ಉಡುಪಿ: ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಹಿಂಭಾಗದ ಕಾರ್ಕಡ ಬಡಾಹೋಳಿಯ ಜನವಸತಿ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಚಿರತೆ ಕಾಣಿಸಿಕೊಂಡಿದ್ದು, ಅದನ್ನು ಸೆರೆ ಹಿಡಿಯಲು ಬಡಾಹೋಳಿ ಸಮೀಪದ ಬಯಲಿನಲ್ಲಿ ಬೊನ್ ಅಳವಡಿಸಲಾಗಿದೆ.
ಬಡಾಹೋಳಿಯ ಲಲಿತಾ ಮರಕಾಲ್ತಿ ಅವರು ಮನೆ ಹತ್ತಿರ ವಾಕಿಂಗ್ ಹೋಗುವಾಗ ಜನರು ಚಿರತೆಯನ್ನು ನೋಡಿದ್ದು, ಭಯಗ್ರಸ್ತರಾಗಿ ಕೂಗಿಕೊಂಡಿದಾಗ ಚಿರತೆ ಓಡಿಹೋಗಿದೆ. ಅದು ಸಮೀಪದ ಬಯಲಿನ ಪೊದೆಯಲ್ಲಿ ಅವಿತಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದರು.
ಕೋಟ ಪರಿಸರದಲ್ಲಿ ಚಿರತೆ ಮತ್ತೆ ಪ್ರತ್ಯಕ್ಷ
ಕೋಟ ಪರಿಸರದಲ್ಲಿ ಚಿರತೆ ಹಾವಳಿ ಮುಂದುವರಿದಿದ್ದು, ಬುಧವಾರ ರಾತ್ರಿ ಕೋಟ ಸಮೀಪದ ಹಂದಟ್ಟು, ಗೊಬ್ಬರಬೆಟ್ಟು ಪರಿಸರದಲ್ಲಿ ಚಿರತೆಯೊಂದು ನವಿಲನ್ನು ಭೇಟೆಯಾಡುತ್ತಿದ್ದದನ್ನು ಸ್ಥಳೀಯರು ಗುರುತಿಸಿದ್ದಾರೆ ಎನ್ನಲಾಗಿದೆ.
ಅನಂತರ ರಾತ್ರಿ ೧೨ಗಂಟೆಯ ತನಕ ಹಂದಟ್ಟು, ದಾನಗುಂದು, ಬಾರಿಕೆರೆ ಪರಿಸರದಲ್ಲಿ ಸ್ಥಳೀಯರು ಚಿರತೆಗಾಗಿ ಶೋಧ ಕಾರ್‍ಯ ನಡೆಸಿದ್ದು ಯಾವುದೇ ಸುಳಿವು ದೊರಕಿಲ್ಲ. ಈ ಹಿಂದೆ ಮಂಗಳವಾರ ಬೆಳಿಗ್ಗೆ ಸಾಲಿಗ್ರಾಮದ ಕಾರ್ಕಡ, ಬಡಾಹೋಳಿಯ ಸಮೀಪ ಬೆಳಗಿನ ಜಾವ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಅದನ್ನು ಸೆರೆ ಹಿಡಿಯಲೋಸುಗ ಬೋನು ಅಳವಡಿಸಲಾಗಿದೆ.