Uncategorized

ಸುಕನ್ಯಾ ಸಮೃದ್ಧಿ ಯೋಜನೆ : ರೂ. 37 ಸಾವಿರವನ್ನು 37 ಹೆಣ್ಣು ಮಕ್ಕಳ ಹೆಸರಿನಲ್ಲಿ ಠೇವಣಿ ಇರಿಸಿದ ಶಾಸಕ ಕಾಮಾತ್

Pinterest LinkedIn Tumblr

ಮಂಗಳೂರು, ನವೆಂಬರ್.12: ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ಮಹತ್ವಕಾಂಕ್ಷಿ ಯೋಜನೆಯಾದ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ್ ಕಾಮತ್ ರವರು ತಮ್ಮ ವೈಯುಕ್ತಿಕ ನೆಲೆಯಲ್ಲಿ ತಲಾ 1000 ರೂಪಾಯಿಯಂತೆ 37 ಹೆಣ್ಣು ಮಕ್ಕಳ ಹೆಸರಿನಲ್ಲಿ ಠೇವಣಿ ಇರಿಸುವ ಮೂಲಕ ಚಾಲನೆ ನೀಡಿದರು.

ಈ ಯೋಜನೆಯ ಪಾಸ್ ಪುಸ್ತಕವನ್ನು ಬಿಜೆಪಿಯ ದ.ಕ. ಜಿಲ್ಲಾಧ್ಯಕ್ಷರಾದ ಸುದರ್ಶನ ಮೂಡಬಿದ್ರೆ ಇವರು ಬುಧವಾರ ನಗರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿತರಿಸಿದರು.

ಈ ಸಂದರ್ಭ ಶಾಸಕರಾದ ವೇದವ್ಯಾಸ್ ಕಾಮತ್, ಪಕ್ಷದ ಪ್ರಮುಖರಾದ ವಿಜಯಕುಮಾರ್ ಶೆಟ್ಟಿ, ಸಂತೋಷ್ ರೈ, ಕಸ್ತೂರಿ ಪಂಜ, ಮಂಗಳ ಆಚಾರ್ಯ, ರೂಪ ಬಂಗೇರ, ಪೂರ್ಣಿಮ ರಾವ್, ಸೇವಂತಿ ಶ್ರೀಯಾನ್, ಆಶಾ ಡಿ ಸಿಲ್ವಾ, ಪೂರ್ಣಿಮ ಮುಂತಾದವರು ಉಪಸ್ಥಿತರಿದ್ದರು.

Comments are closed.