Uncategorized

ದೀಪಿಕಾ ಪಡುಕೋಣೆ ಶ್ರಮಗಾರ್ತಿ-ಝೋಯಾ ಮೊರಾನಿ

Pinterest LinkedIn Tumblr

deepikaಸಿನಿಮಾ ರಂಗದಲ್ಲಿ ಒಬ್ಬ ನಟ ಅಥವಾ ನಟಿಯನ್ನು ನೋಡಿದ್ರೆ ಇನ್ನೊಬ್ಬ ನಟಿಗೆ ಆಗಲ್ಲ ಅನ್ನುವ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಆದ್ರೂ ಕೆಲವು ನಟ ನಟಿಯರಿಗೆ ತಮ್ಮದೇ ಕ್ಷೇತ್ರದಲ್ಲಿ ಒಬ್ಬರು ಮಾದರಿ ಅಂತಾ ಇರುತ್ತಾರೆ. ಹಾಗೇ ನಟಿ ಝೋಯಾ ಮೊರಾನಿ ಅವರಿಗೆ ದೀಪಿಕಾ ಪಡುಕೋಣೆ ಅಂದ್ರೆ ತುಂಬಾನೇ ಇಷ್ಟವಂತೆ.

ದೀಪಿಕಾ ಪಡುಕೋಣೆ ನನ್ನ ಇಷ್ಟದ ನಟಿ ಎಂದಿರುವ ಝೋಯಾ ಮೊರಾನಿ ಆಕೆ ಏನು ಮಾಡಿದ್ರೂ ನನಗೆ ಚಂದ ಅಂದಿದ್ದಾರೆ.ಪ್ರತಿ ಸಿನಿಮಾದಿಂದ  ಸಿನಿಮಾಕ್ಕೆ ದೀಪಿಕಾ ತುಂಬಾನೇ ಇಂಪ್ರೂವ್ ಆಗುತ್ತಿದ್ದಾರೆ.ಅವರು ನಿಜವಾಗಿಯೂ ಹಾರ್ಡ್ ವರ್ಕರ್ ಎಂದಿದಾದರೆ. ಇನ್ನು ದಿಪ್ಪಿಯಂತೆಯೇ ಕರೀಷ್ಮಾ ಕಪೂರ್ ಕೂಡ ನನಗೆ ನೆಚ್ಚಿನ ನಟಿ ಎಂದಿರುವ ಝೋಯಾ ಮೊರಾನಿ ದಿಪ್ಪಿಯನ್ನು ಮಾತ್ರ ಹಾಡಿ ಹೊಗಳಿದ್ದಾರೆ.

2011 ರಲ್ಲಿ ಬಿಡುಗಡೆಯಾದ ಕಭೀ ಕಭೀ ಸಿನಿಮಾದಲ್ಲಿ  ನಟಿಸಿದ್ದ ಝೋಯಾ ಮೊರಾನಿ ಭಾಗ್ ಜಾನಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.  ಸಿನಿಮಾದಲ್ಲಿ ನನ್ನದು ಅತ್ಯಂತ ಕುತೂಹಲಕಾರಿ ಪಾತ್ರವಾಗಿದ್ದು, ಕೆಲವು ಆಕ್ಷನ್ ಸೀನ್ ಗಳನ್ನು ಕೂಡ ಮಾಡಿದ್ದೇನೆ ಅಂದಿದ್ದಾರೆ.

Write A Comment