Uncategorized

ಕೊರೋನಾ ನಿಧಿ ಸಂಗ್ರಹಕ್ಕೆ ತನ್ನ ನಗ್ನ ಭಾವಚಿತ್ರ ಹರಾಜಿಗಿಟ್ಟ ನಟಿ!

Pinterest LinkedIn Tumblr


ಮಹಾಮಾರಿ ಕೊರೋನಾ ವಿರುದ್ಧ ಹೋರಾಟಕ್ಕಾಗಿ ಅನೇಕ ನಟ-ನಟಿಯರು ಕೈ ಜೋಡಿಸಿದ್ದಾರೆ. ಇನ್ನು ಕೆಲವರು ಸಂಕಷ್ಟದಲ್ಲಿರುವವರಿಗಾಗಿ ಪರಿಹಾರ ನಿಧಿ ಸಂಗ್ರಹಿಸುವ ಮೂಲಕ ಅವರ ನೆರವಿಗೆ ಧಾವಿಸಿದ್ದಾರೆ. ಅದರಂತೆ ಹಾಲಿವುಡ್​​​ ನಟಿ ಜೆನ್ನಿಫರ್​​ ಅನಿಸ್ಟನ್​​ ತನ್ನ ನಗ್ನ ಭಾವಚಿತ್ರವನ್ನು ಹರಾಜು ಹಾಕುವ ಮೂಲಕ ನಿಧಿ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಜೆನ್ನಿಫರ್​​ ಅನಿಸ್ಟನ್ ತನ್ನ 25 ವರ್ಷದ ನಗ್ನ ಭಾವಚಿತ್ರವನ್ನು ಮಾರಾಟ ಮಾಡಲು ಮುಂದಾಗಿದ್ದು, ಆ ಮೂಲಕ ಕೊರೋನಾ ವೈರಸ್​ಗಾಗಿ ಪರಿಹಾರ ನಿಧಿ ಸಂಗ್ರಹಿಸಲು ಚಿಂತಿಸಿದ್ದಾರೆ. 1995ರ ನವೆಂಬರ್​ ತಿಂಗಳಿನಲ್ಲಿ ಮಾರ್ಕ್​ ಸೆಲೆಗರ್​ ಎಂಬಾತ ಈ ಚಿತ್ರವನ್ನು ಸೆರೆಹಿಡಿದಿದ್ದಾರೆ.

ನಗ್ನ ಫೋಟೋ ಹರಾಜು ಕುರಿತು ಜೆನ್ನಿಫರ್​​ ಅನಿಸ್ಟನ್ ತನ್ನ ಇನ್​ಸ್ಟಾಗ್ರಾಂ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ನನ್ನ ಗೆಳೆಯರಾದ ಮಾರ್ಕ್​ಸೆಲೆಗರ್​​, ರಾಡ್​​ವೊಕಸಿ ಮತ್ತು ಕ್ರಿಸ್ಟಿಸಿಂಕ್​​​​ ಸೇರಿದಂತೆ ನನ್ನ ಭಾಚಚಿತ್ರವನ್ನು ಸೇರಿಸಿ ಒಟ್ಟು 25 ಫೋಟೋಗಳನ್ನು ಹರಾಜು ಹಾಕಲಿದ್ದೇವೆ. ಕೊರೋನಾ ವೈರಸ್​​ ನಿಧಿ ಸಂಗ್ರಹಕ್ಕಾಗಿ ಎಂದು ಅಡಿಬರಹ ಬರೆದಿದ್ದಾರೆ.

ಭಾವಚಿತ್ರಗಳ ಹರಾಜಿನಲ್ಲಿ ಬಂದ ಆದಾಯದಲ್ಲಿ ಶೇ 100ರಷ್ಟು ಆದಾಯ ಎನ್ಎ​ಎಫ್​​ ಚಿಕಿತ್ಸಾಲಯಕ್ಕೆ ಹೋಗುತ್ತದೆ. ಎನ್​ಎಎಫ್​​ ಕ್ಲಿನಿಕ್​​ ಬಡ ರೋಗಿಗಳಿಗೆ ಆರೈಕೆ ಮಾಡುತ್ತಿದೆ. ಹಾಗಾಗಿ ಅವರ ವೈದ್ಯಕೀಯ ವೆಚ್ಚವನ್ನು ಭರಿಸಲು ಮತ್ತು ಉಚಿತ ಕೊರೋನಾ ವೈರಸ್​​ ಪರೀಕ್ಷೆಗಾಗಿ ಈ ರೀತಿ ನಿಧಿ ಸಂಗ್ರಹ ಮಾಡುತ್ತಿದ್ದೇವೆ ಎಂದಿದ್ದಾರೆ.

ಇನ್ನು ಹರಾಜು ಪ್ರಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ನನ್ನ ಬಯೋಲಿಂಕ್​​ ಫಾಲೋ ಮಾಡಿ. ಇದೊಂದು ಅವಕಾಶ ನೀಡಿದ ಮಾರ್ಕ್​ಗೆ ನನ್ನ ಧನ್ಯವಾದಗಳು ಎಂದು ಜೆನ್ನಿಫರ್​ ತಮ್ಮ ಇನ್​​​ಸ್ಟಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Comments are closed.