Uncategorized

8,230 ಡಾಲರ್ ಬಿಲಿಯನ್ ಆಸ್ತಿಯೊಂದಿಗೆ ಭಾರತ ವಿಶ್ವದಲ್ಲೇ 6ನೇ ಅತ್ಯಂತ ಶ್ರೀಮಂತ ರಾಷ್ಟ್ರ!

Pinterest LinkedIn Tumblr


ದೆಹಲಿ: ಒಟ್ಟು 8,230 ಡಾಲರ್ ಬಿಲಿಯನ್ ಆಸ್ತಿಯೊಂದಿಗೆ ಭಾರತ ವಿಶ್ವದಲ್ಲೇ 6ನೇ ಅತ್ಯಂತ ಶ್ರೀಮಂತ ರಾಷ್ಟ್ರ ಎಂದು ವರದಿಯೊಂದು ತಿಳಿಸಿದೆ.

ಆಫ್ರೋ-ಏಷ್ಯಾ ಬ್ಯಾಂಕ್ ಗ್ಲೋಬಲ್ ವೆಲ್ತ್ ಮೈಗ್ರೇಶನ್ ವರದಿಯ ಪ್ರಕಾರ, ಅಮೇರಿಕಾ ಅತ್ಯಂತ ಶ್ರೀಮಂತ ರಾಷ್ಟ್ರವಾಗಿದ್ದು ಒಟ್ಟು 62,584 ಬಿಲಿಯನ್ ಅಮೇರಿಕನ್ ಡಾಲರ್ ಆಸ್ತಿಯೊಂದಿಗೆ ವಿಶ್ವದಲ್ಲೇ ನಂ. 1 ಶ್ರೀಮಂತ ರಾಷ್ಟ್ರ ಎಂದು ಹೇಳಿದೆ. 24,803 ಅಮೇರಿಕನ್ ಡಾಲರ್ ಆಸ್ತಿಯೊಂದಿಗೆ ಚೀನಾ ಎರಡನೇ ಸ್ಥಾನ ಹಾಗೂ 19,522 ಅಮೇರಿಕನ್ ಡಾಲರ್ ಆಸ್ತಿಯೊಂದಿಗೆ ಜಪಾನ್ ಮೂರನೇ ಸ್ಥಾನದಲ್ಲಿದೆ.

ಪ್ರತೀ ದೇಶಗಳ ಖಾಸಗೀ ವ್ಯಕ್ತಿಗಳ ಒಟ್ಟು ಆಸ್ತಿಗಳನ್ನು (ನಗದು, ಷೇರುಗಳು, ವ್ಯವಹಾರದ ಆಸಕ್ತಿಗಳು) ಸೇರಿಸಿ ಈ ವರದಿಯನ್ನು ತಯಾರಿಸಲಾಗಿದೆ. ಇದರಲ್ಲಿ ಸರಕಾರದ ನಿಧಿಗಳನ್ನು ಸೇರಿಸಲಾಗಿಲ್ಲ ಎಂದು ವರದಿ ತಿಳಿಸಿದೆ.

ಉಳಿದಂತೆ ಟಾಪ್ ಟೆನ್ ಸ್ಥಾನದಲ್ಲಿ ಯು.ಕೆ (9,919 ಬಿಲಿಯನ್ ಡಾಲರ್), ಜರ್ಮನಿ (9,660 ಬಿಲಿಯನ್ ಡಾಲರ್), ಭಾರತ (8,230 ಬಿಲಿಯನ್ ಡಾಲರ್), ಆಸ್ಟ್ರೇಲಿಯಾ (6,142 ಬಿಲಿಯನ್ ಡಾಲರ್), ಕೆನಡಾ ( 6,393 ಬಿಲಿಯನ್ ಡಾಲರ್), ಫ್ರಾನ್ಸ್ (6,649 ಬಿಲಿಯನ್ ಡಾಲರ್) ಹಾಗೂ ಇಟಲಿ (4,276 ಬಿಲಿಯನ್ ಡಾಲರ್) ಇದೆ.

Comments are closed.