ಬೆಂಗಳೂರು,ಜ.19: ಲಂಚ ಪ್ರಕರಣದಲ್ಲಿ ಭಾಗಿಯಾಗಿದ್ದ ನ್ಯಾ.ಭಾಸ್ಕರ್ ರಾವ್ ಅವರನ್ನು ಆರೋಪಿಯನ್ನಾಗಿ ಪರಿಗಣಿಸುವಂತೆ ಸಲ್ಲಿಸಿದ ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಇಂದು ವಜಾಗೊಳಿಸಿದೆ.
ಸಾಮಾಜಿಕ ಕಾರ್ಯಕರ್ತರಾದ ಆಲಂ ಪಾಷಾ ಅವರು ನ್ಯಾ.ಭಾಸ್ಕರ್ ರಾವ್ ಅವರ ವಿರುದ್ಧ ನೀಡಿದ ದಾಖಲೆಗಳು ಅವರನ್ನು ಆರೋಪಿಯನ್ನಾಗಿ ಮಾಡಲು ಸಾಕಾಗುವುದಿಲ್ಲ. ಹಾಗೂ ಮಗ ಮಾಡಿದ ತಪ್ಪನ್ನು ತಂದೆ ಮೇಲೆ ಹೊರೆಸುವುದು ಸರಿಯಲ್ಲ. ಈ ಹಗರಣಕ್ಕೆ ನ್ಯಾಯಾಲಯವು ಎಸ್‍ಐಟಿಯನ್ನು ತನಿಖೆಗೆ ನೇಮಿಸಿದೆ ಎಂದು ನ್ಯಾಯಾಧೀಶರು ಹೇಳಿದರು.