(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಬಿ.ಎಸ್.ಎಫ್ ಕ್ಯಾಂಪ್‌ನಲ್ಲಿ 11 ತಿಂಗಳ ತರಬೇತಿ ಪಡೆದು ಭಾರತ ಸೇನೆಯಿಂದ ಭಾರತ-ಬಾಂಗ್ಲಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜಿತರಾದ ಕುಂದಾಪುರ ತಾಲೂಕಿನ ಹೆಮ್ಮಾಡಿ ಮೂಲದ ಸಂಜೀವ-ಗಂಗಾ ದಂಪತಿಗಳ ಪುತ್ರಿ ಸುನಿತಾ ಪೂಜಾರಿ ಅವರನ್ನು ಕುಂದಾಪುರದಲ್ಲಿ ಭಾನುವಾರ ಬೆಳಿಗ್ಗೆ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.
ಇಲ್ಲಿನ ಶಾಸ್ತ್ರೀ ವೃತ್ತದಲ್ಲಿ ಸುನೀತಾ ಪೂಜಾರಿಯವರಿಗೆ ಅಭಿನಂದಿಸಿದ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸೈನ್ಯಕ್ಕೆ ಸೇರುವರ ಸಂಖ್ಯೆ ವಿರಳ. ಅದರಲ್ಲಿಯೂ ಓರ್ವ ಯುವತಿ ಉತ್ಸಾಹಿಯಾಗಿ ಮುಂದೆ ಬಂದಿರುವುದಕ್ಕೆ ಮನೆಯವರ ಪ್ರೋತ್ಸಾಹ ಕೂಡ ಕಾರಣ. ಇವರಿಂದ ಸ್ಪೂರ್ತಿಯಾಗಿ ಯುವಜನಾಂಗ ಸೈನಕ್ಕೆ ಸೇರಬೇಕು. ಬಿಲ್ಲವ ಸಮಾಜದ ಯುವತಿ ದೇಶ ಸೇವೆಗೆ ಪಣತೊಟ್ಟಿರುವುದು ನಮಗೂ ಹೆಮ್ಮೆಯ ಸಂಗತಿ ಎಂದರು.
ಈ ವೇಳೆ ಸೇನೆಗೆ ನಿಯೋಜನೆಗೊಂಡ ಪಂಜಾಬ್ ಮೂಲದ ಆಯಂತಿಕಾ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಪೂಜಾರಿ ವಿಠಲವಾಡಿ, ಉಪಾಧ್ಯಕ್ಷ ಶಿವರಾಮ ಪೂಜಾರಿ, ನಾರಾಯಣಗುರು ಯುವಕಮಂಡಲದ ಅಧ್ಯಕ್ಷ ಯೋಗೀಶ್ ಪೂಜಾರಿ ಕೋಡಿ, ರಮೇಶ್ ಪೂಜಾರಿ, ನಾಗರಿಕ ಹಿತರಕ್ಷಣಾ ವೇದಿಕೆಯ ಕೃಷ್ಣ ಪೂಜಾರಿ, ಹೆಮ್ಮಾಡಿ ರಿಕ್ಷಾ ಚಾಲಕ-ಮಾಲಕರ ಯೂನಿಯನ್‌ನ ಪ್ರವೀಣ್, ಮುಸ್ಲೀಂ ಸಮುದಾಯದ ಮುಖಂಡ ಯಾಸಿನ್ ಹೆಮ್ಮಾಡಿ, ಮೊದಲಾದವರಿದ್ದರು. ರಾಜೇಶ್ ಕಡ್ಗಿಮನೆ ಸ್ವಾಗತಿಸಿ, ವಂದಿಸಿದರು.
ಸೇನೆಗೆ ನಿಯೋಜಿತರಾದ ಇಬ್ಬರು ಯುವತಿಯರುಲಾಲ್ ಬಹದ್ದೂರ್ ಶಾಸ್ತ್ರಿ ಪ್ರತಿಮೆಗೆ ವಂದಿಸಿದರು. ಬಳಿಕ ಕುಂದಾಪುರದಿಂದ ತೆರದ ವಾಹನದಲ್ಲಿ ಹೆಮ್ಮಾಡಿ ತನಕ ವಾಹನ ಜಾಥಾ ಮೂಲಕ ಕರೆದೊಯ್ಯಲಾಯಿತು.
Comments are closed.