ಅಂತರಾಷ್ಟ್ರೀಯ

ಎಂಎಚ್370 ವಿಮಾನ ನಾಪತ್ತೆ ಪ್ರಕರಣ 58 ಘನ ವಸ್ತುಗಳು ಪತ್ತೆ

Pinterest LinkedIn Tumblr

malaysia_airlines

ಕೌಲಾಲಂಪುರ, ಸೆ.14: ಕೌಲಾಲಂಪುರದಿಂದ ಬೀಜಿಂಗ್‌ಗೆ 239 ಮಂದಿಯನ್ನು ಹೊತ್ತು ಸಾಗಿದ್ದ ವೇಳೆ ಮಾರ್ಚ್ 8ಂದು ನಾಪತ್ತೆಯಾಗಿದ್ದ ಮಲೇಶ್ಯ ಏರ್‌ಲೈನ್ಸ್‌ನ ಎಂಎಚ್370 ವಿಮಾನದ ಶೋಧ ಕಾರ್ಯದಲ್ಲಿ ತೊಡಗಿರುವ ತಜ್ಞರ ತಂಡವು ಹಿಂದೂಮಹಾಸಾಗರ ಪ್ರದೇಶದಲ್ಲಿ 58 ಘನವಸ್ತುಗಳನ್ನು ಪತ್ತೆಹಚ್ಚಿದ್ದು, ಕಳೆದ ಆರು ತಿಂಗಳುಗಳಿಂದ ನಿಗೂಢವಾಗಿಯೇ ಉಳಿದಿರುವ ವಿಮಾನ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವೊಂದು ಲಭಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.

ಪತ್ತೆ ಹಚ್ಚಲಾಗಿರುವ ವಸ್ತುಗಳನ್ನು ‘ಜಾಯಿಂಟ್ ಏಜೆನ್ಸಿ ಕೋಆರ್ಡಿನೇಶನ್ ಸೆಂಟರ್’ ಸಂಗ್ರಹಿಸುತ್ತಿದ್ದು, ಶೀಘ್ರದಲ್ಲೇ ಅವುಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗುವುದು ಎಂದು ಮಲೇಶ್ಯದ ಸಾರಿಗೆ ಸಚಿವರು ತಿಳಿಸಿದ್ದಾರೆ.

‘‘ನಾವು 58 ಘನವಸ್ತುಗಳನ್ನು ಪತ್ತೆಹಚ್ಚಿರುವುದು ಮಾತ್ರ. ಆದರೆ ಇವು ನಾಪತ್ತೆಯಾಗಿದ ಮಲೇಶ್ಯ ಏರ್‌ಲೈನ್ಸ್‌ನ ವಿಮಾನದ್ದೇ ಎಂದು ಇನ್ನಷ್ಟೆ ತಿಳಿಯಬೇಕಾಗಿದೆ. ಈ ವಸ್ತುಗಳು ವಿಮಾನದ ಭಗ್ನಾವಶೇಷಗಳೇ ಅಥವಾ ಬಂಡೆಗಲ್ಲಿನ ಚೂರುಗಳೇ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕಾಗಿದೆ.’’ ಎಂದವರು ರವಿವಾರ ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದ್ದಾರೆ.

Write A Comment