ಕರಾವಳಿ

`ಚಾಲಿಪೋಲಿಲು’ ಸಿನಿಮಾಕ್ಕೆ ಸೆನ್ಸಾರ್ ಮಂಡಳಿ ಮೆಚ್ಚುಗೆ

Pinterest LinkedIn Tumblr

Chali_Polilu_Senser_1

ಮಂಗಳೂರು: ಜಯಕಿರಣ ಫಿಲಂಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದ ಪ್ರಥಮ ತುಳು ಸಿನಿಮಾ `ಚಾಲಿಪೋಲಿಲು’ ತೆರೆಯೇರಲು ದಿನಗಣನೆ ಆರಂಭವಾಗಿದೆ. ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿಯು ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತನಾಡಿ, ಇದು ಕುಟುಂಬ ಸಮೇತ ನೋಡಬಹುದಾದ ಒಂದು ಉತ್ತಮ ಚಿತ್ರ ಎಂದು `ಯು’ ಸರ್ಟಿಫಿಕೆಟ್ ನೀಡಿದೆ.

ಹೀರೋ ಇಲ್ಲದ ಒಂದು ಭಿನ್ನ ಚಿತ್ರವಾಗಿರುವ `ಚಾಲಿಪೋಲಿಲು’ ಬಿಡುಗಡೆ ಮುನ್ನವೇ ಭರ್ಜರಿ ಸದ್ದು ಮಾಡುತ್ತಿದ್ದು, ಎಲ್ಲರೂ ಸಿನಿಮಾ ಯಾವಾಗ ಬಿಡುಗಡೆ ಎಂದು ಕೇಳುವಂಥ ವಾತಾವರಣ ನಿರ್ಮಿಸಿದೆ.

ವಾಟ್ಸ್‌ಆಪ್ , ಫೇಸ್‌ಬುಕ್‌ಗಳಲ್ಲಿ ಈ ಸಿನಿಮಾದ ಬಗ್ಗೆ ಸಾಕಷ್ಟು ಪಾಸಿಟಿವ್ ಅಭಿಪ್ರಾಯಗಳು ವಿನಿಮಯವಾಗುತ್ತಿದೆ. ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದೆ. ಧ್ವನಿಸುರುಳಿ ಬಿಡುಗಡೆಗೆ ಮುನ್ನವೇ ಇದರ ಹಾಡುಗಳು ವಿವಿಧೆಡೆ ರಸಮಂಜರಿ ಕಾರ್ಯಕ್ರಮಗಳಲ್ಲಿ ಹಾಡಲ್ಪಡುತ್ತಿದ್ದವು. ಸಿಡಿ ಬಿಡುಗಡೆಯಾದ ಮೇಲಂತೂ ಸಿನಿಪ್ರಿಯೆರೆಲ್ಲರೂ `ಚಾಲಿಪೋಲಿಲು’ ಗುನುಗುನಿಸುವಂತಾಗಿದೆ.

ಚಾಲಿಪೋಲಿಲು ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರ್ ಪೂರ್ಣ ಪ್ರಮಾಣದ ಪಾತ್ರದಲ್ಲಿ ಅಭಿನಯಿಸಿದ್ದು, ಇವರಿಗೆ ಅರವಿಂದ ಬೋಳಾರ್, ಸುಂದರ ರೈ ಮಂದಾರ ಸಾಥ್ ನೀಡಿದ್ದಾರೆ. ಮನೋರಂಜನೆಗೆ ಏನೆಲ್ಲ ಬೇಕೋ ಅವೆಲ್ಲವೂ ಈ ಸಿನಿಮಾದಲ್ಲಿದೆ. ಪ್ರೇಕ್ಷಕರು ಬಯಸುವಂಥದ್ದೆಲ್ಲವೂ ಇದರಲ್ಲಿದೆ. ನವಿರಾದ, ದ್ವಂದ್ವಾರ್ಥವಿಲ್ಲದ ಗುಣಮಟ್ಟದ ಹಾಸ್ಯ, ಸಾಮಾಜಿಕ ಆಗುಹೋಗುಗಳ ವಿಡಂಬನೆ, ಒಂದು ಉತ್ತಮ ಕಥೆ, ಅದಕ್ಕಿಂತಲೂ ಉತ್ತಮ ಸಂದೇಶವನ್ನು ಹೊತ್ತು ತರುವ ಈ ಸಿನಿಮಾವು ಕೆಲವೇ ದಿನಗಳಲ್ಲಿ ತೆರೆಯಲ್ಲಿ ಮೂಡಿಬರಲಿವೆ.

Write A Comment