ಕರಾವಳಿ

ಫಲಾನುಭವಿಗಳಿಂದ ಬಸವ ವಸತಿ, ಇಂದಿರಾ ಆವಾಸ್ ಮನೆಗಳ ಮಾರಾಟ : ತನಿಖೆಗೆ ಸಂಸದ ನಳಿನ್ ನಿರ್ದೇಶನ

Pinterest LinkedIn Tumblr

Nalin_Zp_Meet_2

ಮಂಗಳೂರು, ನ.7: ಕೇಂದ್ರ ಸರಕಾರದ ಇಂದಿರಾ ಆವಾಸ್ ಹಾಗೂ ಬಸವ ವಸತಿ ಯೋಜನೆಯಡಿ ಮಂಜೂರಾಗಿದ್ದ ಮನೆಗಳನ್ನು ದ.ಕ. ಜಿಲ್ಲೆಯ ಕೆಲ ಫಲಾನುಭವಿಗಳು ಇತರರಿಗೆ ಮಾರಾಟ ಮಾಡಿರುವ ಬಗ್ಗೆ ದೂರುಗಳು ಬಂದಿರುವುದರಿಂದ ಆ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂ ಗಣದಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2013-14ನೆ ಸಾಲಿನ ಇಂದಿರಾ ಆವಾಸ್ ಹಾಗೂ ಬಸವ ವಸತಿ ಯೋಜನೆಯ ಪ್ರಗತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, 2010ರಲ್ಲಿ ಕಿನ್ನಿಗೋಳಿಯಲ್ಲಿ ನಡೆದ ಸಭೆಯಲ್ಲಿ ಸುಮಾರು 10ರಷ್ಟು ಮನೆಗಳನ್ನು ಫಲಾನುಭವಿಗಳು ಮಾರಾಟ ಮಾಡಿರುವ ಬಗ್ಗೆ ದೂರುಗಳು ಬಂದಿವೆೆ. ಒಬ್ಬ ಫಲಾನುಭವಿ ಎರಡು ಮನೆಗಳನ್ನು ಪಡೆದು ಕೊಂಡಿದ್ದು, ಅದರಲ್ಲಿ ಒಂದನ್ನು ಮಾರಾಟ ಮಾಡಿ ರುವ ಪ್ರಕರಣವೂ ಇದೆ ಎಂದು ನಳಿನ್‌ಕುಮಾರ್ ತಿಳಿಸಿದರು.

Nalin_Zp_Meet_1

ಜಿ.ಪಂ. ಸಿಇಒ ತುಳಸಿ ಮದ್ದಿನೇನಿ ಮಾತನಾಡಿ, ಬೆಳ್ತಂಗಡಿಯಲ್ಲೂ ಮನೆ ಮಾರಾಟ ಆಗಿರುವ ಬಗ್ಗೆ ಜನಸ್ಪಂದನ ಸಭೆಯಲ್ಲಿ ದೂರು ಬಂದಿದೆ. ಈ ಬಗ್ಗೆ ಸ್ಥಳೀಯ ಶಾಸಕರಿಗೂ ಮಾಹಿತಿ ಇದೆ. ಪ್ರಕರಣ ದಾಖ ಲಿಸಿ ಎಂದು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು.

ಸಂಸತ್ ಅಧಿವೇಶನದ ಬಳಿಕ ಬಸವ ವಸತಿ ಹಾಗೂ ಇಂದಿರಾ ಆವಾಸ್ ಯೋಜನೆ ಕುರಿತಂತೆ ಸಭೆ ಕರೆಯಲಾಗುವುದು ಎಂದು ಸಂಸದ ನಳಿನ್ ಈ ಸಂದರ್ಭ ತಿಳಿಸಿದರು. ಬಸವ ವಸತಿ ಯೋಜನೆಯಡಿ ಜಿಲ್ಲೆಯಲ್ಲಿ 2010-11ನೆ ಸಾಲಿನಲ್ಲಿ 12,579 ಮನೆ ನಿರ್ಮಾಣದ ಗುರಿ ಹೊಂದಿದ್ದು, 8,489 ಪೂರ್ಣ ಗೊಂಡಿವೆ. 4,090 ಮನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ಇಂದಿರಾ ಆವಾಸ್ ಯೋಜನೆ ಯಡಿ 2013-14ನೆ ಸಾಲಿನಲ್ಲಿ 2,773 ಮನೆ ನಿರ್ಮಾಣದ ಗುರಿ ಹೊಂದಲಾಗಿದ್ದು, 445 ಮನೆ ಗಳು ಪೂರ್ಣಗೊಂಡಿವೆ. 1,815 ಮನೆಗಳು ಪ್ರಗತಿ ಯಲ್ಲಿದ್ದು, 513 ಮನೆಗಳು ಆರಂಭಿಸಲು ಬಾಕಿ ಇವೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ ಕಪ್ಪು ಪಟ್ಟಿಗೆ ಹಾಕಲಾಗಿದ್ದ ಗುತ್ತಿಗೆದಾರ ಸಾಯಿ ಸುಧೀರ್ ಎಂಬವರಿಗೆ ಮತ್ತೆ ಗುತ್ತಿಗೆ ವಹಿಸಿರುವ ಬಗ್ಗೆ ಜಿ.ಪಂ. ಉಪಾಧ್ಯಕ್ಷ ಸತೀಶ್ ಕುಂಪಲ ಆಕ್ಷೇಪ ವ್ಯಕ್ತಪಡಿಸಿದರು. ಕಪ್ಪು ಪಟ್ಟಿಗೆ ಸೇರಿದವರಿಗೆ ಯಾಕೆ ಮತ್ತೆ ಗುತ್ತಿಗೆ ನೀಡಿದ್ದು ಎಂಬ ಸಂಸದರ ಪ್ರಶ್ನೆಗೆ, ಗುತ್ತಿಗೆ ವಹಿಸಲು ಯಾರೂ ಮುಂದೆ ಬಂದಿಲ್ಲದ ಕಾರಣ ಅವರಿಗೆ ನೀಡಲಾಗಿದೆ ಎಂದು ಅಧಿಕಾರಿ ಪ್ರತಿಕ್ರಿಯಿಸಿದರು. ಈ ಬಗ್ಗೆ ಒಂದು ವಾರದೊಳಗೆ ವರದಿ ನೀಡು ವಂತೆ ಅಧಿಕಾರಿಗೆ ತಾಕೀತು ಮಾಡಿದ ಸಂಸದ ನಳಿನ್‌ಕುಮಾರ್, ನ.15ರೊಳಗೆ ಅಲ್ಲಿಗೆ ಭೇಟಿ ನೀಡುವುದಾಗಿ ಹೇಳಿದರು.

Nalin_Zp_Meet_3

ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹಂಪ್ಸ್‌ಗಳನ್ನು ಹಾಕುವಂತಿಲ್ಲ. ಆದರೆ ಜಿಲ್ಲೆಯ ಹಲವೆಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ಹಂಪ್ಸ್‌ಗಳಿದ್ದು, ಅದನ್ನು ತೆರವುಗೊಳಿಸುವಂತೆ ಕಳೆದ ಸಭೆಯಲ್ಲಿ ತಿಳಿಸಲಾಗಿದೆ. ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸದ ನಳಿನ್ ಪ್ರಶ್ನಿಸಿದರು. ಇದಕ್ಕುತ್ತರಿಸಿದ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿ ಹನೀಫ್, ಇದೀಗ ಹಾಕಲಾಗಿರುವ ಹಂಪ್ಸ್ ತೆಗೆಯಲು ಅಂದಾಜು ಪಟ್ಟಿ ತಯಾರಿಸಬೇಕಾಗಿದೆ ಎಂದರು.

ಈ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿ ಕಾರಿ ಎ.ಬಿ.ಇಬ್ರಾಹೀಂ ಪ್ರತಿಕ್ರಿಯಿಸಿ, ಮಾಣಿಯಿಂದ ಜಾಲ್ಸೂರು ಹೆದ್ದಾರಿಯಲ್ಲಿ 13 ಹಂಪ್ಸ್ ಗಳನ್ನು ಹಾಕ ಲಾಗಿತ್ತು. ಅದನ್ನು ತೆಗೆಯದಿದ್ದರೆ ಇಲ್ಲಿಂದ ಓಡಿ ಸುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಅದನ್ನೀಗ ತೆರವುಗೊಳಿಸಲಾಗಿದೆ ಎಂದರು. ಉಳಿದಂತೆ ಸಭೆಯಲ್ಲಿ ವಿವಿಧ ಇಲಾಖೆಗಳ ವಿವಿಧ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

13ನೆ ಹಣಕಾಸು ಯೋಜನೆಯಲ್ಲಿ ತಾರತಮ್ಯ

ಬಂಟ್ವಾಳ ಪುರಸಭೆಯಲ್ಲಿ 13ನೆ ಹಣಕಾಸು ಯೋಜನೆಯಲ್ಲಿ 48.10 ಲಕ್ಷ ರೂ. ಕ್ರಿಯಾ ಯೋಜನೆಗೆ 23 ವಾರ್ಡ್ ಪೈಕಿ ಕೇವಲ 18 ವಾರ್ಡ್ ಮಾತ್ರ ಆಯ್ಕೆ ಮಾಡಲಾಗಿದೆ. ಉಳಿದ ವಾರ್ಡ್‌ಗಳಿಗೆ ಆ ಹಣವನ್ನು ನೀಡುವಲ್ಲಿ ತಾರತಮ್ಯ ಮಾಡಿರುವುದು ಏಕೆ ಎಂದು ಸಂಸದ ನಳಿನ್ ಸಭೆಯಲ್ಲಿ ಪ್ರಶ್ನಿಸಿದರು. ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸರಕಾರ ಸಂಬಂಧಿತ ಕಾಮಗಾರಿ ನಡೆಸು ವಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿ ಸುತ್ತಿದ್ದಾರೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಹದಗೆಟ್ಟ ಬಿಎಸ್ಸೆನ್ನೆಲ್ ನೆಟ್‌ವರ್ಕ್‌ಗೆ..

ದ.ಕ. ಜಿಲ್ಲೆಯಲ್ಲಿ ಬಿಎಸ್ಸೆನ್ನೆಲ್ ನೆಟ್‌ವರ್ಕ್ ಸ್ಥಿತಿ ತೀರಾ ಹದಗೆಟ್ಟಿದೆ. ಟವರ್ ಇರುವಲ್ಲಿ ಜನರೇಟರ್ ಇಲ್ಲ. ಕಳೆದ ವರ್ಷ ಉತ್ತಮವಾಗಿದ್ದ ಬಿಎಸ್ಸೆನ್ನೆಲ್ ನೆಟ್‌ವರ್ಕ್ ಪರಿಸ್ಥಿತಿ ಏನಾಗಿದೆ ಎಂದು ತಿಳಿಯುತ್ತಿಲ್ಲ ಎಂದು ಬಿಎಸ್ಸೆನ್ನೆಲ್ ಅಧಿಕಾರಿಗಳನ್ನು ಸಂಸದ ನಳಿನ್ ತರಾಟೆಗೈದರು. 2ಜಿ, 3ಜಿ ನೆಟ್‌ವರ್ಕ್ ಸಮಸ್ಯೆ ಎಂದು ಬಿಎಸ್ಸೆನ್ನೆಲ್ ಅಧಿಕಾರಿ ಸಮರ್ಥಿಸಿಕೊಳ್ಳಲು ಮುಂದಾದಾಗ, ಸಿಟ್ಟಿಗೆದ್ದ ಸಂಸದ ನಳಿನ್, 2ಜಿ, 3ಜಿ ಎಲ್ಲಾ ಬಿಸಾಕಿ ಎಂದರು. ನಗರದಲ್ಲೇ ಬಿಎಸ್ಸೆನ್ನೆಲ್ ಸಿಗ್ನಲ್ ಸಿಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅವರೂ ಖಾರವಾಗಿ ಪ್ರತಿಕ್ರಿಯಿಸಿದರು.

ಅಡಿಕೆ ಕೊಳೆ ರೋಗ: ಹೆಚ್ಚುವರಿ 4 ಕೋ.ರೂ. ಪರಿಹಾರಕ್ಕೆ ಮನವಿ

ಕಳೆದ ಬಾರಿ ಕಾಣಿಸಿಕೊಂಡ ಅಡಿಕೆ ಕೊಳೆರೋಗದಿಂದ ತತ್ತರಿಸಿರುವ ದ.ಕ. ಜಿಲ್ಲೆಯ ರೈತರಿಗೆ ಪರಿಹಾರ ನೀಡಲು ಹೆಚ್ಚುವರಿ 4 ಕೋ.ರೂ. ಪರಿಹಾರ ನೀಡಬೇಕು ಎಂದು ಅವಿಭಜಿತ ದ.ಕ.ಜಿಲ್ಲೆಯ ಸಚಿವರುಗಳು ಗುರುವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.

ಈಗಾಗಲೇ ರೈತರಿಗೆ ಪರಿಹಾರ ಕಲ್ಪಿ ಸಲಾಗಿದೆ. ಹೆಚ್ಚುವರಿ ಪರಿಹಾರ ನೀಡುವ ಅಗತ್ಯವಿರುವುದರಿಂದ ಸರಕಾರ ಹಣ ಬಿಡುಗಡೆ ಮಾಡಿ ಸಂತ್ರಸ್ತ ರೈತರ ಕಷ್ಟ ನಿವಾ ರಣೆ ಮಾಡುವಂತೆ ಸಚಿವರಾದ ಬಿ.ರಮಾನಾಥ ರೈ, ಯು.ಟಿ. ಖಾರ್, ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್ ಒತ್ತಾಯಿಸಿದ್ದಾರೆ.

Write A Comment