ಮೂಡುಬಿದಿರೆ, ಡಿ.21: ಆಳ್ವಾಸ್ ಶಿಕ್ಷಣ ಸಂಸ್ಥೆಯು ಆಯೋಜಿಸುತ್ತಿರುವ 22ನೆ ವರ್ಷದ ‘ವಿರಾಸತ್’ ಅಂಗವಾಗಿ ಎಂಟು ದಿನ ಕಾಲ ವಿದ್ಯಾಗಿರಿಯಲ್ಲಿ ನಡೆಯುವ ರಾಷ್ಟ್ರೀಯ ‘ವರ್ಣ ವಿರಾಸತ್’ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ರವಿವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಡಾ.ಆಳ್ವ, ವರ್ಣವಿರಾಸತ್ ಅಂಗ ವಾಗಿ ಆದಿವಾಸಿ ಮತ್ತು ಸಮಕಾಲೀನ ಚಿತ್ರಕಲಾ ಶಿಬಿರ ಇಲ್ಲಿ 8 ದಿನಗಳ ಕಾಲ ನಡೆಯಲಿದೆ ಎಂದರು. ಡಾ.ಸುಬ್ರಹ್ಮಣ್ಯ ಭಟ್, ಕಲಾಶಿಕ್ಷಕ ಭಾಸ್ಕರ ನೆಲ್ಯಾಡಿ, ಶರತ್ ಶೆಟ್ಟಿ ಉಪಸ್ಥಿತರಿದ್ದರು. ಹಿಂದಿ ಉಪನ್ಯಾಸಕ ಡಾ. ರಾಜೀವ್ ಕಾರ್ಯಕ್ರಮ ನಿರೂಪಿಸಿದರು.
15 ಕಲಾವಿದರು: ರಾಜಸ್ಥಾನದ ಓಂಪ್ರಕಾಶ್, ಗುಜರಾತ್‌ನ ಜಗದೀಶ್ ವಾಗಿ ಭಾಯ್, ಪರೇಶ್, ಬಿಹಾರದ ಶ್ರವಣ್‌ಕುಮಾರ್ ಪಾಸ್ವಾನ್, ಊರ್ಮಿಳಾ ದೇವಿ, ಮಂಜು ದೇವಿ, ಸುಲೇಖಾ ದೇವಿ, ಕೈಲಾಶ್ ದೇವಿ, ಪವನ್ ಸಾಗರ್, ಅನಿತಾ ಬಾರ್ಯಾ ಮತ್ತು ಗಂಗೋತ್ರಿ ಟೇಕಮ್, ಕರ್ನಾಟಕದ ಈಶ್ವರ್ ನಾಯಕ್, ಮಹಾರಾಷ್ಟ್ರದ ಮೀನಾಕ್ಷಿ ವಾಸುದೇವ್ ವೈದಾ, ರಾಜೇಂದ್ರ ವೈದಾ, ಮತ್ತು ಛತ್ತೀಸ್‌ಗಡದಿಂದ ಆಗ್ನೇಶ್ ಕರ್ಕೇಟಾ ಸೇರಿದಂತೆ ಒಟ್ಟು 15 ಕಲಾವಿದರು ಈ ಶಿಬಿರದಲ್ಲಿ ಪಾಲ್ಗೊಂಡು ಕಲಾಕೃತಿ ಗಳನ್ನು ರಚಿಸಲಿದ್ದಾರೆ.