ಕರ್ನಾಟಕ

ಮತ್ತೆ ಅಡುಗೆ ಅನಿಲ‌ ಸಿಲಿಂಡರ್ ಬೆಲೆ ಏರಿಕೆ; ಸಾವಿರದ ಗಟಿ‌ ದಾಟಿದ ಎಲ್‌ಪಿಜಿ ಸಿಲಿಂಡರ್ ದರ..!

Pinterest LinkedIn Tumblr

ನವದೆಹಲಿ: ಗೃಹಬಳಕೆಯ 14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ದರವನ್ನು 3.5 ರೂ. ಏರಿಕೆ ಮಾಡಲಾಗಿದೆ. ಈ ಮೂಲಕ ಕಳೆದ ಬಾರಿ 999.50 ರೂ.ಗೆ ಏರಿಕೆಯಾಗಿ ಸಾವಿರದತ್ತ ತಲುಪಿದ್ದ ಪ್ರತಿ ಸಿಲಿಂಡರ್ ದರ ಇದೀಗ ಸಾವಿರದ ಗಡಿ ದಾಟಿ 1,003 ರೂ ಆಗಿದೆ.

ಇದು ಈ ತಿಂಗಳಲ್ಲಿ ಅಡುಗೆ ಅನಿಲ ಸಿಲಿಂಡರ್‌ ದರದಲ್ಲಿ ನಡೆಯುತ್ತಿರುವ ಎರಡನೇ ದರ ಏರಿಕೆಯಾಗಿದೆ. ಈ ಹಿಂದೆ ಮೇ 7 ರಂದು ಪ್ರತಿ ಅಡುಗೆ ಅನಿಲ ಸಿಲಿಂಡರ್‌ ದರವನ್ನು 50 ರೂ. ಏರಿಕೆ ಮಾಡಲಾಗಿತ್ತು. ಇದೀಗ ಎರಡನೇ ದರ ಏರಿಕೆಯೊಂದಿಗೆ ದೇಶದೆಲ್ಲೆಡೆ ಎಲ್‌ಪಿಜಿ ಸಿಲಿಂಡರ್‌ ದರ 1,000 ರೂ. ಗಡಿ ದಾಟಿದೆ.

ಬೆಂಗಳೂರಿನಲ್ಲಿ ಕಳೆದ ಬಾರಿ ದರ ಏರಿಕೆ ನಡೆದಾಗ 14.2 ಕೆಜಿಯ ಸಿಲಿಂಡರ್‌ ದರ 999.50 ರೂ. ತಲುಪಿತ್ತು. ಇದೀಗ 3.50 ರೂ. ಏರಿಕೆಯೊಂದಿಗೆ ನಗರದಲ್ಲಿಯೂ 1003 ರೂ. ತಲುಪಿದೆ.

Comments are closed.