Uncategorized

ನಾಳೆ ಯಶ್​-ರಾಧಿಕಾ ಮುದ್ದುಮಗಳ ನಾಮಕರಣ

Pinterest LinkedIn Tumblr

ಸ್ಯಾಂಡಲ್​ವುಡ್​ನ ತಾರಾ ಜೋಡಿಗಳಾದ ಯಶ್​- ರಾಧಿಕಾ ಮುದ್ದು ಮಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸುದ್ದಿ ಮಾಡಿದ್ದಾಳೆ. Baby YR ಎಂದೇ ಜನಪ್ರಿಯವಾಗಿರುವ ತಮ್ಮ ಮುದ್ದುಮಗಳಿಗೆ ಈಗ ಯಶ್​- ರಾಧಿಕಾ ದಂಪತಿ ಈಗ ಹೆಸರಿಡಲು ಮುಂದಾಗಿದ್ದಾರೆ.

 

ಯಶಿಕಾ, ಬೇಬಿ ಸಿಂಡ್ರೆಲಾ ಮುಂತಾದ ಹೆಸರುಗಳನ್ನು ಅಭಿಮಾನಿಗಳು ಈಗಾಗಲೇ ಸೂಚಿಸಿದ್ದಾರೆ. ಆದರೆ, ಅಂತಿಮವಾಗಿ ತಮ್ಮ ಮಗಳಿಗೆ ಏನು ಹೆಸರನ್ನು ಈ ರಾಕಿಂಗ್​ ಜೋಡಿ ಇಡುತ್ತಾರೆ ಎಂಬ ಕಾತುರತೆ ಅಭಿಮಾನಿಗಳಲ್ಲಿ ಮೂಡಿದೆ.

 

ತಮ್ಮ ಮುದ್ದುಮಗಳಿಗೆ ಯಾವ ಹೆಸರಿಡಲಿದ್ದಾರೆ ಎಂಬ ಕುತೂಹಲಕ್ಕೆ ರಾಮಾಚಾರಿ ಜೋಡಿ ತೆರೆ ಎಳೆಯಲು ಸಜ್ಜಾಗಿದ್ದು ಇದೇ ಭಾನುವಾರ ತಮ್ಮ ಮುದ್ದಿನ ಮಗಳಿಗೆ ನಾಮಕರಣ ದಿನಾಂಕ ನಿಗದಿ ಮಾಡಿದ್ದಾರೆ. ಜೂ.23ರಂದು ‘ತಾಜ್​ ವೆಸ್ಟ್​ ಎಂಡ್’​ ಹೋಟೆಲ್​ನಲ್ಲಿ ಹೆಸರಿಡಲು ನಿರ್ಧರಿಸಿದ್ದು, ಈ ಸಿಹಿ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

ಕಳೆದ ಡಿಸೆಂಬರ್ 2ರಂದು ಮುದ್ದು ಮಗುವಿಗೆ ಜನ್ಮ ನೀಡಿದ್ದ ರಾಧಿಕಾ, ಅಕ್ಷಯ ತೃತೀಯ ದಿನದಂದು ಮಗಳ ಮೊದಲ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇನ್ನು ತಮ್ಮ ಇಬ್ಬರ ಹೆಸರಿನ ಎರಡಕ್ಷರದಲ್ಲಿಯೇ ಹೆಸರನ್ನು ಇಡುವ ಸುಳಿವನ್ನು ಈಗಾಗಲೇ ರಾಧಿಕಾ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಪ್ಪ-ಅಮ್ಮನ ಹೆಸರನ್ನು ಸೇರಿ ಮಕ್ಕಳಿಗೆ ಹೆಸರಿಡುವ ಟ್ರೆಂಡ್​ ಸೃಷ್ಟಿಯಾಗಿದ್ದು ರಾಕಿ ಭಾಯ್​ ತಮ್ಮ ಮಗಳಿಗೆ ಏನೆಂದು ಹೆಸರಿಡುತ್ತಾರೆ ಕಾದು ನೋಡಬೇಕಿದೆ.

 

Comments are closed.