ಮಂಗಳೂರು : ಪ್ರಮುಖ ಸಂಘಟಿತ ರೀಟೈಲ್ ಸಮೂಹವಾದ ಟೇಬಲ್ಜ್, ಅಂತರರಾಷ್ಟ್ರೀಯ ಜೀವನಶೈಲಿ ಬ್ರ್ಯಾಂಡ್ ಸರಪಳಿಯಾದ ಯೋಯೋಸವನ್ನು ಶನಿವಾರ ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನಲ್ಲಿ ಆರಂಭಿಸಿತು. ಭಾರತದಲ್ಲಿ ಕಳೆದ ತಿಂಗಳು ಬೆಂಗಳೂರಿನ ವೆಗಾ ಸಿಟಿ ಮಾಲ್ ಮತ್ತು ಆರ್ ಎಮ್ ಜ಼ೆಡ್ ಗೆಲೇರಿಯಾ ಮಾಲ್‌ಗಳಲ್ಲಿ ಯಶಸ್ವಿಯಾಗಿ ಆರಂಭವಾದ ನಂತರ ಇದು ಯೋಯೋಸನ ಮೂರನೇ ಮಳಿಗೆಯಾಗಿದೆ. ಮುಂದಿನ 3 ವರ್ಷಗಳಲ್ಲಿ ಕಾರ್ಯಜಾಲವನ್ನು 150 ಮಳಿಗೆಗಳಿಗೆ ವಿಸ್ತರಿಸುವುದು ಟೇಬಲ್ಜ್‌ನ ಯೋಜನೆಯಾಗಿದೆ.
ಬ್ರ್ಯಾಂಡ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಟೇಬಲ್ಜ್‌ನ ವ್ಯವಸ್ಥಾಪಕ ನಿರ್ವಾಹಕ ಅದೀನ್ ಅಹಮದ್, ತರುಣ ಹಾಗೂ ಸ್ಪಂದನಶೀಲ ಯೋಯೋಸವನ್ನು ಮಂಗಳೂರಿಗೆ ತರಲು ನಮಗೆ ರೋಮಾಂಚನವಾಗಿದೆ, ಭಾರತದಲ್ಲಿ ಇದು ನಮ್ಮ ಮೂರನೆ ಮಳಿಗೆ. ಇಡೀ ಕುಟುಂಬಕ್ಕೆ ಜೀವನಶೈಲಿ ಉತ್ಪನ್ನಗಳಲ್ಲಿ ಮೌಲ್ಯವರ್ಧಿತ ಶಾಪಿಂಗ್ ಅನುಭವ ಒದಗಿಸುವ ನಮ್ಮ ಬದ್ಧತೆಯನ್ನು ನಾವು ಮುಂದುವರಿಸಿದ್ದೇವೆ. ಗ್ರಾಹಕರು ಆರೋಗ್ಯ ಅಥವಾ ಸೌಂದರ್ಯವರ್ಧಕ ಉತ್ಪನ್ನಗಳನ್ನಾಗಲಿ, ಮನೇ ಅಲಂಕಾರ ವಸ್ತುಗಳನ್ನಾಗಲಿ ಅಥವಾ ಲೇಖಾಸಾಮರಿ ಹಾಗೂ ಉಡುಗೊರೆಗಳನ್ನಾಗಲಿ ಎದುರು ನೋಡುತ್ತಿರಲಿ, ಒಟ್ಟಿನಲ್ಲಿ ಅವರು ಗಮನಾರ್ಹ ಉಳಿತಾಯ ಮಾಡುತ್ತಾರೆ ಹಾಗೂ ಪ್ರತಿ ತಿಂಗಳೂ ಹೊಸ ಸರಕುಗಳನ್ನು ಕಾಣುತ್ತಾರೆ. ಎಂದರು.
2014 ರಲ್ಲಿ ಮಾ ಹುವಾನ್ ಅವರಿಂದ ಸ್ಥಾಪಿಸಲ್ಪಟ್ಟ ಯೋಯೋಸೊ, ಅಂತರರಾಷ್ಟ್ರೀಯವಾಗಿ ಪ್ರಖ್ಯಾತವಾಗಿರುವ ಜೀವನಶೈಲಿ ಉತ್ಪನ್ನಗಳ ಬ್ರ್ಯಾಂಡ್. ಚೀನಾದ ಯಿವುನಲ್ಲಿ ಪ್ರಧಾನ ಕಚೇರಿ ಹೊಂದಿದ್ದು ಯಿವು ಥಿಂಕ್ ಟ್ಯಾಂಕ್ಸ್ ಟ್ರೇಡಿಂಗ್ ಕಂ.ಲಿ. ಇದರ ಕಾರ್ಯಾಚರಣೆ ಮಾಡುತ್ತದೆ. ಕೈಗೆಟುಕುವ, ಫ್ಯಾಷನ್ ಆಗಿರುವ ಮತ್ತು ಪ್ರವೃತ್ತಿಶೀಲ ನಿತ್ಯ ಬಳಕೆಯ ಜೀವನಶೈಲಿ ಉತ್ಪನ್ನಗಳನ್ನು ಉತ್ಪನ್ನಗಳ ಕಾರ್ಯಾತ್ಮಕತೆ, ಗುಣಮಟ್ಟ, ವಿನ್ಯಾಸ ಮತ್ತು ಮೌಲ್ಯಗಳ ಸಮ್ಮಿಶ್ರಣವಾಗಿ ಬ್ರ್ಯಾಂಡ್ ಒದಗಿಸುತ್ತದೆ-ಅದೇ ಸಮಯದಲ್ಲಿ ಊರ್ಜಿತ ಬೆಳವಣಿಗೆಯ ತನ್ನ ತತ್ವವನ್ನೂ ಎತ್ತಿಹಿಡಿಯುತ್ತದೆ. ಇಂದು, 35 ದೇಶಗಳಲ್ಲಿ 1000 ಯೋಯೋಸೊ ಮಳಿಗೆಗಳು ೧ ಬಿಲಿಯ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.
ಭಾರತದಲ್ಲಿ ಈ ಬ್ರ್ಯಾಮ್ಡ್ ಅನ್ನು ಪರಿಚಯಿಸುವ ಉದ್ದೇಶದಿಂದ ಟೇಬಲ್ಜ್, ಯೋಯೋಸೊ ಜೊತೆ ಸಹಯೋಗ ಹೊಂದಿತು. ಮುಂದಿನ ಮೂರು ವರ್ಷಗಳಲ್ಲಿ ವಿವಿಧ ಸ್ಥಳಗಳಲ್ಲಿ ಯೋಯೋಸೊನ ಮಳಿಗೆಗಳನ್ನು ಆರಂಭಿಸುವ ಉದ್ದೇಶ ಹೊಂದಿರುವ ಟೇಬಲ್ಜ್, ಮೊದಲ ಹಂತದಲ್ಲಿ 30 ಮಳಿಗೆಗಳನ್ನು ಆರಂಭಿಸುವ ಯೋಜನೆ ಹಾಕಿಕೊಂಡಿದೆ. ಯೋಯೋಸೊನ ಸರಳ, ಸಹಜ, ಉತ್ಕೃಷ್ಟ ಗುಣಮಟ್ಟದ ಹಾಗೂ ಉಚ್ಛ ಮೌಲ್ಯದ ಉತ್ಪನ್ನಗಳು ವಿವೇಚನಾಶೀಲ ಗ್ರಾಹಕರ ಮನಸ್ಸನ್ನು ಗೆದ್ದಿದ್ದು, ಹೊಸ ಪೀಳಿಗೆಯ ಭಾರತಕ್ಕೆ ಅಪಾರ ಆಶ್ಛರ್ಯಗಳನ್ನು ಹಾಗೂ ಸಂತೋಷವನ್ನು ಮೂಡಿಸಿದೆ.
ಸ್ಪರ್ಧಾತ್ಮಕ ಬೆಲೆಗಳಲ್ಲಿ 5000 ಕ್ಕೂ ಹೆಚ್ಚು ಗುಣಮಟ್ಟದ ಉತ್ಪನ್ನಗಳನ್ನು ಹೊಂದಿರುವ ಯೋಯೋಸೊ, ಆರೋಗ್ಯ ಮತ್ತು ಸೌಂದರ್ಯ, ಸೃಜನಾತ್ಮಕ ಗೃಹ ಬಳಕೆ ವಸ್ತುಗಳು, ಋತುಮಾನಿಕ ಉತ್ಪನ್ನಗಳು, ಡಿಜಿಟಲ್ ಉಪಸಾಧನಗಳು, ಲೇಕಾಸಾಮಗ್ರಿ ಹಾಗೂ ಉಡುಗೊರೆಗಳು ಮತ್ತು ಫ್ಯಾಷನ್ ಉಪಸಾಧನಗಳಂಥವೈವಿಧ್ಯ ವರ್ಗಗಳಡಿ ನೂರಾರು ಉತ್ಪನ್ನಗಳನ್ನು ಹೊಂದಿದೆ.
ಪ್ರತಿಯೊಂದು ಯೋಯೋಸೊ ಉತ್ಪನ್ನದ ಮೂಲಭೂತ ಅಂಶಗಳೆಂದರೆ ಸುಂದರವಾಗಿರುವುದರ ಜೊತೆಗೆ ಕಾರ್ಯಾತ್ಮಕವಾಗಿ, ಉಪಯುಕ್ತತೆ ಮತ್ತು ದೀರ್ಘಬಾಳಿಕೆಯಿಂದ ಕೂಡಿವೆ. ವಿನ್ಯಾಸವು ಸರಳತೆ ಹಾಗೂ ಮುಕ್ತ ಮನಸ್ಸಿನನ ಮೇಲೆ ಕೇಂದ್ರೀಕರಿಸುತ್ತಲೇ ಫ್ಯಾಷನ್ ಅಂಶಗಳನ್ನೂ ಗಣನೆಗೆ ತಂದುಕೊಳ್ಳುತ್ತದೆ. ಸಾಂಪ್ರದಾಯಿಕ ಕರಕುಶಲತೆಯನ್ನು ಉಳಿಸಿಕೊಂಡು ನಿರಂತರ ವಿನೂತನ ಪ್ರಯೋಗಳೂ ಸಹ ಯೋಯೋಸನ ಉಚ್ಛ ಗುಣಮಟ್ಟದ ಉತ್ಪನಗಳ ಮೌಲ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿವೆ. ಗ್ರಾಹಕರು ಇತ್ತೀಚಿನ ಪ್ರವೃತ್ತಿಗಳನ್ನು ಆನಂದಿಸಲು ಪ್ರತಿ ತಿಂಗಳೂ 500 ಹೊಸ ಉತ್ಪನ್ನಗಳು ಬಿಡುಗಏಯಾಗುತ್ತಿದ್ದು, ಗುಣಮಟ್ಟದ ಜೀವನಶೈಲಿ ಸಾಗಿಸಲು ಸಾಧ್ಯವಾಗುತ್ತದೆ ಎಂದವರು ವಿವರ ನೀಡಿದರು.
ಏನಿದು ಯೋಯೋಸೊ..
ಅಂತರರಾಷ್ಟ್ರೀಯ ಜೀವನಶೈಲಿ ಮಳಿಗೆಗಳ ಸರಪಳಿಯಾದ ಯೋಯೋಸೊ, ಕೈಗೆಟುಕುವ, ಫ್ಯಾಷನಬಲ್ ಆದ ಮತ್ತು ಟ್ರೆಂಡಿಯಾದ ಜೀವನಶೈಲಿ ಉತ್ಪನ್ನಗಳು ಒದಗಿಸುತ್ತದೆ. ಆರೋಗ್ಯ ಮತ್ತು ಸೌಂದರ್ಯ, ಸೃಜನಾತ್ಮಕ ಗೃಹೋಪಯೋಗಿ ವಸ್ತುಗಳು, ಋತುಮಾನಿಕ ಉತ್ಪನ್ನಗಳು, ಡಿಜಿಟಲ್ ಉಪಸಾಧನಗಳು, ಲೇಖಾಸಾಮಗ್ರಿ ಮತ್ತು ಉಡುಗೊರೆ ಹಾಗೂ ಫ್ಯಾಷನ್ ಉಪಸಾಧ್ನಗಳಂಥ ವೈವಿಧ್ಯಮಯ ವರ್ಗಗಳಲ್ಲಿ ಅತ್ಯುತ್ತಮ ಬೆಲೆ ಮತ್ತು ಕಾರ್ಯಪ್ರದರ್ಶನಗಳೊಂದಿಗೆ ಯೋಯೋಸೊ 5000ಕ್ಕೂ ಹೆಚ್ಚು ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳನ್ನು ಹೊಂದಿದೆ. 1000 ಕ್ಕೂ ಹೆಚ್ಚು ಯೋಯೋಸೊ ಮಳಿಗೆಗಳು 36 ದೇಶಗಳಲ್ಲಿ 1 ಬಿಲಿಯನ್‌ಗೂ ಮೀರಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿವೆ.
ಪ್ರಮುಖ ಸಂಘಟಿತ ರೀಟೈಲ್ ಸಮೂಹವಾಗಿರುವ ಟೇಬಲ್ಜ್, ಭಾರತದಲ್ಲಿ ಪ್ರಮುಖ ಜಾಗತಿಕ ಬ್ರ್ಯಾಮ್ಡ್‌ಗಳಾದ ಎಫ್ ಮತ್ತು ಬಿ ಆಟಿಕೆಗಳು, ಜೀವನಶೈಲಿ ಮತ್ತು ಉಡುಪುಗಳನ್ನು ಪರಿಚಯಿಸಿದೆ. ಸ್ಪ್ರಿಂಗ್‌ಫೀಲ್ಡ್, ವಿಮೆನ್ಸ್ ಸೀಕ್ರೇಟ್ಸ್, ಟಾಯ್ಸ್ ‘ಆರ್’ ಅಸ್, ಬೇಬೀಸ್ ‘ಆರ್’ ಯೂ, ಬಿಲ್ಡ್-ಎ-ಬೇರ್, ಗೋ ಸ್ಪೋರ್ಟ್ ಮತ್ತು ಯೋಯೋಸನಂಥ ಬ್ರ್ಯಾಂಡ್‌ಗಳನ್ನು ದೇಶಕ್ಕೆ ತಂದಿದೆ ಕಂಪನಿ. ಎಫ್ ಮತ್ತು ಬಿ ಕ್ಷೇತ್ರದಲ್ಲಿ, ಕೋಲ್ಡ್ ಸ್ಟೋನ್ ಕ್ರೀಮರಿ ಮತ್ತು ಗ್ಯಾಲಿಟೋಸ್ ಫ್ರಾಂಚೈಸಿ ಹಕ್ಕುಗಳನ್ನು ಹೊಂದಿರುವ ಟೇಬಲ್ಜ್, ತನ್ನ ಸ್ವಂತ ಬ್ರ್ಯಾಂಡ್ ಬ್ಲೂಮ್ಸ್‌ಬರಿಯನ್ನು ಯಶಸ್ವಿಯಗೈ ಅಭಿವೃದ್ಧಿಪಡಿಸಿದೆ. ಜಾಗತಿಕವಾಗಿ 70 ಕ್ಕೂ ಹೆಚ್ಚು ಮಲಿಗೆಗಳನ್ನು ನಡೆಸುತ್ತಿರುವ ಸಂಸ್ಥೆ, 2020ರ ವೇಳೆಗೆ 300 ಮಳಿಗೆಗಳಿಗೆ ವಿಸ್ತರಿಸಲು ಯೋಜಿಸಿದೆ ಎಂದು ಅದೀನ್ ಅಹಮದ್ ತಿಳಿಸಿದರು.