ಕರಾವಳಿ

ಉಪ್ಪುಂದ ದರೋಡೆ; ನಟೋರಿಯಸ್ ದರೋಡೆಕೋರರ ಬಂಧನ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳ  ವಶ

Pinterest LinkedIn Tumblr

ಕುಂದಾಪುರ: ತಾಲೂಕಿನ ಉಪ್ಪುಂದ  ಗ್ರಾಮದ ಸೋನರಕೇರಿ ಎಂಬಲ್ಲಿ ಗದ್ದೆಯ ಬಳಿ 5 ಮಂದಿ ದುಷ್ಕರ್ಮಿಗಳು ಚಿನ್ನದ ಅಂಗಡಿ ಮಾಲಕರಾದ  ಸುಧೀಂದ್ರ ಶೇಟ್, ಅವರ ತಂದೆ ಮತ್ತು ತಂಗಿ ಮತ್ತು ಅನಿಲ್ ಶೇಟ್ ಇವರಿಗೆ ಮುಖಕ್ಕೆ ಕಾರದ ಪುಡಿ  ಎರಚಿ, ಚೂರಿಯಿಂದ ಹಲ್ಲೆ ಮಾಡಿ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ಸುಮಾರು 500 ಗ್ರಾಂ ತೂಕದ ಚಿನ್ನಾಭರಣಗಳನ್ನು ದರೋಡೆ ಮಾಡಿಕೊಂಡು ಹೋದ ಘಟನೆ 07/10/2014 ರಂದು ರಾತ್ರಿ 8.00ಕ್ಕೆ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರವಿ ಜತ್ತನ್ ಸೇರಿದಂತೆ ಐವರು ಆರೋಪಿಗಳನ್ನು ಉಡುಪಿ ಡಿಸಿಐಬಿ ಹಾಗೂ ವಿವಿಧ ಠಾಣೆಯ ಪೊಲೀಸರು ಬಂಧಿಸಿದ್ದು ಆರೋಪಿಗಳಿಂದ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳ  ವಶಪಡಿಸಿಕೊಳ್ಳಲಾಗಿದೆ.

Uppunda_robbary_case Uppunda_robbary_case (1)

ಆರೋಪಿಗಳ ಪೈಕಿಿಪ್ಪನ್ ಪೇಟೆ ನಿವಾಸಿ ಪ್ರಕಾಶ್, ಪುತ್ತೂರು ನಿವಾಸಿ ಚಂದ್ರಹಾಸ, ಕಾರ್ಕಳ ನಿವಾಸಿ ಪ್ರದೀಪ ಪೂಜಾರಿ ಇವರುಗಳನ್ನು ಬೈಂದೂರಿನಲ್ಲಿ ಬಂಧಿಸಿ ಮಾರಕಾಸ್ತ್ರ ಹಾಗೂ ಮೊಬೈಲು ಫೋನುಗಳನ್ನು ವಶಪಡಿಸಿಕೊಳ್ಲಲಾಗಿತ್ತು. ಬಳಿಕುಂಬೈ ಮೂಲದ ಸದ್ಯ ಪುತ್ತೂರು ನಿವಾಸಿುರ್ಗಪ್ರಸಾದ ಶೆಟ್ಟಿ ಎಂಬಾತನನ್ನು ಉಡುಪಿಯ ನಿಟ್ಟೂರು ಬಳಿ ದಸ್ತಗಿರಿ ಮಾಡಿ ಆತನಿಂದ   ಪ್ರಕರಣದಲ್ಲಿ ದರೋಡೆ ಮಾಡಿದ 2.5 ಗ್ರಾಂ ತೂಕದ ಚಿನ್ನದ ಬೆಂಡೋಲೆ ಮತ್ತು ಕೃತ್ಯಕ್ಕೆ  ಉಪಯೋಗಿಸಿದ ಚೂರಿಯನ್ನು ವಶಪಡಿಸಿಕೊಳ್ಳಲಾಗಿತ್ತು.

ಪ್ರಕರಣದ ರುವಾರಿ ಹಾಗೂ ಪ್ರಮುಖ ಆರೋಪಿ ಡುಪಿ ಕಡೆಕಾರು ನಿವಾಸಿ ರವಿ ಜತ್ತನ್ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಶೋಧ ನಡೆಸಿದ ಪೊಲಿಸರು ಮಡಿಕೇರಿಯಲ್ಲಿ ಬಂಧಿಸಿ ಕರೆತಂದಿದ್ದಾರೆ.  ಆತನು ಕೊಡಗು ಜಿಲ್ಲೆಯ ಸೋಮವಾರಪೇಟೆ, ಕುಶಾಲನಗರ ಮೊದಲಾದ ಕಡೆಗಳಲ್ಲಿ ಖಾಸಗೀ ಸಂಸ್ಥೆಯಲ್ಲಿ ಅಡವಿರಿಸಿದ್ದ ಚಿನ್ನಾಭರಣಗಳನ್ನು ಸೇರಿ ಆತನಿಂದ ರೂ 12 ಲಕ್ಷ ಮೌಲ್ಯದ ಚಿನ್ನದ ಕಿವಿಯ ಬೆಂಡೋಲೆ, ಮತ್ತು ಚಿನ್ನದ ಉಂಗುರಗಳು ಸೇರಿ ಒಟ್ಟು 427 ಗ್ರಾಂ  ತೂಕದ ಒಡವೆಗಳನ್ನು ಸ್ವಾಧೀನಪಡಿಸಲಾಗಿದೆ.

ಖತರ್ನಾಕ್ ಖದೀಮರು: ಕುಖ್ಯಾತ ದರೋಡೆಕೋರ ರವಿಜತ್ತನ್ ಈತನ ವಿರುದ್ದ ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ, ಕಳ್ಳತನ, ಶಸ್ತ್ರಾಸ್ತ್ರ ಕಾಯ್ದೆ ಸೇರಿ 20ಕ್ಕೂ ಅಧಿಕ ಪ್ರಕರಣಗಳು ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದು, ಶಿಕ್ಷೆಯನ್ನೂ ಅನುಭವಿಸಿರುತ್ತಾನೆ. ಅಲ್ಲದೆ ಆತನ ವಿರುದ್ದ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ  8ಕ್ಕೂ ಅಧಿಕ ಬಂಧನ ವಾರಂಟು ಹೊರಡಿಸಿರುತ್ತದೆ. ಆರೋಪಿ ಪ್ರಕಾಶ @ ಶಿವ ಪ್ರಕಾಶ ಈತನ ವಿರುದ್ದವೂ ಕೂಡ ಹಲವಾರು ಪ್ರಕರಣಗಳು ದಾಖಲಾಗಿದ್ದು, ಉಡುಪಿ ಜಿಲ್ಲೆಯ  ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಂಗಡಿಯಲ್ಲಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಶಿಕ್ಷೆಯನ್ನು ಅನುಭವಿಸಿರುತ್ತಾನೆ. ಪಸ್ತುತ ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್‌ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್‌ ಇವರ ನಿರ್ದೇಶನದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್, ಕುಂದಾಪುರ ಡಿವೈಎಸ್.ಪಿ,   ಇವರ ಮಾರ್ಗದರ್ಶನದಲ್ಲಿ ಬೈಂದೂರು ಸಿಪಿಐ ಸುಧರ್ಶನ್ ,ಕುಂದಾಪುರ ಸಿಪಿಐ ದಿವಾಕರ್, ಸಿಪಿಐ, ಕುಂದಾಪುರ, ಡಿಸಿಐಬಿ ಇನ್ಸಪೆಕ್ಟರ್ ಟಿ.ಆರ್ ಜೈಶಂಕರ್ , ಬೈಂದೂರು ಉಪನಿರೀಕ್ಷಕ  ಸಂತೋಷ್ ಕಾಯ್ಕಿಣಿಿ, ಕೊಲ್ಲೂರು ಉಪನಿರೀಕ್ಷಕ ಜಯಂತ ಎಂ., ಉಡುಪಿ  ಡಿಸಿಐಬಿ ಯ ಎಎಸ್ಐ ರೊಸಾರಿಯೋ ಡಿ’ಸೋಜಾ, ಚಂದ್ರ ಶೆಟ್ಟಿ, ಸತೀಶ ಬಟ್ವಾಡಿ, ಕಾಪು ಠಾಣೆಯ  ರವಿಚಂದ್ರ, ಮಲ್ಪೆ ಠಾಣೆಯ ಸಂತೋಷ್ ಕುಂದಾರ್, ಶಿರ್ವಾ ಠಾಣೆಯ ಸುರೇಶ್, ಕಾರ್ಕಳ ನಗರ  ಠಾಣೆಯ ಸಂತೋಷ್, ಕುಂದಾಪುರ ಪೊಲೀಸ್ ಉಪಾಧೀಕ್ಷಕರ ಕಛೇರಿಯ ರಾಮು ಹೆಗ್ಡೆ, ರಾಘವೇಂದ್ರ, ಪೊಲೀಸ್ ಅಧೀಕ್ಷಕರ ಕಛೇರಿಯ ಸಿಡಿಆರ್ ವಿಭಾಗದ ಶಿವಾನಂದ, ಬೈಂದೂರು ಠಾಣೆಯ ಇಲಾಖಾ ಜೀಪು ಚಾಲಕರಾದ ಚಂದ್ರ, ರಾಘವೇಂದ್ರ ಮತ್ತು ಬೈಂದೂರು ಠಾಣೆಯ ಎಲ್ಲಾ ಸಿಬ್ಬಂದಿಯವರು ಭಾಗವಹಿಸಿರುತ್ತಾರೆ.

ಈ ತಂಡಕ್ಕೆ ಪೊಲೀಸ್‌ಅಧೀಕ್ಷಕರು, ಉಡುಪಿರವರು ರೂ. 25,000/- ನಗದು ಬಹುಮಾನವನ್ನು ಘೋಷಿರುತ್ತಾರೆ.

Write A Comment