ಬೆಂಗಳೂರು / ಮಂಗಳೂರು : ಚರ್ಚ್ ದಾಳಿ ಕುರಿತ ನ್ಯಾI ಸೋಮಶೇಖರ್ ಆಯೋಗದ ವರದಿಯನ್ನು ರಾಜ್ಯ ಸಚಿವ ಸಂಪುಟ ಸಂಪೂರ್ಣವಾಗಿ ತಿರಸ್ಕರಿಸಿ ಈ ಪ್ರಕರಣ ಕುರಿತ ಕೇಂದ್ರ ಮಾನವ ಹಕ್ಕುಗಳ ಆಯೋಗ ನೀಡಿದ್ದ ಶಿಫಾರಸುಗಳ ಆಧಾರದ ಮೇಲೆ ಹೊಸದಾಗಿ ತನಿಖೆ ನಡೆಸುವಂತೆ ಗ್ರಹ ಇಲಾಖೆಗೆ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮ್ಯನವರಿಗೆ ಸಮಸ್ತ ಕ್ರೈಸ್ತ ಸಮುದಾಯದ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು.
ಮುಖ್ಯ ಮಂತ್ರಿಗಳ ನಿವಾಸದಲ್ಲಿ ನಿನ್ನೆ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯನವರನ್ನು ಬೇಟಿಮಾಡಿದ ನಿಯೋಗವು ಸರಕಾರ ಈ ನಿರ್ಧಾರವನ್ನು ಸ್ವಾಗತಿಸುವುದಾಗಿ ತಿಳಿಸಿದೆ. ಹಾಗೂ ಇದಕ್ಕಾಗಿ ಸರಕಾರಕ್ಕೆ ಕೃತಜ್ಞತೆ ಅರ್ಪಿಸಿದೆ.
ಜನವರಿ 14, 15, 16 ಮುಡಿಪುವಿನ ಮುಕ್ತಿವಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದಲ್ಲಿ ಮುಕ್ತಿವಂತ ಜೋಸೆಫ್ ವಾಜ್ ಇವರನ್ನು ಕಥೋಲಿಕ್ ಧರ್ಮಸಭೆಯ ಅತ್ಯುನ್ನತ ಸಂತ ಪದವಿ ನೀಡುವ ಪ್ರಧಾನ ಸಮಾರಂಭಕ್ಕೆ ಮುಖ್ಯಮಂತ್ರಿಗಳಿಗೆ ಕರೆಯೋಲೆಯನ್ನು ಈ ಸಂದರ್ಭದಲ್ಲಿ ನೀಡಲಾಯಿತು. ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ ಕರ್ನಾಟಕ ಕ್ರೈಸ್ತ ಸಂಘಟನೆಗಳ ಅಂತರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾದ ಶ್ರೀ ರೊನಾಲ್ಡ್ ಕೊಲಾಸೊರವರು ಕರ್ನಾಟಕ ಸರ್ಕಾರದ ಕ್ರೈಸ್ತ ಅಭಿವೃದ್ಧಿ ಸಮಿತಿಯನ್ನು ಕ್ರೈಸ್ತ ಅಭಿವೃದ್ಧಿ ನಿಗಮವಾಗಿ ಪರಿವರ್ತನೆ ಮಾಡಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ನಿಯೋಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಯು.ಟಿ.ಖಾದರ್, ಪ್ರಥಮ ಬಾರಿ ಅಧಿವೇಶನದಲ್ಲಿ ನ್ಯಾI ಸೋಮಶೇಖರ್ ಆಯೋಗದ ವರದಿಯನ್ನು ತಿರಸ್ಕರಿಸಬೇಕೆಂದು ಧ್ವನಿ ಎತ್ತಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಜೆ.ಆರ್.ಲೋಬೊ ಕರ್ನಾಟಕ ಕ್ರೈಸ್ತ ಸಂಘಟನೆಗಳ ಅಂತರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾದ ಸನ್ಮಾನ್ಯ ರೊನಾಲ್ಡ್ ಕೊಲಾಸೊ, ಕ್ರೈಸ್ತರ ಪರವಾಗಿ ನ್ಯಾI ಸೋಮಶೇಖರ್ ಆಯೋಗದಲ್ಲಿ ಪ್ರತಿನಿಧಿಸಿದ ವಕೀಲರಾದ ಹಾಗೂ ಮಂಗಳೂರು ಧರ್ಮ ಪ್ರಾಂತ್ಯದ ಪ್ರಧಾನ ಕಾರ್ಯದರ್ಶಿ ಶ್ರೀ ಎಂ.ಪಿ.ನೊರೊನ್ಹಾ, ಮಂಗಳೂರು ದಕ್ಷಿಣ ಪ್ರಾಂತ್ಯದ ಪ್ರಧಾನ ಧರ್ಮಗುರುಗಳಾದ ಫಾI ಗ್ರೆಗರಿ ಡಿಸೋಜ, ಕರ್ನಾಟಕ ಕ್ರೈಸ್ತ ಸಂಘಗಳ ಅಂತರಾಷ್ಟ್ರೀಯ ಒಕ್ಕೂಟ ಪ್ರಧಾನ ಕಾರ್ಯದರ್ಶಿಯಾದ ಮೈಕಲ್ ಬ್ಯಾಪ್ಟಿಸ್ಟ್, ರಾಜ್ಯ ಸಂಚಾಲಕರಾದ ಡೆನಿಸ್ ಡಿಸಿಲ್ವ, ಉಡುಪಿ ತಾಲೂಕಿನ ಅಧ್ಯಕ್ಷರಾದ ಪ್ರಶಾಂತ್ ಜತ್ತನ್ನ, ಬಾಳೆಹೊನ್ನೂರು ಘಟಕದ ಸಂಚಾಲಕರಾದ ಜೋಸೆಫ್ ಲೋಬೊ, ಬಂಗಾರ್ ಪೇಟೆ ತಾಲೂಕಿನ ಸಂಚಾಲಕರಾದ ಕೆ. ಸ್ಟ್ಯಾನ್ಲಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಮೆಲ್ವಿನ್ ಡಿಸೋಜ, ಕ್ರೈಸ್ತ ಮುಖಂಡರುಗಳಾದ ರೋಶನ್ ಡಿಸೋಜ, ಲ್ಯಾನ್ಸಿ ರೋಡ್ರಿಗಸ್, ಅಶೋಕ್ ಡಿಸೋಜ, ಮೈಕಲ್ ಡಿಸೋಜ, ಆಲ್ವಿನ್ ಡಿಸೋಜ, ಮಾರ್ಸೆಲ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.
