ಕರ್ನಾಟಕ

ಬಿಜೆಪಿಯಿಂದ ರಾಜ್ಯಾದ್ಯಂತ ಕೋಮುಗಲಭೆ ಪ್ರಯತ್ನ: ಕಿಮ್ಮನೆ ಆರೋಪ

Pinterest LinkedIn Tumblr

Kimmane

ಬೆಂಗಳೂರು, ನ.20: ಬಿಜೆಪಿಯವರು ಸುಮ್ಮನೆ ಇರಲಾರದೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ನಮ್ಮ ನಾಲ್ವರು ಸಚಿವರು ಯಾವುದೇ ತಪ್ಪು ಮಾಡದಿದ್ದರೂ ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿಯ ಪ್ರತಿಭಟನೆಗೆ ತಿರುಗೇಟು ನೀಡಿದ್ದಾರೆ.

ತೀರ್ಥಹಳ್ಳಿಯ ನಂದಿತಾ ನಿಗೂಢ ಸಾವಿನ ಪ್ರಕರಣದಲ್ಲಿ ಬಿಜೆಪಿ ಪಕ್ಷ ರಾಜ್ಯಾದ್ಯಂತ ಕೋಮು ಗಲಭೆ ಸೃಷ್ಟಿಸುತ್ತಿದೆ. ಈ ಪ್ರಕರಣದಲ್ಲಿ ಎಲ್ಲರೂ ಆತುರ ತೋರಿದ್ದಾರೆ. ಸಾವಿಗೆ ಕಾರಣರಾದವ ರನ್ನು ಬಂಧಿಸಿ ಸರ್ಕಾರ ಶಿಕ್ಷೆಗೊಳಪಡಿಸುತ್ತದೆ. ಸಿಐಡಿ ತನಿಖೆ ವಿಳಂಬವಾಗಿಲ್ಲ.ತನಿಖೆ ಮುಂದುವರೆದಿದೆ ಎಂದು ಅವರು ನಗರದಲ್ಲಿ ಮಾತನಾಡಿದ್ದಾರೆ.

ಬಿಜೆಪಿ ಪಕ್ಷ ಅನಗತ್ಯವಾಗಿ ಅಪಪ್ರಚಾರ ಮಾಡಿ ಪ್ರತಿಭಟನೆ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನಕ್ಕೆ ರಾಜ್ಯದ ಜನ ಸೊಪ್ಪು ಹಾಕುವುದಿಲ್ಲ ಎಂದು ಅವರು ಹೇಳಿದರು.

Write A Comment