ಚಿಕ್ಕೋಡಿ: ಮಳೆಗಾಗಿ ಪ್ರಾರ್ಥಿಸಿ ಮುಳ್ಳಿನ ಗಿಡ ಏರಿದ ಸ್ವಾಮೀಜಿ, ಮಳೆ ಬರುವರೆಗೂ ಗಿಡದಿಂದೆ ಕೆಳಗೆ ಇಳಿಯಲ್ಲ ಎಂದು ಹೇಳುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಹೊರವಲಯದಲ್ಲಿರುವ ಜಂಬಗಿ ಗ್ರಾಮದ ಸುರೇಶ್ ಮಹರಾಜ್ ಎಂಬುವರಿಂದ ಮುಳ್ಳಿನ ಗಿಡ ಏರಿ ಮಳೆಗಾಗಿ ಪ್ರಾರ್ಥನೆ ಮಾಡಲಾಗುತ್ತಿದೆ.
ಮುಳ್ಳುಕಂಟಿಯ ಮೇಲೆ ಮಲಗಿದ ಸ್ವಾಮೀಜಿ
ಬಾಬಾಸಾಬ್ ಪಾಟೀಲ ಎಂಬುವರ ಜಮೀನಿನಲ್ಲಿ ಮುಳ್ಳುಕಂಟಿಯ ಮೇಲೆ ಮಲಗಿದ ಸ್ವಾಮೀಜಿ. ಮೊದಲು ಗಿಡದ ಕೆಳಗೆ ಪೂಜೆ ಮಾಡಿ ಗಿಡ ಏರಿ ಕುಳಿತರು. ಸುರೇಶ್ ಮಹಾರಾಜ ಸ್ವಾಮಿಜಿಯನ್ನು ನೋಡಲು ಸಾಕಷ್ಟು ಜನ ಆಗಮಿಸುತ್ತಿದ್ದಾರೆ. ಇನ್ನೂ ಸ್ಥಳದಲ್ಲಿ ನೂರಾರು ಜನರು ನೆರೆದಿದ್ದಾರೆ.
Comments are closed.