ಕರಾವಳಿ

ಸಿವಿಲ್ ಇಂಜಿನೀಯರಿಂಗ್ ವಿಭಾಗ; ಕುಂದಾಪುರದ ಆಶಿಕಾ ಪೈಗೆ ದ್ವಿತೀಯ ರ್‍ಯಾಂಕ್

Pinterest LinkedIn Tumblr

ಕುಂದಾಪುರ: ಕುಂದಾಪುರದ ಪ್ರತಿಭಾವಂತ ವಿದ್ಯಾರ್ಥಿನಿ ಆಶಿಕಾ ಪೈಯವರು ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕರ್ನಾಟಕದಲ್ಲಿ ದ್ವಿತೀಯ ರ್‍ಯಾಂಕ್ ಗಳಿಸಿದ್ದಾರೆ.

ಮಂಗಳೂರಿನ ಮಾಲಾಡಿ ಕೋರ್ಟ್ಸ್‌ನಲ್ಲಿ ನೆಲೆಸಿರುವ ಕೋಟೇಶ್ವರದ ಶಾಂತಾರಾಮ್ ಪೈ ಹಾಗೂ ಕುಂದಾಪುರದ ಅನಸೂಯ ಪೈ ದಂಪತಿಗಳ ಪುತ್ರಿಯಾಗಿರುವ ಇವರು ಮಂಗಳೂರಿನ ಎಜೆ ಇಂಜಿನೀಯರಿಂಗ್ ಕಾಲೇಜ್‌ನಲ್ಲಿ ಶಿಕ್ಷಣ ಪಡೆದಿದ್ದು, ಇದು ಎ.ಜೆ. ಇಂಜಿನಿಯರಿಂಗ್ ಕಾಲೇಜಿನ ಮೊಟ್ಟ ಮೊದಲ ಬ್ಯಾಚ್ ಆಗಿದ್ದುದು ಕೂಡ ವಿಶೇಷ. 10ನೇ ತರಗತಿಯಲ್ಲಿ ಪೂರ್ಣ 10 ಅಂಕಗಳ CGPA ಗಳಿಸಿದ್ದ ಇವರು, ನಂತರ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಮಾಡಿದ್ದು ಅಲ್ಲಿಯೂ 90% ಅಂಕ ಗಳಿಸಿದ್ದಲ್ಲದೇ, DCET ಎಕ್ಸಾಂನಲ್ಲಿ ಕರ್ನಾಟಕಕ್ಕೆ 40ನೇ ರ್‍ಯಾಂಕ್ ಗಳಿಸಿದ್ದರು.

ಇದೀಗ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 9.34 CGPA ಅಂಕಗಳೊಂದಿಗೆ , ದ್ವಿತೀಯ ರ್‍ಯಾಂಕ್‌ಗಳಿಸಿ ಎ.ಜೆ. ಇಂಜಿನೀಯರಿಂಗ್ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ, ಶಿಕ್ಷಕ ವೃಂದದವರ ಅಪಾರ ಮೆಚ್ಚುಗೆಗಳಿಸಿ ಹೆಮ್ಮೆಯ ವಿದ್ಯಾರ್ಥಿನಿ ಎನಿಸಿಕೊಂಡಿದ್ದಾರೆ. ಎಂ.ಟೆಕ್ ಮಾಡುವುದು ಇವರ ಸದ್ಯದ ಗುರಿಯಾಗಿದೆ.

ಆಶಿಕಾ ಪೈ ಸಾಧನೆಗೆ ಎಜೆ ಇಂಜಿನೀಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ , ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಪ್ರಾಂಶುಪಾಲ ಶಾಂತಾರಾಮ್ ರೈ ಸಿ. ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಸಿದ್ದಾರೆ.

ಕೋಟೇಶ್ವರದ ಖ್ಯಾತ ಅಡಿಗೆ ತಜ್ಞ, ಭಾಸ್ಕರ್ ಪೈ ಹಾಗೂ ದಿವಂಗತ ಶ್ರೀಮತಿ ಸುಶೀಲಾ ಪೈ, ಕುಂದಾಪುರದಲ್ಲಿ ನೆಲೆಸಿರುವ, ವಂಡ್ಸೆ ರತ್ನಾಕರ ಶ್ಯಾನುಭಾಗ್ ಹಾಗೂ ವಸಂತಿ ಶ್ಯಾನುಭಾಗ್ ಇವರ ಮೊಮ್ಮಗಳು ಇವರಾಗಿದ್ದಾರೆ.

Comments are closed.