ಕಾನ್ಪುರ: ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ಕೆಲಮಟ್ಟಿಗೆ ನಿಯಂತ್ರಿಸಲು ಕಾನ್ಪುರ ಸಂಚಾರ ಪೊಲೀಸರು ಟ್ರಾಫಿಕ್ ಸೆಲ್ಪಿ ಅಭಿಯಾನವನ್ನು ಮಂಗಳವಾರದಿಂದ ಆರಂಭಿಸಿದ್ದು, ಇದು 15 ದಿನಗಳವರೆಗೆ ನಡೆಯಲಿದೆ.
ಕಾನ್ಪುರದ 14 ಜನನಿಬಿಡ ರಸ್ತೆಗಳನ್ನು ಗುರುತಿಸಿರುವ ಪೊಲೀಸರು ಸಹಾಯವಾಣಿಗೆ ಫೇಸ್ಬುಕ್ ಪೇಜ್ ‘ಏಕ್ ನಂಬರ್ ಭರೋಸೆ ಕಾ’ ಎಂಬ ಶಿರ್ಷಿಕೆಯೊಂದಿಗೆ ಅಭಿಯಾನ ಆರಂಭಿಸಿದ್ದಾರೆ. ಪೊಲೀಸ್ ನಿರ್ದೇಶಕ ಅಶುತೋಶ್ ಪಾಂಡೆ ಚಾಲನೆ ನೀಡಿದರು.
ಸಾರ್ವಜನಿಕರು ಎಲ್ಲಾದರೂ ಟ್ರಾಫಿಕ್ ಕಿರಿಕಿರಿ ಅನುಭವಿಸಿದರೆ ತಕ್ಷಣ ಸೆಲ್ಪಿ ಕ್ಲಿಕ್ಕಿಸಿ ಸಮಯ, ಸ್ಥಳದೊಂದಿಗೆ ಅಪಲೋಡ್ ಮಾಡಿದರೆ ಆಯಾ ಸ್ಥಳಗಳ ಉಸ್ತುವಾರಿ ಅಧಿಕಾರಿಗಳು ಕೂಡಲೇ ಸಂಚಾರ ದಟ್ಟಣೆ ಸರಿಪಡಿಸದಿದ್ದರೆ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಂಜೆ ವೇಳೆ ಶಾಲಾ ಕಾಲೇಜುಗಳು ಬಿಡುವ ಸಮಯಕ್ಕೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪೊಲೀಸರೂ ಹೆಚ್ಚು ಟ್ರಾಫಿಕ್ ಇರುವ ಜಾಗಗಳ ಸೆಲ್ಪಿ ತೆಗೆದು ಕಳಿಸಬಹುದಾಗಿದೆ.