ಕರಾವಳಿ

ಕುಂದಾಪುರ: ವೈದ್ಯೆ ಡಾ. ರಿಶೆಲ್ ರೆಬೆಲ್ಲೊ ಅವರಿಗೆ ಸನ್ಮಾನ

Pinterest LinkedIn Tumblr

ಕುಂದಾಪುರ: ಮೂಳೆ ಮತ್ತು ಕೀಲು ವೈದ್ಯಕೀಯದಲ್ಲಿ ಸಾಧನೆ‌ ಮಾಡಿದ ಡಾ. ರಿಶೆಲ್ ರೆಬೆಲ್ಲೊ ಅವರಿಗೆ ಕುಂದಾಪುರ ತಾಲೂಕು ಮಹಿಳಾ ಒಕ್ಕೂಟದ ವತಿಯಿಂದ ಮಂಗಳವಾರದಂದು ಸನ್ಮಾನಿಸಲಾಯಿತು.

ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಮಾತನಾಡಿ, ಕೆಲವೊಂದು ಹುದ್ದೆಗಳಿಗೆ ಮಹಿಳೆಯರು ಸಮರ್ಥರು. ತಾಳ್ಮೆಯುಳ್ಳ ಮಹಿಳಾ ವೈದ್ಯರು ಪುರುಷ ವೈದ್ಯರಿಗಿಂತ ಹೆಚ್ಚು ತಾಳ್ಮೆಯುಳ್ಳವರು ಎನ್ನುವ ವರದಿಯಿದೆ. ಮೂಳೆ ಮತ್ತು ಕೀಲು ವೈದ್ಯಕೀಯದಲ್ಲಿ ಅಪ್ರತಿಮ ಸಾಧನೆ‌ ಮಾಡಿದ ಡಾ. ರಿಶೆಲ್ ರೆಬೆಲ್ಲೊ ಅವರಂತಹ ಸಾಧಕಿಯರು ಕುಂದಾಪುರದಲ್ಲಿ ಇರುವುದು ಅತ್ಯಂತ ಹೆಮ್ಮೆಯ ವಿಚಾರ. ಅವರನ್ನು ಗುರುತಿಸಿ ಸನ್ಮಾನಿಸಿರುವುದು ಶ್ಲಾಘನೀಯ ವಿಚಾರ ಎಂದು ಹೇಳಿದರು.

ಸಮಾಜ ಸೇವಕಿ, ಕುಂದಾಪುರ ತಾಲೂಕು ಮಹಿಳಾ ಒಕ್ಕೂಟದ ಮುಖ್ಯಸ್ಥೆ ರಾಧಾದಾಸ್‌ ಕುಂಭಾಸಿ, ಹಿರಿಯ ವಕೀಲ, ಸಾಹಿತಿ ಎ.ಎಸ್.ಎನ್. ಹೆಬ್ಬಾರ್, ಶಲಿಯೆಟ್ ರೆಬೆಲ್ಲೊ, ಸುಧಾಕರ ಶೆಟ್ಟಿ, ಶೇಖರ ಶೆಟ್ಟಿ, ತಿಲೋತ್ತಮ ನಾಯಕ್, ಪ್ರೇಮಾ ಎಚ್., ಸಿಡಿಪಿಒ ಉಮೇಶ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Comments are closed.