Uncategorized

ಗದ್ದಲದ ಗೂಡಾದ ‘ರೈತರ ದಿನಾಚರಣೆ’: ಬಡ ರೈತರ ಮಕ್ಕಳಿಗೆ ಮೀಸಲಾತಿ ನೀಡಿ: ಸರ್ಕಾರಕ್ಕೆ ವಿಧಾನಸಭೆ ಮಾಜಿ ಅಧ್ಯಕ್ಷ ಕೃಷ್ಣ ಒತ್ತಾಯ

Pinterest LinkedIn Tumblr

pvec24 Charan-2

ಬೆಂಗಳೂರು: ‘ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಬಡ ರೈತರ ಮಕ್ಕಳಿಗೆ ಸರ್ಕಾರಿ ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳ ಬೇಕು’ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೃಷ್ಣ ಅವರು ಆಗ್ರಹಿಸಿದರು.

ಶೂದ್ರಶಕ್ತಿ ಸಮಿತಿ ಕರ್ನಾಟಕ ನಗರದಲ್ಲಿ ಮಂಗಳವಾರ ಆಯೋ ಜಿಸಿದ್ದ ‘ರೈತ ದಿನಾಚರಣೆ’ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಿನ ವರ್ಷದಿಂದ ದಿವಂಗತ ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಅವರ ಜನ್ಮದಿನವನ್ನು ರೈತರ ದಿನವನ್ನಾಗಿ ಆಚರಿಸಬೇಕು.  ಕೃಷಿ ವಿಶ್ವವಿದ್ಯಾಲಯ­ಗಳಲ್ಲಿ  ಕೃಷಿ ಸಮಸ್ಯೆ ಗಳ ಕುರಿತು ಸಂಶೋ­ಧನೆ ನಡೆಸುವ ಪೀಠಗಳನ್ನು ಸ್ಥಾಪಿಸಬೇಕು’ ಎಂದು ಹೇಳಿದರು.

‘ನೀರಿನ ಸದ್ಬಳಕೆ ಮಾಡುವ ದಿಸೆ­ಯಲ್ಲಿ ರಾಜ್ಯ ಸರ್ಕಾರ ಸದ್ಯ ಅಸ್ತಿತ್ವ­ದಲ್ಲಿರುವ ಕೆರೆ ಪ್ರಾಧಿಕಾರ, ಅಂರ್ತಜಲ ಅಭಿವೃದ್ಧಿ ಪ್ರಾಧಿಕಾರ, ಮಳೆ ನೀರು ಸಂಗ್ರಹ ಕಾರ್ಯಕ್ರಮ ಇತ್ಯಾದಿ­ಗಳನ್ನು ಒಂದೇ ಸೂರಿನಡಿ ತರಲು ನಿಗಮ­ವೊಂದನ್ನು ರಚಿಸಬೇಕು. ಮಳೆ­ಯಾಶ್ರಿತ ರೈತರ ಅಭಿವೃದ್ಧಿಗಾಗಿ ಮುಂದಿನ ಬಜೆಟ್‌­ನಲ್ಲಿ ₨5000 ಕೋಟಿ ಮೀಸಲಿ ಡಬೇಕು’ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ ಮಾತನಾಡಿ, ‘ಮಾರುಕಟ್ಟೆಯಲ್ಲಿ ಪ್ರತಿಯೊಬ್ಬ ಉತ್ಪಾದಕನಿಗೂ ತನ್ನ ಉತ್ಪನ್ನಕ್ಕೆ ಬೆಲೆ ನಿಗದಿ ಪಡಿಸುವ ಅಧಿಕಾರವಿದೆ. ಆದರೆ, ಈ ಅಧಿಕಾರ ಇಂದಿಗೂ ರೈತನಿಗೆ ದೊರೆ ತಿಲ್ಲ. ಸರ್ಕಾರಗಳು ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಪಡಿಸದಿದ್ದರಿಂದ ಲಾಭ ವನ್ನು ಮಧ್ಯವರ್ತಿಗಳು ಕಬಳಿಸುತ್ತಿ ದ್ದಾರೆ. ಈ ಬಗ್ಗೆ ಶಾಸನಸಭೆಗಳಲ್ಲಿ ಚರ್ಚೆ ನಡೆಸಬೇಕು’ ಎಂದು ಹೇಳಿದರು.

pvec24Raitha-2

ಪ್ರಜಾಪ್ರಭುತ್ವದಲ್ಲಿ ದರೋಡೆಕೋರರ ಹೆಚ್ಚಳ
‘ಇಂದು ರಾಜಕೀಯದಲ್ಲಿ ಬದ್ಧತೆ ಇರುವ ನಾಯಕರು ಬಹಳ ಕಡಿಮೆ­ಯಾಗು ತ್ತಿದ್ದು, ಅವರ ಸಂಖ್ಯೆ ಶೇ 5ರಷ್ಟು ಮಾತ್ರವಿದೆ. ಇಂದು ಪ್ರಜಾ­ಪ್ರಭುತ್ವದ ದರೋ ಡೆಕೋರರ ಸಂಖ್ಯೆ ಹೆಚ್ಚುತ್ತಿದೆ. ಎಲ್ಲ ಪಕ್ಷಗಳಲ್ಲಿ ‘ಎ’ ಮತ್ತು ‘ಬಿ’ ದರ್ಜೆಯ ದ್ರೋಹಿಗಳಿದ್ದಾರೆ. ನಾವು ಟಿಕೆಟ್‌ಗಾಗಿ ಅವರ ಮುಂದೆ ಕೈಮುಗಿದು ನಿಂತು ಹಾಳಾ ಗುವುದ­ರೊಂದಿಗೆ ನಮ್ಮ ರೈತರನ್ನು ಹಾಳು ಮಾಡುತ್ತಿದ್ದೇವೆ’ ಎಂದು ಕೃಷ್ಣ ವಿಷಾದಿಸಿದರು.

ಗದ್ದಲದ ಗೂಡಾದ ‘ರೈತರ ದಿನಾಚರಣೆ’
ಕಾರ್ಯಕ್ರಮದಲ್ಲಿ ಬೆಂಗಳೂರು ಸುತ್ತಮುತ್ತಲಿನ ರೈತರಿಗಿಂತ ಮೊದಲು ದೂರದ ಊರಿನಿಂದ ಬಂದ ಉತ್ತರ ಕರ್ನಾಟಕದ ರೈತರನ್ನು ಮೊದಲು ಸನ್ಮಾನಿಸಬೇಕೆಂದು ಉತ್ತರ ಕರ್ನಾ ಟಕದ ರೈತರು ಪಟ್ಟು ಹಿಡಿದರು.  ‘ಅಂತರ­ರಾಷ್ಟ್ರೀಯ ರೈತರ ದಿನಾಚರಣೆ’ ಕಾರ್ಯ­ಕ್ರಮವು ಗದ್ದಲ, ಗಲಾಟೆಯಿಂದ ಕೂಡಿತ್ತು.

ಮೊದಲಿಗೆ ಐದು ಮಂದಿ ರೈತರನ್ನು ಸಾಂಕೇತಿಕವಾಗಿ ಸನ್ಮಾನಿಸಲಾಗುವುದು. ಅತಿಥಿಗಳು  ಮಾತನಾಡಿದ ನಂತರ ಉಳಿದ ರೈತರನ್ನು ಸನ್ಮಾನಿಸಲಾಗು ವುದು ಎಂದು ಆಯೋಜಕರು  ಹೇಳಿದರು.

ಆಗ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ರೈತರೆಂದು ಭೇದ­ಭಾವ ಮಾಡಲಾಗುತ್ತಿದೆ ಎಂದು ಆರೋಪಿಸಿ, ಎಲ್ಲಾ ರೈತರನ್ನೂ  ಕೂಡಲೇ ಸನ್ಮಾನಿಸಬೇಕು ಎಂದು ವೇದಿಕೆಯ ಬಳಿ ರೈತರು ಮುತ್ತಿಗೆ ಹಾಕಿದರು. ಆಗ ಕಾರ್ಯಕ್ರಮದಲ್ಲಿ ಗದ್ದಲ, ಗಜಿಬಿಜಿ ಉಂಟಾಯಿತು.

‘ಬೆಳೆದ ಬೆಳೆ ಮತ್ತು ಅವರು ಪ್ರಯೋಗಿಸಿದ ವಿಧಾನಗಳನ್ನು ಅನು ಸರಿಸಿ ಪ್ರಗತಿಪರ ರೈತರೆಂದು ಪ್ರತಿ ಜಿಲ್ಲೆಗಳಿಂದ 5 ಅಥವಾ 6 ರೈತರನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮ­ದಲ್ಲಿ ಒಟ್ಟು 100 ಮಂದಿ ರೈತರನ್ನು ಸನ್ಮಾನಿಸಲಾಯಿತು’ ಎಂದು ಕರ್ನಾಟಕ ಪ್ರದೇಶ ಯುವಕ ರೈತ ಸಮಾಜದ ಅಧ್ಯಕ್ಷ ಆರ್‌. ರವಿಕುಮಾರ್‌ ತಿಳಿ ಸಿದರು.

‘ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಎಲ್ಲಾ ವ್ಯವಸ್ಥೆ ಮಾಡ­ಲಾಗಿತ್ತು. ಕಳೆದ ಬಾರಿ ಕಾರ್ಯ­ಕ್ರಮ ವನ್ನು ಚೆನ್ನಾಗಿ ಮಾಡಲಾಗಿತ್ತು. ಆದರೆ, ಈ ಬಾರಿ ಕೆಲವರ ಅಸಹಕಾರ­ದಿಂದ ಗದ್ದಲ ಉಂಟಾ­ಯಿತು. ಅತಿಥಿಗಳು ಮಾತ­ನಾಡು­ವು­ದಕ್ಕೂ ಅವಕಾಶ ದೊರೆಯ­ದಾಯಿತು’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Write A Comment