Uncategorized

ಇಲ್ಲಿ ಕೆಲಸಕ್ಕೂ ಮುಂಚೆ ಬಾಸ್‌ಗೆ ಕಿಸ್ ಕೊಡಲು ಮಹಿಳಾ ಉದ್ಯೋಗಿಗಳ ಕ್ಯೂ : ವಿಡಿಯೋ ವೈರಲ್

Pinterest LinkedIn Tumblr

boss_kiss_pics-m

ವಿಡಿಯೋ – ಇಲ್ಲಿ ಕ್ಲಿಕ್ ಮಾಡಿ

__ ನಾವು ಕೆಲಸ ಮಾಡುವ ಸಂಸ್ಥೆಯಲ್ಲಿ ದಿನಾ ಬಾಸ್ ಗೆ ಕಿಸ್ ಕೊಟ್ಟ ಮೇಲೆಯೇ ಕೆಲಸ ಆರಂಭಿಸ ಬೇಕೆಂಬ ಅದೇಶ ಬಂದರೆ ಹೇಗಿರುತ್ತದೆ..ಈ ಮಾತು ಕೇಳಿ ಅಶ್ಚರ್ಯವಾಯಿತೇ..

ಚೀನಾದ ಸಂಸ್ಥೆಯೊಂದರಲ್ಲಿ ಈ ಅನಾಗರಿಕ ಪದ್ಧತಿಯೊಂದು ಆರಂಭವಾಗಿದ್ದು, ಕಿಸ್ ಕೊಡಲೆಂದೇ ಚೈನಾದ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಪ್ರತಿದಿನ ಬೆಳಿಗ್ಗೆ ಮಹಿಳಾ ಉದ್ಯೋಗಿಗಳು ಕಡ್ಡಾಯವಾಗಿ ಒಂದು ಸಾಲಿನಲ್ಲಿ ನಿಲ್ಲುತ್ತಾರೆ.

boss_kiss_pics-1

ತಮ್ಮ ಬಾಸ್‌ನ್ನು ಚುಂಬಿಸಿಯೇ ಅಂದಿನ ದಿನದ ಕೆಲಸ ಪ್ರಾರಂಭಿಸುತ್ತಾರೆ.ಇದೀಗ ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ. ಯಾವುದೇ ಮಹಿಳೆ ಬಹಿರಂಗವಾಗಿ ಪರಪುರುಷನನ್ನು ಪ್ರತಿದಿನ ಚುಂಬಿಸುವುದಕ್ಕೆ ಏನು ಕಾರಣವಿರಬಹುದು ಎಂದು ಯೋಚಿಸುವಂತಾಗುತ್ತದೆ. ಈ ಬಗ್ಗೆ ಹರಡಿರುವ ಊಹಾಪೋಹಗಳ ಪ್ರಕಾರ ಈ ಸ್ಥಳದಲ್ಲಿ ಉದ್ಯೋಗಕ್ಕೆ ವಿಪರೀತ ಬೇಡಿಕೆ ಇದ್ದು ಈ ಸಂಪ್ರದಾಯವನ್ನು ಪಾಲಿಸದಿದ್ದವರು ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ.ಇದಕ್ಕೆ ಹೆದರಿಯೇ ಎಲ್ಲ ಮಹಿಳೆಯರು ಇಷ್ಟವಿಲ್ಲದಿದ್ದರೂ ಇದನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ

ಕೆಲಸದ ಸ್ಥಳದಲ್ಲಿ ಲೈಂಗಿಕ ಶೋಷಣೆ ನಡೆಯುವುದು, ಕೆಲಸ ಬಿಡಿಸುವ ನೆಪ ಹೇಳಿ ಬ್ಲಾಕ್ ಮೇಲ್ ಮಾಡುವುದು ಮೊದಲಿನಿಂದಲೂ ನಡೆಯುತ್ತಾ ಬಂದಿದೆ. ಆದರೆ ಇಂತಹ ಒಂದು ಪದ್ಧತಿ ನಮ್ಮ ಪಕ್ಕದ ದೇಶದಲ್ಲೇ ನಡೆಯುತ್ತಿರುವುದು ತುಂಬಾ ಅಶ್ಚರ್ಯವನ್ನುಂಟು ಮಾಡಿದೆ.

ಈ ಅನಾಗರಿಕ ಸಂಪ್ರದಾಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಬಂದಿದ್ದೇ ತಡ ಈ ಬಗ್ಗೆ ವ್ಯಾಪಕ ಟೀಕೆ ಟಿಪ್ಪಣಿಗಳು ಎದುರಾಗುತ್ತಿವೆ. ಈ ಸ್ಥಳವನ್ನು ಜನರು ‘ರೋಗಗ್ರಸ್ಥ ಸ್ಥಳ’ ಎಂಬ ಪಟ್ಟವನ್ನೂ ಕಟ್ಟಿಬಿಟ್ಟಿದ್ದಾರೆ.

Comments are closed.