Uncategorized

ಠಾಕ್ರೆ ಅಯೋಧ್ಯೆ ಭೇಟಿ: ನಮ್ಮ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆಯಿಲ್ಲ- ಶಿವಸೇನೆ

Pinterest LinkedIn Tumblr


ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರು ತಮ್ಮ ಸರಕಾರ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ ಅಯೋಧ್ಯೆಗೆ ತೆರಳಿದ ಸಂದರ್ಭದಲ್ಲಿ ಪಕ್ಷವು ತನ್ನ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಪುನರುಚ್ಚರಿಸಿದೆ. ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ತನ್ನ ಮಾಜಿ ಮಿತ್ರಪಕ್ಷವಾದ ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿರುವ ಶಿವಸೇನೆಯು, ಭಗವಾನ್‌ ಶ್ರೀರಾಮ ಮತ್ತು ಹಿಂದುತ್ವ ಯಾವುದೇ ರಾಜಕೀಯ ಪಕ್ಷದ ಆಸ್ತಿಯಲ್ಲ ಎಂದು ಕಿಡಿಕಾರಿದೆ.

ಎನ್‌ಸಿಪಿ ಮತ್ತು ಕಾಂಗ್ರೆಸ್‌ ಅನ್ನು ಒಳಗೊಂಡ ಮಹಾ ವಿಕಾಸ ಆಘಾಡಿ ಸರಕಾರವು 100 ದಿನಗಳನ್ನು ಪೂರೈಸಿದೆ. ಇದು ಈ ನೂತನ ಸಮ್ಮಿಶ್ರ ಸರಕಾರವು 100 ಗಂಟೆಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹೇಳಿಕೊಂಡವರಿಗೆ ಬೇಸರದ ಸಂಗತಿಯಾಗಿದೆ ಎಂದು ಉದ್ಧವ್‌ ಠಾಕ್ರೆ ನೇತೃತ್ವದ ಪಕ್ಷವು ಕುಟುಕಿದೆ.

ಕೇವಲ 80 ಗಂಟೆಗಳ ಕಾಲ ಸರಕಾರವನ್ನು ನಡೆಸಿದವರು ಠಾಕ್ರೆ ಸರಕಾರ 100 ಗಂಟೆಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ, ಪ್ರಸಕ್ತ ಎಂವಿಎ ಸರಕಾರ ಪ್ರಗತಿ ಸಾಧಿಸಿರುವುದಲ್ಲದೆ, ತನ್ನ ಕಾರ್ಯಕ್ಷಮತೆಯಿಂದ ಜನರ ಮನಸ್ಸಿನಲ್ಲಿ ವಿಶ್ವಾಸವನ್ನು ಬೆಳೆಸಿದೆ ಎಂದು ಸಂಪಾದಕೀಯವು ಕಳೆದ ವರ್ಷದ ನವೆಂಬರ್‌ನಲ್ಲಿ ಕೇವಲ 80 ಗಂಟೆಗಳಿಗೆ ಕುಸಿದು ಬಿದ್ದ ದೇವೇಂದ್ರ ಫಡ್ನವೀಸ್‌ ಸರಕಾರದ‌ ಎರಡನೇ ಅವಧಿಯನ್ನು ಉÇÉೇಖೀಸಿ ಹೇಳಿದೆ. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಅಯೋಧ್ಯೆ ಭೇಟಿ ಸ್ವಾಗತಾರ್ಹವಾಗಿದೆ. ಏಕೆಂದರೆ ಅವರು ಭಗವಾನ್‌ ಶ್ರೀರಾಮನ ಪಾದಗಳಿಗೆ ಸರಕಾರ ಮಾಡಿದ ಕೆಲಸಗಳ ಹೂವುಗಳನ್ನು ಅರ್ಪಿಸುತ್ತಿ¨ªಾರೆ ಎಂದು ಅದು ತಿಳಿಸಿದೆ.

ಸೈದ್ಧಾಂತಿಕವಾಗಿ ಭಿನ್ನವಾದ ಮೂರು ಪಕ್ಷಗಳನ್ನು ಒಳಗೊಂಡ ಮಹಾರಾಷ್ಟ್ರ ಸರಕಾರವು ಸಂವಿಧಾನಕ್ಕೆ ಅನುಗುಣವಾಗಿ ಕೆಲಸಗಳನ್ನು ಮಾಡುತ್ತಿದೆ ಮತ್ತು ಉದ್ಧವ್‌ ಠಾಕ್ರೆ ಅವರು ಅದರ ನೇತೃತ್ವ ವಹಿಸುತ್ತಿದ್ದಾರೆ ಎಂದು ಸಾಮ್ನಾ ಹೇಳಿದೆ. ಠಾಕ್ರೆ ಅವರ ಅಯೋಧ್ಯೆ ಭೇಟಿಯ ಬಗ್ಗೆ ಅವರ ರಾಜಕೀಯ ಪ್ರತಿಸ್ಪರ್ಧಿಗಳು ಅನೇಕ ಪ್ರಶ್ನೆಗಳನ್ನು ಎತ್ತಿ¨ªಾರೆ ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ.

ಸರಕಾರವನ್ನು ಯಾರೂ ಬೆಂಬಲಿಸಬಹುದು ಆದರೆ ಉದ್ಧವ್‌ ಠಾಕ್ರೆ ಮತ್ತು ಶಿವಸೇನೆ ಒಳಗೆ ಮತ್ತು ಹೊರಗಿನಿಂದ ಒಂದೇ ರೀತಿ ಉಳಿಯಲಿದ್ದಾರೆ. ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಭಗವಾನ್‌ ಶ್ರೀರಾಮ ಮತ್ತು ಹಿಂದುತ್ವ ಯಾವುದೇ ಒಂದು ಪಕ್ಷದ ಆಸ್ತಿಯಲ್ಲ ಎಂದು ಅದು ತಿಳಿಸಿದೆ.
ಹಿಂದೂ ಸಮುದಾಯವು ಬಿಜೆಪಿಗೆ ಸಮಾನಾರ್ಥಕವಲ್ಲ ಮತ್ತು ಬಿಜೆಪಿಯನ್ನು ವಿರೋಧಿಸುವುದು ಎಂದರೆ ಹಿಂದೂಗಳನ್ನು ವಿರೋಧಿಸುವುದು ಎಂದರ್ಥವಲ್ಲ ಎಂದು ಆರೆಸ್ಸೆಸ್‌ ಹಿರಿಯ ಮುಖಂಡ ಸುರೇಶ್‌ ಭಯ್ನಾಜಿ ಜೋಶಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಶಿವಸೇನೆಯು, ಅದೇ ರೀತಿಯಲ್ಲಿ ಅಯೋಧ್ಯೆ ಕೂಡ ಎಲ್ಲರಿಗೂ ಸೇರಿದೆ ಎಂದು ಹೇಳಿದೆ. ರಾಮ ಮಂದಿರವನ್ನು ನಿರ್ಮಿಸಲು ದಿವಂಗತ ಬಾಳ್‌ ಠಾಕ್ರೆ ಅವರು ವಿಶ್ವದಾದ್ಯಂತ ಹಿಂದೂಗಳಲ್ಲಿ ವಿಶ್ವಾಸವನ್ನು ಮೂಡಿಸಿದ್ದರು ಎಂದು ಶಿವಸೇನೆ ಪ್ರತಿಪಾದಿಸಿದೆ.

Comments are closed.