ಕರ್ನಾಟಕ

ಅವರ ಕಷ್ಟದಲ್ಲಿ ಭಾಗಿಯಾಗುವುದು ನನ್ನ ಕರ್ತವ್ಯ: ಲಕ್ಷ್ಮೀ ಹೆಬ್ಬಾಳ್ಕರ್

Pinterest LinkedIn Tumblr


ಬೆಳಗಾವಿ : ನಾನೇ ರೈತರ ಮನಸ್ಸನ್ನು ಬದಲಾಯಿಸುತ್ತೇನೆ, ಆದರೆ ರೈತರಿಗೆ ಏನು ಭದ್ರತೆ ಸಿಗುತ್ತೆ ಅನ್ನೋದು ಮೊದಲು ಸ್ಪಷ್ಟವಾಗಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತಕ್ಕೆ ಎರಡು ದಿನ ಗಡವು ನೀಡಿಲಾಗಿದೆ. ಸಭೆ ನಡೆಸಿ ರೈತರ ಭವಿಷ್ಯದ ಬಗ್ಗೆ ಚಿಂತಿಸಬೇಕು. ಇಲ್ಲಾವದಲ್ಲಿ ಎಸ್ ಟಿ ಪಿ ಘಟಕ ಸ್ಥಾಪನೆ ಸ್ಥಳದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆ ನೀಡಿದರು.

ಹಲಗಾ ಗ್ರಾಮದ ರೈತರಿಗೆ ಅನ್ಯಾಯ ಆಗಿದೆ

ಹಲಗಾ ಗ್ರಾಮದ ಬಳಿ S T P ಘಟಕ ಸ್ಥಾಪನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಎಸ್ ಟಿ ಪಿ ಘಟಕ ಸ್ಥಾಪನೆಗೆ ಜಿಲ್ಲಾಡಳಿತ ಬಲವಂತವಾಗಿ ರೈತರ ಭೂಮಿ ಪಡೆದಿದೆ. ಅಭಿವೃದ್ಧಿಗೆ ಯಾವಾಗಲು ನನ್ನ ವಿರೋಧವಿಲ್ಲ. ಅನೇಕ ವಿಚಾರದಲ್ಲಿ ಗ್ರಾಮೀಣ ಕ್ಷೇತ್ರಕ್ಕೆ ಅನ್ಯಾಯವಾಗಿದೆ. ಸುವರ್ಣ ಸೌಧಕ್ಕೆ ಈಗಾಗಲೇ ಹಲಗಾ ಗ್ರಾಮಸ್ಥರು ಭೂಮಿ ನೀಡಿದ್ದಾರೆ.
ಸುವರ್ಣ ಸೌಧಕ್ಕೆ ಭೂಮಿ ನೀಡಿದ ರೈತರಿಗೆ ಒಂದು ಎಕರೆಗೆ 13 ಲಕ್ಷ ಪರಿಹಾರ. STP ಘಟಕಕ್ಕೆ ರೈತರ ಭೂಮಿಗೆ 3 ಲಕ್ಷ ಬೆಲೆ. ಸುವರ್ಣ ಸೌಧದ ಸುತ್ತಮುತ್ತ ಒಂದು ಕಿ ಮೀ ವ್ಯಾಪ್ತಿಯಲ್ಲಿ ಗ್ರೀನ್ ಬೆಲ್ಟ್ ಎಂದು ಘೋಷಣೆ. 9 ದಿನ ಆಯಿತು ರೈತರ ಭೂಮಿ ವಶಕ್ಕೆ ಕಳೆದಿದೆ. ಈ ವರೆಗೆ ಪರಿಹಾರದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹಲಗಾ ಗ್ರಾಮದ ರೈತರಿಗೆ ಅನ್ಯಾಯ ಆಗಿದೆ ಎಂದರು.

ರೈತರ ಕಷ್ಟದಲ್ಲಿ ನಾನು ಭಾಗಿಯಾಗೋದು ನನ್ನ ಧರ್ಮ

ರೈತರ ಕಷ್ಟದಲ್ಲಿ ನಾನು ಭಾಗಿಯಾಗೋದು ನನ್ನ ಧರ್ಮ, ಎಕರೆಗೆ 30 ಲಕ್ಷ ಕೊಡಬಹುದು ಎಂದು ಹೇಳಿದ್ದಾರೆ.
ಆದರೆ ಈ ಬಗ್ಗೆ ರೈತರಿಗೆ ಜಿಲ್ಲಾಡಳಿತ ಭರವಸೆ ನೀಡಿಲ್ಲ. ಜಿಲ್ಲಾಡಳಿತಕ್ಕೆ ಯಾವುದೇ ಹೃದಯ ಇಲ್ಲ. ಜಿಲ್ಲಾ ಸಚಿವರ ನೇತೃತ್ವದಲ್ಲಿ ಸಿಎಂ ಬಳಿಗೆ ನಿಯೋಗ ಕರೆದುಕೊಂಡು ಹೋಗಬೇಕು. ಜಿಲ್ಲಾ ಉಸ್ತುವಾರಿ ಸಚಿವರು ರೈತರ ಪರ ನಿಲ್ಲಿಬೇಕು.
ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಳ್ಳಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ನ್ಯಾಯ ಒದಗಿಸಬೇಕು. ರೈತರ ಮೇಲೆ ದೌರ್ಜನ್ಯ, ಅನ್ಯಾಯ ಆಗಿದೆ. ತುರ್ತಾಗಿ ನಮಗೆ ರೈತರ ಭವಿಷ್ಯದ ಚಿಂತೆಯಾಗಿದೆ. ರೈತರು ಏನೇ ಅನಾಹುತ ಮಾಡಿಕೊಂಡರೆ ಜಿಲ್ಲಾಡಳಿತವೆ ನೇರ ಕಾರಣ ಎಂದು ಆರೋಪ ಮಾಡಿದರು.

Comments are closed.