ಕರಾವಳಿ

ಕೋವಿಡ್19- ಬಡ ಕುಟುಂಬಗಳಿಗೆ ಸಹಾಯಹಸ್ತ ಚಾಚಿದ ಇಂಟರ್ ನ್ಯಾಶನಲ್ ಕಿಕ್ ಬಾಕ್ಸರ್

Pinterest LinkedIn Tumblr

ಕುಂದಾಪುರ: ಕೊರೋನಾ ಮಹಾಮಾರಿ ದಿನೇದಿನೇ ಹೆಚ್ಚುತ್ತಿದೆ. ಬಹಳಷ್ಟು ಮಂದಿ ಇದರಿಂದ ಅಸಾಹಯಕ ಪರಿಸ್ಥಿತಿಯಲ್ಲಿದ್ದು ಬೆಂಗಳೂರಿನ ಖ್ಯಾತ ಇಂಟರ್‌ ನ್ಯಾಶನಲ್ ಕಿಕ್ ಬಾಕ್ಸರ್ ಗಿರೀಶ್ ಆರ್. ಗೌಡ ಅವರು ಕುಂದಾಪುರದ ಮೇಲಿನ ಅಭಿಮಾನದಿಂದ ಇಲ್ಲಿನ‌ ಬಡ ಕುಟುಂಬಗಳಿಗೆ ಕಿಟ್ ನೀಡಿದ್ದಾರೆ.
ಕಾಳಾವರ ಗ್ರಾಮಪಂಚಾಯತ್ ವ್ಯಾಪ್ತಿಯ ಅಸೋಡು, ಕಾಳಾವರ, ಸಲ್ವಾಡಿ, ಬಡಾಗುಡ್ಡೆಯ ಒಂದು ಮನೆಗೆ ತಲಾ 5 ಕೆ.ಜಿ ಅಕ್ಕಿ ಬ್ಯಾಗ್ ಹಾಗೂ 1 ಪ್ಯಾಕೆಟ್ ಉಪ್ಪು ನೀಡಲಾಗಿದ್ದು ಸುಮಾರು 40 ಮನೆಗಳಿಗೆ ಸಹಾಯಹಸ್ತ ಚಾಚಿದ್ದಾರೆ.

ಕೋಟೇಶ್ವರದ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರು ಮನೆಮನೆಗೆ ತೆರಳಿ ಕಿಟ್ ನೀಡಿದ್ದು ಕೊರೋನಾ ಜಾಗೃತಿ ಮೂಡಿಸಿದರು. ಕೋಟೇಶ್ವರ ವರದರಾಜ ಎಂ ಶೆಟ್ಟಿ ಕಾಲೇಜಿನ ಸ್ಕೌಟ್ಸ್ ಮತ್ತು ಗೈಡ್ಸ್ ರೇಂಜರ್ ನಿರಕ್ಷಿತಾ, ರೋವರ್ಸ್ ವಿಜೇತ್, ಉಲ್ಲಾಸ್, ವಿದ್ಯಾರ್ಥಿ ಅಭಿಷೇಕ್ ಈ ಸಂದರ್ಭ ಇದ್ದರು.

Comments are closed.