Uncategorized

ಅನುಪಮ ಮಹಿಳಾ ಮಾಸಿಕದ 15ನೇ ವಾರ್ಷಿಕ ವಿಶೇಷಾಂಕ ಬಿಡುಗಡೆ

Pinterest LinkedIn Tumblr

puttur_anupama_book_m

ಪುತ್ತೂರು,ಫೆ.28 : `ಮುಸ್ಲಿಂ ಮಹಿಳೆಯರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು 15 ವರ್ಷಗಳಿಂದ ಅನುಪಮ ಮಹಿಳಾ ಮಾಸಿಕದ ಮೂಲಕ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಅದು ಪತ್ರಿಕಾ ರಂಗದಲ್ಲಿ ಯಶಸ್ವಿಯಾಗಿ ಮುಂದುವರಿಯಲಿ’ ಎಂದು ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಹೇಳಿದರು.ಅವರು ಇಲ್ಲಿನ ರೋಟರಿ ಟ್ರಸ್ಟ್ ಹಾಲ್‌ನಲ್ಲಿ ನಡೆದ ಅನುಪಮ ಮಹಿಳಾ ಮಾಸಿಕದ 15ನೇ ವಾರ್ಷಿಕ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ಸಮಾಜದಲ್ಲಿ ವ್ಯಾಪಕವಾಗಿರುವ ವರದಕ್ಷಿಣೆ, ಅಶ್ಲೀಲತೆ, ಅಸಮಾನತೆಗಳನ್ನು ಹೋಗಲಾಡಿಸಲು ಮಹಿಳೆ ಪ್ರಯತ್ನಿಸಬೇಕು. ಉನ್ನತ ವಿದ್ಯಾಭ್ಯಾಸ ಪಡೆದು ಸ್ವಾಭಿಮಾನಿಯಾಗಿ ಬದುಕಲು ಕಲಿಯಬೇಕು. ಮಹಿಳೆ ಸಹನಾಮಯಿ ಆದರೆ ಅವಳ ಸಹನೆಗೂ ಮಿತಿಯಿದೆ. ಆದ್ದರಿಂದ ಆಕೆಯನ್ನು ಕೆಣಕದಿರಿ. ಅದು ಸಮಾಜದಲ್ಲಿ ಸಮಸ್ಯೆಗಳಿಗೆ ಕಾರಣವಾಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು.

puttur_anupama_book_1

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುತ್ತೂರಿನ ಸಂತ ವಿಕ್ಟರ್ ಹೆಣ್ಮಕ್ಕಳ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಡೋರಿನ್ ಫೆರ್ನಾಂಡಿಸ್, “ಜಾತಿಮತ ಭೇದವಿಲ್ಲದೆ ಅನುಪಮ ಎಲ್ಲರಿಗೂ ಮಾರ್ಗದರ್ಶಕವಾಗಿದೆ. ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ನನಗೆ ಹದಿಹರೆಯದ ಹೆಣ್ಮಕ್ಕಳಿಗೆ ಉಪದೇಶಿಸಲು ಅನುಪಮ ಉತ್ತಮ ಕೈಪಿಡಿಯಾಗಿದೆ. ಅದರಲ್ಲಿರುವ ವಿಷಯಗಳು ಸಮಾಜಕ್ಕೆ ಅಗತ್ಯವಿದೆ” ಎಂದರು.

ಇನ್ನೋರ್ವ ಮುಖ್ಯ ಅತಿಥಿ ಪುತ್ತೂರಿನ ಖ್ಯಾತ ವಕೀಲೆಯಾಗಿರುವ ಸಾಯಿರಾ ಝುಬೈರ್ ಮಾತನಾಡುತ್ತಾ “ಆಧುನಿಕ ಯುಗದಲ್ಲಿ ಓದುವ ಅಭಿರುಚಿ ಕಡಿಮೆಯಾಗಿ ಪುಸ್ತಕಗಳೇ ಮಾಯಾವಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಈ ಮಾಸಿಕವು ಯಶಸ್ವಿಯಾಗಿ ಮುಂದುವರಿಯುತ್ತಿರುವುದು ಶ್ಲಾಘನೀಯ. ಕಾಲಕ್ಕೆ ತಕ್ಕಂತೆ ತನ್ನ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಮುನ್ನಡೆಯಲಿ” ಎಂದು ಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿ ಪುತ್ತೂರು ಪುರಸಭಾ ಸದಸ್ಯೆ ಸೀಮಾ ಗಂಗಾಧರ್ ಸಂದರ್ಭೋಚಿತವಾಗಿ ಮಾತನಾಡಿ ಪತ್ರಿಕೆಗೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅನುಪಮ ಮಹಿಳಾ ಮಾಸಿಕದ ಸಹ ಸಂಪಾದಕಿ ಸಬೀಹಾ ಫಾತಿಮಾ ಮಾತನಾಡುತ್ತಾ, “ಪತ್ರಿಕೆಗಳು ಇಂದು ಉದ್ಯಮವಾಗಿದೆ. ನೈತಿಕ ಮೌಲ್ಯಗಳ ಶಿಥಿಲತೆಯು ಸಮಾಜವನ್ನು ಕೊರೆಯುತ್ತಿದೆ. ಹಣಬಾಕ ಸಂಸ್ಕೃತಿಯಿಂದ ಹೊರಬಂದು ಸಮಾಜ ತಿದ್ದುವ ಕೆಲಸವಾಗಬೇಕು. ಮಹಿಳೆ ತನ್ನ ಮಕ್ಕಳಿಗಾಗಿ ಸಮಯ ನೀಡಲು ಕಲಿಯಬೇಕು. ನಿಮ್ಮೆಲ್ಲರ ಸಹಕಾರ ಅನುಪಮಕ್ಕೆ ಅನಿವಾರ್ಯ” ಎಂದು ಹೇಳಿದರು.
ಸ್ಮಿತಾ (ಶಿಕ್ಷಕಿ, ಆಯಿಶಾ ಹೆಣ್ಮಕ್ಕಳ ಪದವಿ ಪೂರ್ವ ಕಾಲೇಜು), ನಸೀಮಾ (ವಿಟ್ಲ ಸರಕಾರಿ ಕಾಲೇಜು ಉಪನ್ಯಾಸಕಿ) ಹಾಗೂ ವಿದ್ಯಾರ್ಥಿನಿ ಅಫ್ರಾ ನಾಝ್ ಅನಿಸಿಕೆ ವ್ಯಕ್ತಪಡಿಸಿದರು.

ನುಸತ್ ಬಾನು ಕುರ್‌ನ್ ಪಠಿಸಿದರು. ಸಹಸಂಪಾದಕಿ ಸಮೀನಾ ಯು. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಲಿಹಾ ಸಾದಿಕ್ ಕಾರ್ಯಕ್ರಮ ನಿರೂಪಿಸಿದರು. ಸಮೀನಾ ಪರ್ವೀನ್ ಧನ್ಯವಾದವಿತ್ತರು.

Write A Comment