Uncategorized

20ನೇ ವಾರ್ಷಿಕೋತ್ಸವ : ಇಸ್ಕಾನ್ – ಶ್ರೀ ಕೃಷ್ಣ – ಬಲರಾಮ ರಥಯಾತ್ರಾ ಉತ್ಸವ ಸಂಪನ್ನ

Pinterest LinkedIn Tumblr

ಮಂಗಳೂರು : ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ ಸಂಸ್ಥೆ ನಗರದ ಶಾಖೆಯ ಆಶ್ರಯದಲ್ಲಿ “20ನೇ ವಾರ್ಷಿಕ ಶ್ರೀ ಶ್ರೀ ಕೃಷ್ಣ ಬಲರಾಮ ರಥಯಾತ್ರಾ ಉತ್ಸವ”ವು ತಾ. 10.02.2024 ರಂದು ನಗರದ ಪಿ.ವಿ.ಎಸ್. ಕಲಾಕುಂಜ್ ಸಂಕೀರ್ಣದಲ್ಲಿ ಸಂಭ್ರಮ ಮತ್ತು ಸಡಗರದಿಂದ ಜರಗಿತು.

ಶ್ರೀ ಕೃಷ್ಣ ಬಲರಾಮರ ವಿಶೇಷ ಮಹಾಪೂಜೆಯ ವಿಧಿ ವಿಧಾನ ಬಳಿಕ ಸಾಂಕೇತಿಕವಾಗಿ ರಥಯಾತ್ರೆಗೆ ಚಾಲನೆ ನೀಡಲಾಯಿತು. ಇಸ್ಕಾನ್ ಹುಬ್ಬಳ್ಳಿ ಸಂಸ್ಥೆಯ ಅಧ್ಯಕ್ಷರಾದ ರಾಜೀವ ಲೋಚನ ದಾಸ ಧಾರ್ಮಿಕ ಪ್ರವಚನ ನೀಡಿ ರಥಾ ಯಾತ್ರೆಯ ಉದ್ದೇಶ ಮಹತ್ವವನ್ನು ವಿವರಿಸಿ, ಶ್ರದ್ಧೆ, ಭಕ್ತಿ-ಭಾವ, ಆಚಾರ-ವಿಚಾರಗಳನ್ನು ಇಂದಿನ ಜನತೆ ಮೈಗೂಡಿಸಿಕೊಳಲು ಇಂತಹ ಉತ್ಸವಗಳು ಪ್ರೇರಣೆಯಾಗಲಿವೆ ಎಂದು ನುಡಿದರು.

ಅಳ್ವಾಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ವಿವೇಕ್ ಆಳ್ವ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಕ್ತಾಭಿಮಾನಿಗಳಿಗೆ ಭಗವಂತನ ಕೃಪೆ ಮತ್ತು ಅನುಗ್ರಹ ಸದಾ ಇರಲಿ ಎಂದು ಆಶಯ ವ್ಯಕ್ತಪಡಿಸಿದರು, ಎ.ಕೆ. ಬನ್ಸಲ್ ಸಂಸ್ಥೆಯ ನಿರ್ದೇಶಕರಾದ ಅಭಿನವ್ ಬನ್ಸಲ್ ಗೌರವ ಅತಿಥಿಯಾಗಿ ಪಾಲ್ಗೊಂಡು ಇಸ್ಕಾನ್ ಸಂಸ್ಥೆಯ ಧಾರ್ಮಿಕ ಕ್ಷೇತ್ರಕ್ಕೆ ಕೊಡುಗೆ ಅಪಾರ ಮತ್ತು ಅಮೂಲ್ಯ ಎಂದು ನುಡಿದರು.

ವೇದಿಕೆಯಲ್ಲಿ ಬೆಂಗಳೂರು ನಗರ ಇಸ್ಕಾನ್ ಸಂಸ್ಥೆಯ ಶ್ರೀ ಶ್ರೀಧಾಮ್ ಕೃಷ್ಣ ದಾಸ ಮತ್ತು ಶ್ರೀ ತತ್ವದರ್ಶನ ದಾಸ ಉಪಸ್ಥಿತರಿದ್ದರು. ದಾನಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ನಗರದ ಇಸ್ಕಾನ್ ಸಂಸ್ಥೆಯ ಅಧ್ಯಕ್ಷ ಶ್ರೀ ಗುಣಕರ ರಾಮದಾಸ ಸ್ವಾಗತಿಸಿದರು. ಉಪಾಧ್ಯಕ್ಷ ಸನಂದನ ದಾಸ ವಂದಿಸಿದರು. ಶ್ರೀಮತಿ ವಿದ್ಯಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ಶ್ರೀ ಶ್ರೀ ಕೃಷ್ಣ ಬಲರಾಮರ ವಿಗ್ರಹ/ಮೂರ್ತಿಗಳನ್ನು ಹೊತ್ತ ವೈವಿಧ್ಯಮಯ ಪುಷ್ಪಗಳಿಂದ ಮತ್ತು ವಿಧ್ಯುನ್ಮಾನ ಅಲಂಕೃತಗೊಂಡ ಭವ್ಯ ರಥಯಾತ್ರೆಯು ಪಿ.ವಿ.ಎಸ್. ಸಂಕೀರ್ಣದಿದ ಮೆರವಣಿಗೆಯಲ್ಲಿ ಭಕ್ತಾಭಿಮನಿಗಳು, ಅನುಯಾಯಿಗಳು ಶ್ರದ್ಧಾ-ಭಕ್ತಾಭಿಮಾನದಿಂದ ‘ಹರೇ ಕೃಷ್ಣ ಹರೇ ರಾಮ’ ಜಪದೊಂದಿಗೆ ಭಜನೆ-ಸಂಕೀರ್ತನೆ-ನೃತ್ಯ-ವಾದ್ಯಗಳೊಂದಿಗೆ ನಗರದ ಪ್ರಮುಖ ರಸ್ತೆಯುದ್ದಕ್ಕೂ ಎಳೆದು ಸಾಗಿಸಲಾಯಿತು.

ಭಕ್ತಾದಿಗಳು/ಸಾರ್ವಜನಿಕರು ಹರ್ಷೋದ್ಗಾರ ಮತ್ತು ಸಂಭ್ರಮದಿಂದ ಈ ಮೆರವಣಿಗೆಯಲ್ಲಿ ಭಾಗವಹಿಸಿ, ಶೋಭಾಯತ್ರೆಯುದ್ದಕ್ಕೂ ಫಲ-ಪುಷ್ಪ ಮಂಗಳಾರತಿಯನ್ನು ಶೀ ಕೃಷ್ಣ ಬಲರಾಮ ಪರಮಾತ್ಮರಿಗೆ ಅರ್ಪಿಸಿದರು. ಬಳಿಕ ಭೋಜನ/ನೈವೇದ್ಯ ಪ್ರಸಾದದ ವಿತರಣೆಯು ಸುಗಮವಾಗಿ ನಡೆಯಿತು.

Comments are closed.