Uncategorized

135 ಕೋಟಿಗೆ ಸಂಭಾವನೆ ಹೆಚ್ಚಿಸಿಕೊಂಡ ಬಾಲಿವುಡ್ ನಟ ಅಕ್ಷಯ್​ ಕುಮಾರ್​..!

Pinterest LinkedIn Tumblr

ಬಾಲಿವುಡ್​ ಆ್ಯಕ್ಷನ್​ ಕಿಂಗ್​ ಅಕ್ಷಯ್​ ಕುಮಾರ್ ಸದ್ಯ ಬಿ-ಟೌನ್​ನಲ್ಲಿ ಓಡುವ ಕುದುರೆ. ಮಾಡಿದ ಸಿನಿಮಾಗಳೆಲ್ಲ ಹಿಟ್​ ಆಗುತ್ತಿವೆ. ವರ್ಷಕ್ಕೆ 2-3 ಸಿನಿಮಾಗಳನ್ನು ಮಾಡುತ್ತಿರುವ ಅಕ್ಷಯ್​ ಕುಮಾರ್​ ಬಾಕ್ಸಾಫಿಸ್​ನಲ್ಲಿ ರಾಜ್ಯಭಾರ ಮಾಡುತ್ತಿದ್ದಾರೆ. ಅಲ್ಲದೆ ಒಂದರ ಹಿಂದೆ ಒಂದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಸಾಲು ಸಾಲು ಸಿನಿಮಾಗಳಿಂದ ಆಫರ್ ಸಿಗುತ್ತಿದೆ. ಇದರಿಂದಾಗಿಯೇ ಸದ್ಯ ಬಾಲಿವುಡ್​ನಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ನಟರಾಗಿದ್ದಾರೆ. ಕೊರೋನಾ ಲಾಕ್​​ಡೌನ್​ ವೇಳೆ ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಕೋಟ್ಯಂತ ರೂಪಾಯಿ ನೆರವು ನೀಡಿದ್ದರು. ಲಾಕ್​ಡೌನ್​ನಲ್ಲೇ ಸಿನಿಮಾ ಚಿತ್ರೀಕರಣದ ಆರಂಭಿಸಿ, ಅದು ಸಂಪೂರ್ಣವಾಗಿ ಅನ್​ಲಾಕ್​ ಆಗುವ ಒಳಗೆ ಶೂಟಿಂಗ್​ ಮುಗಿಸಿ ಸುದ್ದಿಯಾಗಿದ್ದರು ಅಕ್ಷಯ್​. ಇನ್ನು ಅಕ್ಷಯ್​ ಒಂದು ಸಿನಿಮಾಗೆ ಪಡೆಯುವ ಸಂಭಾವನೆಯಿಂದಾಗಿ ಹಲವಾರು ಸಲ ಸುದ್ದಿಯಾಗಿದ್ದರು. ಈಗಲೂ ಸಹ ಅಕ್ಷಯ್​ ಕುಮಾರ್​ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ.

ಒಂದು ಸಿನಿಮಾಗೆ ನೂರು ಕೋಟಿ ಸಂಭಾವನೆ ಪಡೆಯುವ ಅಕ್ಷಯ್​ ಕುಮಾರ್ ಈಗ ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ. 2022ರಲ್ಲಿ ಅಕ್ಷಯ್​ ಒಂದು ಸಿನಿಮಾಗೆ 135 ಕೋಟಿ ಸಂಭಾವನೆ ಪಡೆಯಲಿದ್ದಾರೆ.

ಬಾಲಿವುಡ್​ ಹಂಗಾಮ ಮಾಡಿರುವ ವರದಿ ಪ್ರಕಾರ ಅಕ್ಷಯ್​ 2022ರಲ್ಲಿ ಒಂದು ಸಿನಿಮಾಗೆ 135 ಕೋಟಿ ಸಂಭಾವನೆ ಪಡೆಯಲು ನಿರ್ಧರಿಸಿದ್ದಾರೆಂತೆ. ಅಕ್ಷಯ್​ ಕುಮಾರ್ ಅವರಿಗೆ ಇಂಡಸ್ಟ್ರಿಯಲ್ಲಿರುವ ಹೆಸರನ್ನು ಬಳಸಿಕೊಂಡು ಲಾಭ ಮಾಡಲು ನಿರ್ಮಾಪಕರು ಮುಂದಾಗುತ್ತಿದ್ದಾರಂತೆ. ಅದರಲ್ಲೂ ಅಕ್ಷಯ್​ ಕುಮಾರ್ ಕೇಳಿದಷ್ಟು ಸಂಭಾವನೆ ನೀಡಲು ಸಹ ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದಾರೆ.

ಈ ಹಿಂದೆ 99 ಕೋಟಿ ಸಂಭಾವನೆ ಪಡೆಯುತ್ತಿದ್ದ ಅಕ್ಷಯ್​ ನಂತರ 108 ಕೋಟಿಯಿಂದ 117 ಕೋಟಿಗೆ ಬಂದು ನಿಂತಿದ್ದಾರೆ. ಇತ್ತೀಚೆಗೆ ಸಹಿ ಮಾಡಿರುವ ಸಿನಿಮಾಗಳಿಗೆ 117 ಕೋಟಿ ಸಂಭಾವನೆ ಪಡೆದಿದ್ದಾರಂತೆ ಅಕ್ಷಯ್​ ಕುಮಾರ್​.
ಅಕ್ಷಯ್​ ಕುಮಾರ್​ ಅಭಿನಯದ ಸಿನಿಮಾಗಳ ಪ್ರೊಡಕ್ಷನ್​ ಬಜೆಟ್​ 35-45 ಕೋಟಿ, ಪ್ರಿಂಟ್​ ಹಾಗೂ ಪ್ರಚಾರದ ವೆಚ್ಚ 15 ಕೋಟಿ. ಎಲ್ಲ ಸೇರಿ ಇಡೀ ಸಿನಿಮಾಗೆ 60-55 ಕೋಟಿ ವೆಚ್ಚವಾಗಲಿದೆ. ಇದರ ಜೊತೆಗೆ ಅಕ್ಷಯ್​ ಕಯಮಾರ್​ ಅವರ ಸಂಭಾವನೆ ಸೇರಿಸಿದರೆ ಚಿತ್ರದ ಒಟ್ಟಾರೆ ಬಜೆಟ್​ 185 ರಿಂದ 195 ಕೋಟಿಯಾಗುತ್ತದೆ.

2020ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಅಕ್ಷಯ್​ ಕುಮಾರ್​ ಎಂದು ರ್ಫೋಬ್ಸ್​​ ಪ್ರಕಟಿಸಿದೆ. ಅಕ್ಷಯ್​ ಕುಮಾರ್​ ಅಭಿನಯದ ಜೊತೆಗೆ ಸಿನಿಮಾ ನಿರ್ಮಾಣಗಳನ್ನೂ ಮಾಡುತ್ತಿದ್ದಾರೆ. ಸದ್ಯ ಸೂರ್ಯವಂಶಿ, ಅತ್ರಂಗಿ ರೇ, ಪೃಥ್ವಿರಾಜ್​, ರಾಮ್​ ಸೇತು, ಮಿಷನ್​ ಲಯನ್​, ರಕ್ಷಾ ಬಂಧನ್​ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳು ಮುಂದಿನ 2 ವರ್ಷಗಳಲ್ಲಿ ರಿಲೀಸ್​ ಆಗಲಿವೆ.

Comments are closed.