. ನಿರ್ಭಯ್ ಸಿಂಗ್ (ಪಂಜಾಬಿ ವಿವಿ ಪಾಟಿಯಾಲ, 50.71 ಮೀ.), 3.ರಾಹುಲ್ ರಥೀಶ್ ಇ. (ಕ್ಯಾಲಿಕಟ್ ವಿವಿ, 47.51 ಮೀ.)

mudabidre_champion_photo_7 mudabidre_champion_photo_8

10 ಸಾವಿರ ಮೀ. ಓಟ: 1.ಸ್ವಪ್ನಿಲ್ ಸಾವಂತ್ ಸಾಹೇಬ್ರ (ನಾಂದೇಡ್ ಸ್ವಾಮಿ ಆರ್.ಟಿ. ಮಾರತ್ವಾಡ ವಿವಿ, 31 ನಿಮಿಷ, 20.70 ಸೆ.), 2.ರಂಜೀತ್ ಕುಮಾರ್ (ಪಂಜಾಬಿ ವಿವಿ ಚಂಡೀಗಢ, 31 ನಿಮಿಷ, 24.90 ಸೆ.), 3.ಅಮರೇಶ್ ಯಾದವ್ (ದೀನ್‌ದಯಾಳ್ ಉಪಾಧ್ಯಾಯ ವಿವಿ ಗೋರಕ್‌ಪುರ್, 31 ನಿಮಿಷ, 26.40 ಸೆ.).

ಜಾವೆಲಿನ್ ತ್ರೋ: 1.ಆಶಿಷ್ ಸಿಂಗ್ (ಡಾ.ಆರ್‌ಎಂಎಲ್ ಅವಧ್ ವಿವಿ ಫೈಸಾಬಾದ್-ಉತ್ತರ ಪ್ರದೇಶ, 69.30 ಮೀ.), 2.ಜಸ್ನೂರ್ ಸಿಂಗ್ (ಗುರುನಾನಕ್ ದೇವ್ ವಿವಿ ಅಮೃತ್‌ಸರ್, 69.30 ಮೀ.), 3.ಪರ‌್ವಿಂದರ್ ಕುಮಾರ್ (ಪಂಜಾಬಿ ವಿವಿ ಚಂಡೀಗಢ, 69.16 ಮೀ.).

1500 ಮೀ. ಓಟ: 1. ಸುರೇಶ್ ವಾಗ್ (ಸಾವಿತ್ರಿಭಾಯ್ ಪುಲೆ ಪುಣೆ ವಿವಿ, 3 ನಿಮಿಷ, 51.69 ಸೆ. ಹೊಸ ಕೂಟ ದಾಖಲೆ), 2.ಶಶಿಭೂಷಣ್ ಸಿಂಗ್ (ಕೋಲ್ಕೊತಾ ವಿವಿ, 3 ನಿಮಿಷ, 53.98ಸೆ.), 3. ದಿನೇಶ್ (ಎಂಡಿಯು ರೋಹ್ಟಕ್ ವಿವಿ, 3 ನಿಮಿಷ, 55.22 ಸೆ.).

mudabidre_champion_photo_10 mudabidre_champion_photo_9

ಮಹಿಳೆಯರ ವಿಭಾಗ: 5000 ಮೀ. (5 ಕಿ.ಮೀ.) ನಡಿಗೆ: 1.ಖುಷ್‌ಬೀರ್ ಕೌರ್ (ಗುರುನಾನಕ್‌ದೇವ್ ವಿವಿ ಅಮೃತಸರ, 22ನಿಮಿಷ, 05 ಸೆ.-ಹೊಸ ಕೂಟ ದಾಖಲೆ), 2.ಪ್ರಿಯಾಂಕಾ (ಪಂಜಾಬಿ ವಿವಿ ಪಟಿಯಾಲಾ, 22 ನಿಮಿಷ, 59 ಸೆ.-ಹೊಸ ಕೂಟ ದಾಖಲೆ), 3.ಭಾವ್ನಾ ಜಾಟ್ (ಮೋಹನ್‌ಲಾಲ್ ಸುಖಾದಿಯಾ ವಿವಿ ಉದಯ್‌ಪುರ, 24 ನಿಮಿಷ, 50 ಸೆ.).

ಶಾಟ್‌ಪುಟ್- 1. ನವಜೀತ್ ಕೌರ್ (ಗುರುನಾನಕ್ ದೇವ್ ವಿವಿ ಅಮೃತಸರ, 15.51 ಮೀ.-ಹೊಸ ಕೂಟ ದಾಖಲೆ), 2. ರಮನ್‌ಪ್ರೀತ್ ಕೌರ್ (ಪಂಜಾಬ್ ವಿವಿ ಚಂಡೀಗಢ, 14.46 ಮೀ.), 3. ಮನ್‌ಪ್ರೀತ್ ಕೌರ್ (ಪಂಜಾಬಿ ವಿವಿ ಪಟಿಯಾಲಾ, 14.33 ಮೀ.).

mudabidre_champion_photo_12 mudabidre_champion_photo_11

ಲಾಂಗ್ ಜಂಪ್: 1. ಭೂಮಿಕಾ ಠಾಕೂರ್ (ಪಂಜಾಬಿ ವಿವಿ ಪಟಿಯಾಲಾ, 6.21 ಮೀ.), 2.ಕೌಸಲ್ಯ (ಕುರುಕ್ಷೇತ್ರ ವಿವಿ, 6.15 ಮೀ.), 3. ಜಿ. ಕಾರ್ತಿಕಾ (ಭಾರತೀದಾಸನ್ ವಿವಿ ತಿರುಚನಾಪಳ್ಳಿ, 5.89 ಮೀ.).

ಹೆಪ್ಟಾಥ್ಲಾನ್: 1. ಎಂ. ಸೌಮ್ಯ (ಮದ್ರಾಸ್ ವಿವಿ, 4471 ಅಂಕ), 2. ಅನಿಲಾ ಜೋಸ್ (ಎಂ.ಜಿ. ವಿವಿ ಕೊಟ್ಟಾಯಂ, 4371 ಅಂಕ), 3.ಮರೀನಾ ಜಾರ್ಜ್ (ಎಂ.ಜಿ. ವಿವಿ ಮದ್ರಾಸ್, 4340 ಅಂಕ).

800 ಮೀ. ಹೆಪ್ಟಥ್ಲಾನ್ ಓಟ: 1. ಅನಿಲಾ ಜೋಸ್ (ಎಂ.ಜಿ. ವಿವಿ ಕೊಟ್ಟಾಯಂ, 2 ನಿಮಿಷ, 22:98 ಸೆ.), 2. ಮರೀನಾ ಜಾರ್ಜ್ (ಎಂ.ಜಿ. ವಿವಿ ಕೊಟ್ಟಾಯಂ, 2 ನಿಮಿಷ, 23:46 ಸೆ.), 3. ರೋಜಾ ಎಚ್.ಸಿ. (ಮಂಗಳೂರು ವಿವಿ, 2 ನಿಮಿಷ, 30:73 ಸೆ.).

mudabidre_champion_photo_14 mudabidre_champion_photo_13

1500 ಮೀ. ಓಟ: 1. ಚಿತ್ರಾ ಪಿ.ಯು. (ಕ್ಯಾಲಿಕಟ್ ವಿವಿ, 4 ನಿಮಿಷ, 29.04 ಸೆ.), 2. ರಿತು ದಿನಕರ್ (ಪಂಜಾಬ್ ವಿವಿ ಪಟಿಯಾಲ, 4 ನಿಮಿಷ, 30.29 ಸೆ.), 3. ಶಿಪ್ರ ಸರ್ಕಾರ್ (ಕೋಲ್ಕೊತಾ ವಿವಿ 4 ನಿಮಿಷ, 31.14 ಸೆ.).

ಪದಕ ಪಟ್ಟಿ : ಚಿನ್ನ, ಬೆಳ್ಳಿ, ಕಂಚು 1.ಪಂಜಾಬಿ ಪಟಿಯಾಲಾ 5-5-2 2.ಮಂಗಳೂರು ಯೂನಿವರ್ಸಿಟಿ 3-5-1 3.ಎಂ.ಜಿ.ಯೂನಿವರ್ಸಿಟಿ ಕೊಟ್ಟಾಯಂ 4-3-1 4.ಕ್ಯಾಲಿಕಟ್ ಯೂನಿವರ್ಸಿಟಿ3-2-2 5.ಜಿಎನ್‌ಡಿಯು ಅಮೃತಸರ 3-3-0

Write A Comment