ಪ್ರಮುಖ ವರದಿಗಳು

ರಣಜಿ: ಕರ್ನಾಟಕ ಮುನ್ನಡೆ: ರೈಲ್ವೇಸ್‌ಗೆ ಅರವಿಂದ್ -ಮಿಥುನ್ ಪ್ರಹಾರ; ಉತ್ತಪ್ಪ ,ನಾಯರ್ ಅರ್ಧಶತಕ

Pinterest LinkedIn Tumblr

phpsfdwtpvbk-jammu_2253015f_1

ಹೊಸದಿಲ್ಲಿ, ಡಿ.23: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಕರ್ನಾಟಕ ತಂಡ ಮೇಲುಗೈ ಸಾಧಿಸಿದೆ.

ಕರ್ನೈಲ್ ಸಿಂಗ್ ಸ್ಟೇಡಿಯಂನಲ್ಲಿ ಪಂದ್ಯದ ಮೂರನೆ ದಿನವಾಗಿರುವ ಮಂಗಳವಾರ ಆಟ ನಿಂತಾಗ ಕರ್ನಾಟಕ ತಂಡ ಎರಡನೆ ಇನಿಂಗ್ಸ್‌ನಲ್ಲಿ 34 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 131 ರನ್ ಗಳಿಸಿತ್ತು.

70 ರನ್ ಗಳಿಸಿರುವ ಆರಂಭಿಕ ದಾಂಡಿಗ ರಾಬಿನ್ ಉತ್ತಪ್ಪ ಮತ್ತು ಕರುಣ್ ನಾಯರ್ ಔಟಾಗದೆ 61 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಸೋಮವಾರ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 36.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 105 ರನ್ ಮಾಡಿದ್ದ ರೈಲ್ವೇಸ್ ತಂಡಕ್ಕೆ ಎಡಗೈ ವೇಗಿ ಶ್ರೀನಾಥ್ ಅರವಿಂದ್(4-43) ಮತ್ತು ಅಭಿಮನ್ಯು ಮಿಥುನ್ (3-53) ದಾಳಿಯನ್ನು ಎದುರಿಸಲು ಸಾಧ್ಯವಾಗದೆ 56 ಓವರ್‌ಗಳಲ್ಲಿ 171 ರನ್ ತಲುಪುವಷ್ಟರಲ್ಲಿ ಆಲೌಟಾಯಿತು. ಮೂರನೆ ದಿನದ ಮೊತ್ತಕ್ಕೆ 66 ರನ್ ಸೇರಿಸಲಷ್ಟೇ ಶಕ್ತವಾಯಿತು. ಭೋಜನಾ ವಿರಾಮದ ಬಳಿಕ ಮಜುಂದಾರ್ ವಿಕೆಟ್ ಕಬಳಿಸಿದ ಅರವಿಂದ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪಡೆದಿರುವ ವಿಕೆಟ್‌ಗಳ ಸಂಖ್ಯೆಯನ್ನು 100ಕ್ಕೆ ಏರಿಸಿದರು.

ಅನುಸ್ತಪ್ ಮಜುಂದಾರ್ (38), ನಾಯಕ ಮಹೇಶ್ ರಾವತ್(15) ಅನುರೀತ್ ಸಿಂಗ್(ಔಟಾಗದೆ 14) ಎರಡಂಕೆಯ ಸ್ಕೋರ್ ದಾಖಲಿಸಿದರು. ರಂಜಿತ್ ಮಾಲಿ (2), ಅರ್ಣವ್ ಅರುಣ್ ನಂದಿ (9) ಒಂದಂಕೆಯ ಕೊಡುಗೆ ನೀಡಿದರು. ರೈಲ್ವೇಸ್ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸಿದ ಕರ್ನಾಟಕ ಎರಡನೆ ಇನಿಂಗ್ಸ್‌ನ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಮಾಯಾಂಕ್ ಅಗರ್‌ವಾಲ್(0) ತಾನೆದುರಿಸಿದ ಮೊದಲ ಎಸೆತದಲ್ಲೇ ಅನುರೀತ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು. ಆದರೆ ಆರಂಭಿಕ ದಾಂಡಿಗ ರಾಬಿನ್ ಉತ್ತಪ್ಪ ಮತ್ತು ಕರುಣ್ ನಾಯರ್ ಎರಡನೆ ವಿಕೆಟ್‌ಗೆ 130 ರನ್ ಗಳಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು.

ಸಂಕ್ಷಿಪ್ತ ಸ್ಕೋರ್ ವಿವರ
ಕರ್ನಾಟಕ ಮೊದಲ ಇನಿಂಗ್ಸ್ 247ರೈಲ್ವೇಸ್ ಮೊದಲ ಇನಿಂಗ್ಸ್ 56 ಓವರ್‌ಗಳಲ್ಲಿ ಆಲೌಟ್ 171
(ಕೌಶಿಕ್ 59, ಮಜುಂದಾರ್ 38; ಎಸ್.ಅರವಿಂದ್ 4-43, ಅಭಿಮನ್ಯು ಮಿಥುನ್ 3-53, ಸ್ಟುವರ್ಟ್ ಬಿನ್ನಿ 2-18).
ಕರ್ನಾಟಕ ಎರಡನೆ ಇನಿಂಗ್ಸ್ 34 ಓವರ್‌ಗಳಲ್ಲಿ 131/1
(ಉತ್ತಪ್ಪ ಔಟಾಗದೆ 70, ನಾಯರ್ ಔಟಾಗದೆ 61; ಅನುರೀತ್ ಸಿಂಗ್ 1-43).

Write A Comment