Uncategorized

ಕಾವೂರು ಪೊಲೀಸರ ಕಾರ್ಯಾಚರಣೆ : ಬೃಹತ್ ಪ್ರಮಾಣದ ಗಾಂಜಾ ವಶ – ಇಬ್ಬರ ಸೆರೆ

Pinterest LinkedIn Tumblr

ಮಂಗಳೂರು : ದಿನಾಂಕ 30-05-2023ರಂದು ಮಂಗಳೂರು ನಗರದ ಮೂಡುಶೆಡ್ಡೆ ಗ್ರಾಮದ ಅದ್ಯಪಾಡಿ ಡ್ಯಾಂನ ಫಲ್ಗುಣಿ ತೀರದ ಬಳಿ ಇಬ್ಬರು ಯುವಕರು ಬೃಹತ್ ಪ್ರಮಾಣದಲ್ಲಿ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಕಾವೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು 300000 ರೂಪಾಯಿ ಮೊಲ್ಯದ 10 ಕೆ.ಜಿ 125 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಅಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಸಾಹೀಲ್ (19) ಹಾಗೂ ಮಂಗಳೂರು ಹೊರವಲಯದ ಸೋಮೇಶ್ವರ ಸಂಕೋಲಿಗೆ ನಿವಾಸಿ ಪಿ. ಮನ್ಸೂರ್ (21) ಎಂದು ಗುರುತಿಸಲಾಗಿದೆ.

ಮಂಗಳೂರು ನಗರದ ಪೊಲೀಸ್ ಅಯುಕ್ತರ ನಿರ್ದೇಶನದಂತೆ ನಡೆದ ಈ ಪತ್ತೆ ಕಾರ್ಯಾಚರಣೆಯನ್ನು ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಫರಾದ ಮತ್ತು ಸಂಚಾರ ವಿಭಾಗದ ಡಿಸಿಪಿಗಳ ಮಾರ್ಗದರ್ಶನದಲ್ಲಿ ಉತ್ತರ ಉಪವಿಭಾಗದ ಎಸಿಪಿ ಮನೋಜ್ ಕುಮಾರ್ ರವರ ನೇತ್ರತ್ವದಲ್ಲಿ ನಡೆದಿದ್ದು, ಕಾವೂರು ಪೊಲೀಸ್ ನಿರೀಕ್ಷಕರಾದ ಗುರುರಾಜ್ ಮತ್ತು ಪಿಎಸ್ ಐ ರಘುನಾಯಕ್ ಹಾಗೂ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

Comments are closed.