ಯುವಜನರ ವಿಭಾಗ

ಜನರಲ್ಲಿ ಹೆಚ್ಚುತ್ತಿದೆ ಸೆ#ಕ್ಸ್ಟಿಂಗ್! ನಿಮ್ಮ ನ”ಗ್ನ ಫೋಟೋ-ವಿಡಿಯೋ ಲೀಕ್ ಆಗುವ ಮುನ್ನ ಹೆಚ್ಚೆತ್ತುಕೊಳ್ಳಿ…

Pinterest LinkedIn Tumblr

ನೀವು ಎಷ್ಟು ಜಾಗ್ರತೆ ಆಗಿರುತ್ತೀರೋ…ಅಷ್ಟು ಒಳ್ಳೆಯದು, ಅದು ನೀವು ಬಳಸುವ ಮೊಬೈಲ್ ಹಾಗೂ ಇಂಟರ್ನೆಟ್’ನಲ್ಲಿ. ಇಂಟರ್ನೆಟ್ ಯುಗದಲ್ಲಿ ಯುವಜನರಲ್ಲಿ ನಾನಾ ರೀತಿಯ ಮೋಜು-ಮಸ್ತಿಗಳು ನಡೆಯುತ್ತಲೇ ಇದೆ.

ಮೊಬೈಲ್ ತಂತ್ರಜ್ಞಾನ ಬೆಳೆದಂತೆ ಸೆ#ಕ್ಸ್ಟಿಂಗ್ ಕೂಡಾ ಸುಲಭವಾಗಿ ಜನರನ್ನು ಅಂಟಿಕೊಂಡಿದೆ. ‘ಮಜಾ’ ನೀಡುವ ಈ ಸೆ#ಕ್ಸ್ಟಿಂಗ್ ಭಾರೀ ಅನಾಹುತಗಳಿಗೆ ಕಾರಣವಾಗುವುದನ್ನೂ ನಾವು ದಿನನಿತ್ಯ ನೋಡುತ್ತೇವೆ.

ಸೆ#ಕ್ಸ್ಟಿಂಗ್ ನಲ್ಲಿ ಕಾ”ಮಪ್ರಚೋದಕ ಸಂಭಾಷಣೆಗಳು, ಪರಸ್ಪರರು ನ”ಗ್ನ ಫೋಟೋಗಳು ಹಾಗೂ ವಿಡಿಯೋಗಳನ್ನು ಕಳುಹಿಸುವುದು ಸಾಮಾನ್ಯ. ಯುವಕ-ಯುವತಿಯರಲ್ಲಿ ಬೆಳೆಯುತ್ತಿರುವ ಈ ಪ್ರವೃತ್ತಿಯಲ್ಲಿ ಎದುರಿಸಬೇಕಾದ ಅನಾಹುತಗಳೇನು?

ಆತ್ಮೀಯರೆಂದು ಭಾವಿಸಲಾಗುವ ವ್ಯಕ್ತಿ ನಂಬಿಕೆ ದ್ರೋಹವೆಸಗುವ ಸಾಧ್ಯತೆಗಳಿವೆ. ಅವರಿಗೆ ಕಳುಹಿಸಿರುವ ನ”ಗ್ನ ಫೋಟೋ ಆ ವ್ಯಕ್ತಿ ಕಳುಹಿಸಿದವರ ಅನುಮತಿಯಿಲ್ಲದೆ ಅಥವಾ ಅರಿವಿಗೆ ಬಾರದಂತೆ, ಇತರರಿಗೆ ತೋರಿಸುವುದು, ಅಥವಾ ಹಂಚಿಕೊಳ್ಳಲೂ ಬಹುದು.

ಇದೇ ಫೋಟೋ ಮುಂದೆ ಬ್ಲಾ”ಕ್ ಮೇಲ್, ಸೈಬರ್ ಬೆ”ದರಿಕೆಗಳಿಗೂ ಎಡೆಮಾಡಿಕೊಡುವ ಸಾಧ್ಯತೆಯನ್ನು ಅಲ್ಲಗಲೆಯುವಂತಿಲ್ಲ.

ಸೈಬರ್ ತಜ್ಞರ ಪ್ರಕಾರ, ವ್ಯಕ್ತಿಯು ಬಳಸುವ ಆ್ಯಪ್ ಗಳು ಕೂಡಾ ಪ್ರಮುಖ ಪಾತ್ರ ವಹಿಸುತ್ತವೆ. ಕಳುಹಿಸಲಾಗುವ ಫೋಟೋ ಬರೇ ಫೋನ್ ನಲ್ಲಿ ಮಾತ್ರವಲ್ಲ, ಆ ಆ್ಯಪ್ ಸರ್ವರ್ ನಲ್ಲೂ ಸಂಗ್ರಹಿಸಲ್ಪಡುವ ಸೌಲಭ್ಯವೂ ಇರುತ್ತದೆ. ಫೋನ್ ನಲ್ಲಿ ಡಿಲೀಟ್ ಆದರೂ ಕ್ಲೌಡ್ ಸ್ಟೋರೇಜ್ ನಲ್ಲಿ ಫೋಟೋ-ವಿಡಿಯೋ ಡಿಲೀಟ್ ಆಗಲ್ಲ. ಒಂದು ವೇಳೆ ಸರ್ವರ್ ಹ್ಯಾ”ಕ್ ಆದರೆ, ಆ ಫೋಟೋಗಳು ಲೀಕ್ ಆಗೋದು ಖಚಿತ!

2016ರಲ್ಲಿ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮಹಿಳೆ ಜೊತೆಗೆ ಇಂತಹ ಘಟನೆ ಸಂಭವಿಸಿತ್ತು. ಹ್ಯಾ”ಕರ್ ಆಕೆಯ ಫೋಟೋಗಳನ್ನು ಕದ್ದು ಆಕೆಗೆ ಬ್ಲಾ”ಕ್ ಮೇಲ್ ಮಾಡಿದ್ದು ವರದಿಯಾಗಿತ್ತು.

ಸಂಗಾತಿ, ಹ್ಯಾ”ಕರ್ ಹೊರತಾಗಿ ನಿಮ್ಮ ಫೋನ್ ಬಳಸುವ ಇತರರಿಂದಲೂ ಈ ರಿಸ್ಕ್ ತಪ್ಪಿದ್ದಲ್ಲ. ನಿಮ್ಮ ಗೆಳೆಯರು, ಸಂಬಂಧಿಕರೂ ನಿಮ್ಮ ಫೋನ್ ಬಳಸುತ್ತಾರೆಂದರೆ ಸಮಸ್ಯೆ ಮುಂದಾಗಬಹುದು.

ಇವರ ಹೊರತಾಗಿ, ನಿಮ್ಮ ಫೋನ್ ರಿಪೇರಿ ಮಾಡುವವರು ಕೂಡಾ ನಿಮ್ಮ ಖಾಸಗಿ ಫೋಟೋಗಳನ್ನು ಲೀಕ್ ಮಾಡಬಹುದು.

Comments are closed.