ಕರಾವಳಿ

ಪ್ರಧಾನಿ ‘ಪರೀಕ್ಷಾ ಪೇ ಚರ್ಚಾ’; ಉಡುಪಿ ಜಿಲ್ಲೆ ಆರ್ಡಿ ಚಾರಮಕ್ಕಿ ಶಾಲೆ ಅನುಷಾ ಆಯ್ಕೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ನಡೆಯುವ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಆಲ್ಬಾಡಿ-ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿನಿ ಅನುಷಾ ಆಯ್ಕೆ ಆಗಿದ್ದಾರೆ.

ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಪಾಲ್ಗೊಳ್ಳಲು ಹತ್ತು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಅರ್ಜಿ ಹಾಕಿದ್ದು, 1500 ವಿದ್ಯಾರ್ಥಿಗಳ ಆಯ್ಕೆ ಮಾಡಿದ್ದು ಅವರು ವೀಕ್ಷಣೆಗೆ ಅರ್ಹರು. ಅದರಲ್ಲಿ 30 ವಿದ್ಯಾರ್ಥಿಗಳು ಪ್ರಧಾನಿ ಜೊತೆ ನೇರ ಸಂವಾದ ನಡೆಸಲು ಆಯ್ಕೆ ಆಗಿದ್ದಾರೆ. ರಾಜ್ಯದಿಂದ ಇಬ್ಬರು ಆಯ್ಕೆ ಆಗಿದ್ದು, ಬೆಂಗಳೂರಿಂದ ಓರ್ವ ವಿದ್ಯಾರ್ಥಿ ಮತ್ತು ಉಡುಪಿ ಜಿಲ್ಲೆಯಿಂದ ಅನುಷಾ ಆಯ್ಕೆಯಾದ ಮೊತ್ತೊಬ್ಬ ವಿದ್ಯಾರ್ಥಿನಿ.

(ಅನುಷಾ)

ಮಡಾಮಕ್ಕಿ ಸಮೀಪದ ನಿವಾಸಿ ಕೃಷ್ಣ ಕುಲಾಲ ಮತ್ತು ಜಯಲಕ್ಷ್ಮೀ ಕೆ.ಕುಲಾಲ ನಾಲ್ವರು ಹೆಣ್ಣು ಮಕ್ಕಳಲ್ಲಿ ಅನುಷಾ ಕಿರಿಯವಳು. ಕೃಷ್ಣ ಕುಲಾಲ ಗಾರೆ ಕೆಲಸಗಾರರಾಗಿದ್ದು, ತಾಯಿ ಜಯಲಕ್ಷ್ಮಿ ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಕಷ್ಟಪಟ್ಟು ತಮ್ಮ ನಾಲ್ವರು ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಿದ್ದು, ಅನುಷಾ ಪ್ರತಿಭಾವಂತೆಯಾಗಿ ಗುರುತಿಸಿಕೊಂಡಿದ್ದಾಳೆ. ಒಟ್ಟಾರೆ ಅತ್ಯಂತ ಗ್ರಾಮೀಣ ಭಾಗದ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಪ್ರಧಾನ ಮಂತ್ರಿ ಜೊತೆ ನಡೆಯುವ ಸಂವಾದಕ್ಕೆ ಆಯ್ಕೆ ಆಗುವ ಮೂಲಕ ಆರ್ಡಿಗೆ ಕೀರ್ತಿ ತಂದಿದ್ದಾಳೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ ಮರಕಾಲ ಹಾಗೂ ಶಿಕ್ಷಕರ ಪ್ರೇರಣೆ ಸಿಕ್ಕಿದ್ದು, ಮುಂದೆ ಇಂಜನಿಯರಿಂಗ್ ಮಾಡುವಾಸೆಯಿದ್ದು, ಪ್ರಧಾನಿ ಜೊತೆ ಶಿಕ್ಷಣಕ್ಕೆ ಸಹಕಾರ ಮಾಡುವಂತೆ ವಿನಂತಿಸುತ್ತೇನೆ. ಹೆಣ್ಣು ಮಕ್ಕಳು ಎಲ್ಲಿವರಿಗೆ ಓದುತ್ತಾರೋ ಅಲ್ಲಿಯವರೆಗಿನ ಶಿಕ್ಷಣದ ಜವಾಬ್ದಾರಿ ಸರ್ಕಾರವೇ ಹೊರುವ ಜೊತೆ ಉಚಿತ ಶಿಕ್ಷಣ ಸಿಗಬೇಕು. ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತುಕೊಡುವ ಜೊತೆ, ಮಹಿಳೆಯರು ಯಾವ ಕ್ಷೇತ್ರದಲ್ಲಿ ಆಸಕ್ತಿ ವಹಿಸುತ್ತಾರೋ ಅದರಲ್ಲಿ ಹೆಚ್ಚಿನ ಪರಿಣತಿ ಪಡೆಯಲು ಉತ್ತೇಜನ ಕೊಡಬೇಕು. ಇಂದು ಮಹಿಳೆ ಎಲ್ಲಾ ರಂಗದಲ್ಲೂ ಮುಂಚೂಣಿಯಲ್ಲಿದ್ದು ಇನ್ನಷ್ಟು ಉತ್ತೇಜನೆ ನೀಡುವ ಜೊತೆ ಪುರುಷರ ಸರಿಸಮನಾಗಿ ನಿಲ್ಲುವ ಅಕಾಶ ಇನ್ನಷ್ಟು ಹೆಚ್ಚಬೇಕು. ಯಾವ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿರಾಗದಂತೆ ನೋಡಿಕೊಳ್ಳುವ ಮೂಲಕ ಸಮಾಜಿಕ, ಶೈಕ್ಷಣಿಕ, ರಾಜಕೀಯ, ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆ ಇನ್ನಷ್ಟು ಬೆಳೆಯಲು ಅನುಕೂಲ ಮಾಡಬೇಕು. ಬಡ ಹೆಣ್ಮಕ್ಕಳು ಶಿಕ್ಷಣದಿಂದ ವಂಚಿರಾಗದಂತೆ ನೋಡಿಕೊಳ್ಳುವ ಜೊತೆಗೆ ಅವರ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ತ್ವರಿತ ತನಿಖೆ ನಡೆಸಿ, ಶಿಕ್ಷೆ ಸಿಗುವಂತೆ ಆಗಬೇಕು.
– ಅನುಷಾ, 10ನೇ ತರಗತಿ ವಿದ್ಯಾರ್ಥಿನಿ, ಆರ್ಡಿ ಸರ್ಕಾರಿ ಪ್ರೌಢಶಾಲೆ

Comments are closed.