ಯುವಜನರ ವಿಭಾಗ

ನಿಮ್ಮ ಲೈಂಗಿಕ ಆಸಕ್ತಿ ಕುಗ್ಗಲು ಈ ವಿಷಯಗಳು ಕಾರಣ ಆಗಬಹುದು…..!

Pinterest LinkedIn Tumblr

ಮದುವೆಯಾದ ಆರಂಭದಲ್ಲಿ ಇರುವ ಲೈಂಗಿಕ ಆಸಕ್ತಿ, ಮದುವೆಯಾದ ನಂತರ ಪ್ರತಿ ವರ್ಷ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು. ಅದಕ್ಕೆ ನಮ್ಮ ಆಹಾರ ಕ್ರಮ, ಜೀವನ ಶೈಲಿ ಎಲ್ಲವೂ ಪ್ರಭಾವ ಬೀರುತ್ತದೆಯಂತೆ. ಕಚೇರಿಯಲ್ಲಿ ಹೆಚ್ಚು ಸಮಯ ಕಳೆಯುವುದು ಕೂಡ ಲೈಂಗಿಕ ಆಸಕ್ತಿ ಕುಗ್ಗಲು ನೇರ ಕಾರಣ!

ಲೈಂಗಿಕ ಆಸಕ್ತಿ ಕಡಿಮೆಯಾಗಿ ವಿಚ್ಛೇದನ ಪಡೆದುಕೊಂಡ ಸಾಕಷ್ಟು ಪ್ರಕರಣಗಳು ವರದಿಯಾಗಿವೆ. ಲೈಂಗಿಕ ಆಸಕ್ತಿ ಹೆಚ್ಚಲು ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ವಿಧದ ಔಷಧಿಗಳು ಲಭ್ಯ. ಅದರ ಜೊತೆಗೆ ಕೆಲ ಆಹಾರಗಳ ಮೂಲಕವೂ ಕಾಮಾಸಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಆದರೆ, ಇದೆಲ್ಲಕ್ಕಿಂತ ಸುಲಭವಾದ ಕೆಲ ಮಾರ್ಗಗಳನ್ನು ವೈದ್ಯರು ಸೂಚಿಸಿದ್ದಾರೆ.

ಮೊಬೈಲ್​ ಬಳಕೆ ಕಡಿಮೆ ಮಾಡಿ!
ಲೈಂಗಿಕ ಸಂಪರ್ಕ ಮಾಡುವ ವೇಳೆ ಕೆಲವರು ಮೊಬೈಲ್​ ಬಳಕೆ ಮಾಡುತ್ತಾರೆ. ಆದರೆ, ಇದರಿಂದ ಲೈಂಗಿಕ ಆಸಕ್ತಿ ಕುಗ್ಗುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು. “ಸೆಕ್ಸ್​ ಮಾಡುವಾಗ ಮತ್ತು ಅದಕ್ಕೂ ಮೊದಲು ಮೊಬೈಲ್​ ಬಳಕೆ ಮಾಡುವುದರಿಂದ ತಿಳಿಯದೆ ಲೈಂಗಿಕ ಆಸಕ್ತಿ ಕುಗ್ಗುತ್ತದೆ. ಇದು ಒಂದೇ ದಿನಕ್ಕೆ ಆಗುವಂಥದ್ದಲ್ಲ. ಕ್ರಮೇಣವಾಗಿ ಇದರ ಪ್ರಭಾವ ತಿಳಿಯುತ್ತದೆ. ಹಾಗಾಗಿ, ಆ ಬಗ್ಗೆ ಎಚ್ಚರಿಕೆ ವಹಿಸಿ. ಲೈಂಗಿಕ ಸಂಪರ್ಕಕ್ಕೂ ಮೊದಲು ಮೊಬೈಲ್​ ಬಳಕೆ ನಿಷೇಧಿಸಿ,” ಎಂಬುದು ತಜ್ಞರ ಸೂಚನೆ.

ನೀಲಿ ಚಿತ್ರದಿಂದ ದೂರವಿರಿ
ಅನೇಕರು ನೀಲಿ ಚಿತ್ರ ವೀಕ್ಷಣೆ ಮಾಡುತ್ತಾರೆ. ಇದರಿಂದಲೂ ಲೈಂಗಿಕ ಜೀವನದ ಮೇಲೆ ಆಸಕ್ತಿ ಕುಗ್ಗಬಹುದಂತೆ! “ಪಾರ್ನ್ ಚಿತ್ರ​ ವೀಕ್ಷಣೆ ಮಾಡುವುದರಿಂದ ಸಂತೋಷ ಸಿಗುತ್ತದೆ ಎಂಬುದು ನಿಜ. ಆದರೆ, ಬರುಬರುತ್ತಾ ಪ್ರಾಯೋಗಿಕವಾಗಿ ಮಾಡುವುದಕ್ಕಿಂತ ಅದನ್ನು ವೀಕ್ಷಿಸಿದರೆ ಹೆಚ್ಚು ಸುಖ ಸಿಗುತ್ತದೆ ಎನ್ನುವ ಫೀಲ್​ ಬರಲು ಆರಂಭವಾಗುತ್ತದೆ. ಇದು ತುಂಬಾ ಅಪಾಯಕಾರಿ. ಲೈಂಗಿಕ ಜೀವನವನ್ನು ಇದು ಹಾಳು ಮಾಡಬಹುದು,” ಎಂಬುದು ತಜ್ಞರ ಅಭಿಪ್ರಾಯ.

ಒತ್ತಡ ಕಡಿಮೆ ಮಾಡಿಕೊಳ್ಳಿ
ಕಚೇರಿ ಎಂದರೆ ಅಲ್ಲಿ ಒತ್ತಡ ಇದ್ದೇ ಇರುತ್ತದೆ. ಆದರೆ, ಒತ್ತಡ ಕಡಿಮೆ ಮಾಡಿಕೊಂಡರೆ ಲೈಂಗಿಕ ಜೀವನ ಉತ್ತಮವಾಗಿರಬಹುದು ಎಂಬುದು ಲೈಂಗಿಕ ತಜ್ಞರ ಅಭಿಪ್ರಾಯ. ಹಾಗಾಗಿ ಈ ವಿಚಾರದ ಬಗ್ಗೆ ಹೆಚ್ಚು ಗಮನ ಹರಿಸಿದರೆ ಒಳಿತು ಎನ್ನುತ್ತಾರೆ ವೈದ್ಯರು.

Comments are closed.