ಕರ್ನಾಟಕ

ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ಪ್ರಕಟ : 85.63% ವಿದ್ಯಾರ್ಥಿಗಳು ಪಾಸ್: ಈ ಬಾರಿ ಬಾಲಕಿಯರೇ ಮೇಲುಗೈ..!

Pinterest LinkedIn Tumblr

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫ‌ಲಿತಾಂಶ ಗುರುವಾರ ಮಧ್ಯಾಹ್ನ 12.30ಕ್ಕೆ ಹೊರ ಬಿದ್ದಿದೆ. 85.63% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಬಾರಿ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಹುಡುಗರು 81.30 % ಉತ್ತೀರ್ಣರಾಗಿದ್ದಾರೆ.

ಪರೀಕ್ಷೆ ಬರೆದ 8 ಲಕ್ಷದ 53 ಸಾವಿರದ 436 ವಿದ್ಯಾರ್ಥಿಗಳ ಪೈಕಿ, ಈ ಬಾರಿ 7 ಲಕ್ಷದ 30 ಸಾವಿರದ 881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 145 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. 329 ವಿದ್ಯಾರ್ಥಿಗಳು 624 ಅಂಕ ಪಡೆದಿದ್ದರೆ, 472 ವಿದ್ಯಾರ್ಥಿಗಳು 623 ಅಂಕ ಪಡೆದಿದ್ದಾರೆ.

ಒಟ್ಟು 40,061 ಮಂದಿ ವಿದ್ಯಾರ್ಥಿಗಳು ಗ್ರೇಸ್ ಮಾರ್ಕ್ ಪಡೆದು ಪಾಸಾಗಿದ್ದಾರೆ. ಅವರಲ್ಲಿ 35,931 ವಿದ್ಯಾರ್ಥಿಗಳು ಕೇವಲ ಒಂದು ವಿಷಯದಲ್ಲಿ ಗ್ರೇಸ್ ಮಾರ್ಕ್ ಪಡೆದಿದ್ದಾರೆ.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಫ‌ಲಿತಾಂಶ ಪ್ರಕಟಿಸಿದ್ದು, ಮಧ್ಯಾಹ್ನ 1 ಗಂಟೆಗೆ ಬಳಿಕ ವಿದ್ಯಾರ್ಥಿಗಳಿಗೆ ಮಂಡಳಿ ವೆಬ್‌ಸೈಟ್‌ನಲ್ಲಿ ಫ‌ಲಿತಾಂಶ ಲಭ್ಯವಾಗಿದೆ. ವಿದ್ಯಾರ್ಥಿಗಳು ನೋಂದಣಿ ಮಾಡಿರುವ ಮೊಬೈಲ್‌ಗ‌ಳಿಗೂ ಫ‌ಲಿತಾಂಶದ ಸಂದೇಶ ಬರಲಿದೆ.

Comments are closed.