ಅಂತರಾಷ್ಟ್ರೀಯ

ಅಮೆರಿಕಾದಲ್ಲಿ ಕುಂದಾಪುರ ಸಹೋದರಿಯರ ಹವಾ; ಸ್ಪೆಲ್ಲಿಂಗ್ ಸ್ಪರ್ಧೆಯಲ್ಲಿ ಅಕ್ಕ ಪ್ರಥಮ, ತಂಗಿ ಅಂತಿಮ ಸುತ್ತಿಗೆ

Pinterest LinkedIn Tumblr

ಕುಂದಾಪುರ: ಅಮೆರಿಕಾ ಕೊಲಂಬಿಯಾ ಮೇಸೊರಿಯನ್‌ನಲ್ಲಿ ನಡೆದ ರೀಜಿನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಕುಂದಾಪುರ ಸಹೋರಿಯರು ಮಿಂಚಿದ್ದಾರೆ. ಅಮೆರಿಕಾ ರೀಜಿನಲ್ ಸ್ಪೆಲ್ಲಿಂಗ್ ಸ್ಪರ್ಧೆ ಗೆಲ್ಲೋದು ಎಂದರೆ ಅದೊಂದು ವಿಶೇಷ ಸಾಧನೆ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಗಿಳಿಯಾರ ನಿವೃತ್ತ ವಿಜಯಾ ಬ್ಯಾಂಕ್ ಹಿರಿಯ ಮೆನೇಜರ್ ಚಿಕ್ಕಯ್ಯ ಶೆಟ್ಟಿ ಮತ್ತು ಜಯಾ ಸಿ.ಶೆಟ್ಟಿ ಪುತ್ರಿ ಬ್ರಹ್ಮಾವರ ಪಡುಬೆಟ್ಟುಮನೆ ಚೈತ್ರಾ ಪಿ.ಶೆಟ್ಟಿ ಹಾಗೂ ಅಂಪಾರು ದಿ.ನಡೂರು ಶಿವರಾಮ ಶೆಟ್ಟಿ ಗಿರಿಜಮ್ಮ ಶೆಡ್ತಿ ಪುತ್ರ ಡಾ. ಪವನ್ ಶೆಟ್ಟಿ ಪುತ್ರಿಯರಾದ ಜೀಯಾ ಶೆಟ್ಟಿ ಮತ್ತು ಅನ್ಯಾ ಶೆಟ್ಟಿ ವಿಶಿಷ್ಟ ಸಾಧನೆಗೆ ಮಾಡಿದ ಸಹೋದರಿಯರು. ಜೀಯಾ ರಿಜೀನಲ್ ಚಾಂಪಿಯನ್ನಾಗಿದ್ದು, ಇದು ಅವಳ ಸತತ ಎರಡನೆ ಸಾಧನೆ. ಸಹೋದರಿ ಅನ್ಯಾ ಅಂತಿಮ ಹಂತಕ್ಕೆ (ಫೈನಲ್) ತಲುಪಿದ್ದಾರೆ.

ಜೀಯಾ ರಾಷ್ಟ್ರ ಮಟ್ಟದಲ್ಲಿ ನಡೆಯುವ ಸಮ್ಮರ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಗೆ ಸಿದ್ದತೆ ಮಾಡುತ್ತಿದ್ದು, ಸಾಧನೆ ಮೂಲಕ ಕೊಲಂಬಿಯಾ ಮೇಸೊರಿಯನ್ ಪತ್ರಿಕೆ ಮುಖಪುಟ ಅಲಂಕರಿಸಿದ್ದಾಳೆ. ಅಮೆರಿಕಾದಲ್ಲಿ ಸ್ಪೇಲಿಂಗ್ ಹೇಳಿ ಸ್ಪರ್ಧೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗೆಲುವು ಸಾಧಿಸೋದು ವಿಶೇಷ. ಸಹೋದರಿಯರು ವಿಶಿಷ್ಟ ಸಾಧನೆ ಮೂಲಕ ಕುಂದಾಪುರದ ಹೆಸರು ವಿಶ್ವಮಟ್ಟಕ್ಕೆ ಏರಿಸಿದ್ದಾರೆ.

ಸಹೋದರಿ ಸೋಲಿಸಿದ ಅಕ್ಕ
ಮಿಡ್ ಮೇಸೊರಿಯನ್ 25 ಶಾಲೆ ವಿದ್ಯಾರ್ಥಿಗಳು ಸ್ಪೆಲ್ ಬೀ ಸ್ವರ್ಧೆಯಲ್ಲಿ ಭಾಗವಹಿಸಿದ್ದು, 94 ಪದಗಳ ಬಳಿಕ 15 ಸ್ಪೆಲ್ಲರ್ ಹಾಗೂ 20 ಸುತ್ತಿನಲ್ಲಿ ಸ್ಮಿಥ್ ಟೋನ್ ಮಿಡಲ್ ಸ್ಕೂಲ್ ವಿದ್ಯಾರ್ಥಿನಿ ಜೀಯಾ ಟಾಪರ್ ಆಗಿ ಹೊರಹೊಮ್ಮಿದರು. ಜೀಯಾ ಸಹೋದರಿ, ಮೇರಿ ಪೆಕ್ಸಾನ್ ಕೀಲಿ ಎಲಿಮೆಂಟರಿ ಸ್ಕೂಲ್ ವಿದ್ಯಾರ್ಥಿನಿ ಅನ್ಯಾ ಶೆಟ್ಟಿ ಮಣಿಸಿದರು. ಜೀಯಾ ಕಳೆದ ವರ್ಷ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಅನ್ಯ ಕಳೆದ ಭಾರಿ ನಾಲ್ಕನೇ ರೌಂಡ್ ತೃಪ್ತಿಪಟ್ಟುಕೊಂಡಿದ್ದರು.

ಸ್ಪೆಲ್ಲಿಂಗ್ ಸ್ಪರ್ಧೆ ಎಂದರೆ..
ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರು ವಿದ್ಯಾರ್ಥಿಗಳಿಗೆ ಸ್ಪೆಲ್ಲಿಂಗ್ ಕೇಳುವುದು, ಸ್ಪೆಲ್ಲಿಂಗ್ ನೋಡದೆ ಬರೆಯಿರಿ ಅನ್ನುತ್ತಾರಲ್ಲಾ ಹಾಗೆಯೇ ನಡೆಯುವ ಸ್ಪೆಲ್ಲಿಂಗ್ ಸ್ಪರ್ಧೆ. ಆದರೆ ಚಿಕ್ಕಪುಟ್ಟ ವಾಕ್ಯಕ್ಕೆ ಸ್ಪೆಲ್ಲಿಂಗ್ ಹೇಳಿ ಅಂತ ಕೇಳದೆ ದೊಡ್ಡ ದೊಡ್ಡ ವ್ಯಾಕ್ಯಗಳ ಸ್ಪೆಲ್ಲಿಂಗ್ ಹೇಳಲು ಕೇಳುತ್ತಾರೆ. ನಾವು ಒಮ್ಮೊಮ್ಮೆ ಸಣ್ಣ ಪುಟ್ಟ ವಾಕ್ಯಕ್ಕೂ ಸ್ಪೆಲ್ಲಿಂಗ್ ಹೇಳಲು ತಿಣುಕಾಡುತ್ತೇವೆ.. ಸ್ಪೆಲ್ಲಿಂಗ್ ಸ್ಪರ್ಧೆಯಲ್ಲಿ ಕೇಳುವ ದೊಡ್ಡ ದೊಡ್ಡ ವಾಕ್ಯಕ್ಕೆ ಉತ್ತರ ಕೊಡಬೇಕು.

ಇಬ್ಬರಲ್ಲಿರುವ ಪುಸ್ತಕದ ಆಸಕ್ತಿ ಹಾಗೂ ಓದಿನ ಪ್ರೀತಿ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿತು. ಪತಿ ಡಾ. ಪವನ್ ಕುಮಾರ್ ಶೆಟ್ಟಿ ಕೂಡ ಸ್ವರ್ಧೆಯಲ್ಲಿ ಇಬ್ಬರ ಟಾಪ್-೨ರಲ್ಲಿ ನೋಡಲು ಬಯಸಿದ್ದರು. ಟೇಕ್ವಾಂಡೋ, ಸೈನ್ಸ್ ಒಲಂಪಿಯಾರ್ಡ್, ಚೆಸ್, ಮ್ಯಾಥ್ಸ್ ಕಾಂಪಿಟೇಷನ್ ಪ್ರಾಕ್ಟೀಸ್‌ಗಾಗಿ ಬಹಳಷ್ಟು ಸಮಯ ಮೀಸಲಿರಿಸಿದ್ದರು.
-ಚೈತ್ರಾ ಶೆಟ್ಟಿ, ತಾಯಿ

Comments are closed.