Uncategorized

ರಮೇಶ್ ಜಾರಕಿಹೊಳಿಯನ್ನು ಕೈಬಿಡದ ಕುಮಾರಸ್ವಾಮಿ!

Pinterest LinkedIn Tumblr


ರಮೇಶ್ ಜಾರಕಿಹೊಳಿ ನಡೆ ಇನ್ನೂ ನಿಗೂಢ. ಇತ್ತ ಪಕ್ಷವನ್ನೂ ತೊರೆದಿಲ್ಲ..ಅತ್ತ ಬಿಜೆಪಿಗೆ ಹೋಗ್ತಿಲ್ಲ, ಇದು ದೋಸ್ತಿಗೆ ತಲೆನೋವು ತಂದಿಟ್ಟಿದೆ. ಅಧಿಕಾರದ ಕನಸು ಕಾಣ್ತಿರೋ ಕಮಲ ನಾಯಕರಿಗೂ ಕಿರಿಕಿರಿ ಉಂಟು ಮಾಡಿದೆ.

ರಮೇಶ್ ಜಾರಕಿಹೊಳಿ ಟೀಂ ಕಾಂಗ್ರೆಸ್​ಗೆ ಕೈಕೊಡುತ್ತೆ, ಬಿಜೆಪಿಗೆ ಹಾರುತ್ತೆ, ಸಮ್ಮಿಶ್ರ ಸರ್ಕಾರ ಉಡೀಸ್ ಆಗುತ್ತೆ ಅನ್ನೋ ಮಾತುಗಳು ಜೋರಾಗಿಯೇ ಓಡಾಡ್ತಿದ್ದು. ಲೋಕಸಭಾ ಚುನಾವಣೆ ಬಳಿಕ ಅತೃಪ್ತರ ಸೆಳೆದು ಬಿಜೆಪಿ ಸರ್ಕಾರ ರಚಿಸಿಯೇ ತೀರುತ್ತದೆ ಅನ್ನೋ ಮಾತುಗಳು ಕೇಳಿಬರ್ತಿದ್ದು. ಆದರೆ ಇದ್ದಕ್ಕಿದ್ದಂತೆ ರಮೇಶ್ ಜೊತೆಗಿದ್ದ ಕುಮಟಳ್ಳಿ, ಶ್ರೀಮಂತ್ ಪಾಟೀಲ್, ಪ್ರತಾಪ್ ಗೌಡ ಎಲ್ಲರೂ ಸಿಎಲ್​ಪಿ ಸಭೆಗೆ ಹಾಜರಾಗುವ ಮೂಲಕ ಕಾಂಗ್ರೆಸ್​ನಲ್ಲೇ ಉಳಿದುಕೊಂಡ್ರು. ಆಪ್ತರಿಲ್ಲದೆ ರಮೇಶ್ ಮತ್ತೆ ಏಕಾಂಗಿ ಆಗಿದ್ದಾರೆ. ಆದರೆ, ಇತ್ತ ಕಾಂಗ್ರೆಸ್​ನಲ್ಲೂ ಇರಲಾಗದೆ, ಅತ್ತ ಬಿಜೆಪಿಗೂ ಹೋಗಲಾರದೆ ವಿಲವಿಲ ಒದ್ದಾಡ್ತಿದ್ದಾರೆ. ಬೆಂಗಳೂರಿನ ಸೆವೆನ್ ಮಿನಿಸ್ಟರ್ ಕ್ವಾಟ್ರಸ್​ನಲ್ಲೇ ಬಂಧಿಯಾಗಿದ್ದಾರೆ.

ಈಗಾಗಲೇ ರಮೇಶ್ ಜಾರಕಿಹೊಳಿ ಕಾಂಗ್ರೆಸ್‌ನಿಂದ ಬಹುದೂರ ಹೋಗಿದ್ದಾರೆ. ಬಿಜೆಪಿ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಬೆಂಗಳೂರಿನ ಸೆವೆನ್ ಮಿನಿಸ್ಟರ್ ಕ್ವಾಟ್ರಸ್ ನಿವಾಸಕ್ಕೆ ದಿನಕ್ಕೊಬ್ಬ ಬಿಜೆಪಿ ನಾಯಕರು ಭೇಟಿ ನೀಡಿ ಮಾತುಕತೆ ನಡೆಸುತ್ತಿದ್ದಾರೆ.

ಯಾವುದೇ ವಿಚಾರ ಬಹಿರಂಗಪಡಿಸದೆ ತೆರೆಮರೆಯಲ್ಲೇ ಅತೃಪ್ತರಿಗೆ ಗಾಳ ಹಾಕಲಾಗ್ತಿದೆ. ಹೀಗಾಗಿಯೇ ಇಂದು ಬಳ್ಳಾರಿ ನೂತನ ಬಿಜೆಪಿ ಸಂಸದ ದೇವೇಂದ್ರಪ್ಪ ಆಗಮಿಸಿ ರಮೇಶ್ ಜೊತೆ ಚರ್ಚಿಸಿದ್ದಾರೆ. ಹೆಚ್ಚು ತಡ ಮಾಡದೆ ಆದಷ್ಟು ಬೇಗ ಬಿಜೆಪಿಗೆ ಬರುವಂತೆ ಸಲಹೆಯನ್ನೂ ನೀಡಿದ್ದಾರೆ.

ಬಿಜೆಪಿ ನಾಯಕರು ರಮೇಶ್ ಜೊತೆ ನಿರಂತರ ಸಂಪರ್ಕದಲ್ಲಿರುವುದು ಸಿಎಂ ಕುಮಾರಸ್ವಾಮಿ ಗಮನಕ್ಕೆ ಬಂದಿದೆ. ಹೀಗಾಗಿ, ಕಾಂಗ್ರೆಸ್​ ನಾಯಕರು ಕೈಬಿಟ್ರೂ, ಸಿಎಂ ಕೈಬಿಟ್ಟಿಲ್ಲ. ಇದೀಗ ವಾಲ್ಮೀಕಿ ಪೀಠಾಧಿಪತಿ ಪುಣ್ಯಾನಂದ ಸ್ವಾಮೀಜಿ ಮುಂದೆಬಿಟ್ಟು ಮನವೊಲಿಕೆ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಇಂದು ರಾಜನಹಳ್ಳಿ ಗುರುಪೀಠದ ಸ್ವಾಮೀಜಿ ಸೆವೆನ್ ಮಿನಿಸ್ಟರ್ ಕ್ವಾಟ್ರಸ್​ ನಿವಾಸಕ್ಕೆ ಆಗಮಿಸಿ ರಮೇಶ್ ಜೊತೆ ಅರ್ಧ ಗಂಟೆ ಚರ್ಚೆ ನಡೆಸಿದರು. ಯಾವುದೇ ಕಾರಣಕ್ಕೂ ದುಡುಕದಂತೆ ಸಲಹೆ ಕೂಡ ನೀಡಿದರು.

ಮೇಲ್ನೋಟಕ್ಕೆ ತಟಸ್ಥಗೊಂಡಂತೆ ಕಂಡುಬಂದರು ಆಪ್ತರ ಸೆಳೆಯುವಲ್ಲಿ ರಮೇಶ್ ಜಾರಕಿಹೊಳಿ ನಿರತರಾಗಿದ್ದಾರೆ. ಆದಷ್ಟು ಬೇಗ ಕಾಂಗ್ರೆಸ್​ಗೆ ಗುಡ್ ಬೈ ಹೇಳಿ ಬಿಜೆಪಿಗೆ ಹೋಗಲು ಪ್ರಯತ್ನ ನಡೆಸಿದ್ದಾರೆ. ಇದರ ನಡುವೆ ಸ್ವಾಮೀಜಿ ಮುಂದೆ ಬಿಟ್ಟು ಪಕ್ಷದಲ್ಲೇ ಉಳಿಸಿಕೊಳ್ಳುವ ದೋಸ್ತಿಗಳು ಕಾರ್ಯತಂತ್ರ ನಡೆಸ್ತಿದ್ದಾರೆ. ಸತೀಶ್ – ರಮೇಶ್ ನಡುವೆ ಮನಸ್ತಾಪವಾಗಿದ್ದಾಗ ಇದೇ ಸ್ವಾಮೀಜಿ ಮಧ್ಯಪ್ರವೇಶಿಸಿ ತಣ್ಣಗಾಗಿಸಿದ್ದರು. ಹೀಗಾಗಿ, ಈಗ ಶ್ರೀಗಳ ಮಧ್ಯಪ್ರವೇಶ ಸಾಕಷ್ಟು ಕುತೂಹಲ ಹುಟ್ಟಿಸಿದೆ.

Comments are closed.