ಯುವಜನರ ವಿಭಾಗ

ಇಂದು ಆಚರಿಸಲಾಗುವ ‘ವಿಶ್ವ ಸ್ನೇಹಿತರ ದಿನ”ದ ಹಿಂದೆ ಇದೆ ಒಂದು ರೋಚಕತೆ !

Pinterest LinkedIn Tumblr

ರಕ್ತ ಸಂಬಂಧಗಳನ್ನು ಮೀರಿದ ಬಂಧ ಈ ಸ್ನೇಹ. ಸ್ನೇಹ ಎಂದರೆ ಬಿಡಿಸಲಾಗದ ನಂಟು. ಈ ಸುಂದರ ಅನುಬಂಧ ಎಲ್ಲರ ಜೀವನದಲ್ಲಿ ಅತಿಮುಖ್ಯ ಪಾತ್ರ ವಹಿಸುತ್ತದೆ. ಗೆಳೆತನ ಎಂಬ ನೌಕೆಯಲ್ಲಿ ನಾವೆಲ್ಲರೂ ಪಯಣಿಗರು ಮಾತ್ರ. ಅಷ್ಟಕ್ಕೂ ಈ ಮಾತುಗಳೆಲ್ಲಾ ಈಗ ಯಾಕೆ ಅಂತೀರಾ? ವಿಶೇಷ ಇದೆ. ಆಗಸ್ಟ್​ ತಿಂಗಳ ಮೊದಲ ಭಾನುವಾರ(ಆ.4)ವನ್ನು ‘ವಿಶ್ವ ಸ್ನೇಹಿತರ ದಿನ’ ಎಂದು ಆಚರಿಸಲಾಗುತ್ತದೆ. ಫ್ರೆಂಡ್​ಶಿಪ್​ ಡೇ ಏಕೆ ಆಚರಿಸುತ್ತಾರೆ? ಯಾವಾಗಿಂದ ಈ ವಿಶೇಷ ಆಚರಣೆ ಶುರುವಾಗಿದ್ದು ಅಂತಾ ನಿಮಗೆ ಗೊತ್ತಾ? ಇಲ್ಲಿದೆ ಓದಿ.

1958ರಿಂದ ಪ್ರಪಂಚದಾದ್ಯಂತ ‘ವಿಶ್ವ ಸ್ನೇಹಿತರ ದಿನ’ವನ್ನು ಆಚರಿಸಲಾಗುತ್ತಿದೆ. ಇದನ್ನು ಅಂತರಾಷ್ಟ್ರೀಯ ಗೆಳೆತನದ ದಿನ ಎಂದೂ ಸಹ ಕರೆಯುತ್ತಾರೆ. ವಿಶ್ವ ಸ್ನೇಹಿತರ ದಿನವನ್ನು ಆಚರಣೆ ಮಾಡಲು ವಿಶ್ವಸಂಸ್ಥೆಯು ಸಹ ಪ್ರೋತ್ಸಾಹ ನೀಡಿದೆ. ಶಾಂತಿಯನ್ನು ಕಾಪಾಡುವ ಉದ್ದೇಶದಿಂದ ವಿವಿಧ ದೇಶಗಳಲ್ಲಿ ವೈವಿಧ್ಯಮಯವಾದ ಸಂಸ್ಕೃತಿಗಳಲ್ಲಿ ಸ್ನೇಹ ದಿನವನ್ನು ಆಚರಣೆ ಮಾಡಲಾಗುತ್ತಿದೆ.

ಅಷ್ಟಕ್ಕೂ ಈ ಸ್ನೇಹಿತರ ದಿನವನ್ನು ಮೊಟ್ಟ ಮೊದಲ ಬಾರಿಗೆ ಆಚರಿಸಿದ ದೇಶ ಪರಾಗ್ವೆ. ಅದು 1958ರಲ್ಲಿ. ಗ್ರೀಟಿಂಗ್​ ಕಾರ್ಡ್​​ ಕಂಪನಿ ಈ ಆಚರಣೆಗೆ ಉತ್ತೇಜನ ನೀಡಿತು. ಗೆಳೆಯರು ಪರಸ್ಪರ ಗ್ರೀಟಿಂಗ್ ಕಾರ್ಡ್​​ಗಳನ್ನು ಕೊಡುವ ಮೂಲಕ ಸ್ನೇಹದಿನವನ್ನು ಆಚರಿಸಿದರು. ಹೀಗಾಗಿ 1958ರ ಜುಲೈ 30ರಂದು ವಿಶ್ವದಲ್ಲೇ ಮೊದಲು ಫ್ರೆಂಡ್​ಶಿಪ್​ ಡೇ ಆಚರಿಸಲಾಯಿತು ಎಂದು ಹೇಳಲಾಗುತ್ತದೆ.

2011ರ ಏಪ್ರಿಲ್​ 27ರಲ್ಲಿ ವಿಶ್ವಸಂಸ್ಥೆಯು ಸಾಮಾನ್ಯ ಸಭೆಯನ್ನು ಆಯೋಜಿಸಿ ಜುಲೈ 30ರಂದು ಅಧಿಕೃತವಾಗಿ ಫ್ರೆಂಡ್​ಶಿಪ್​ ಆಚರಣೆ ಮಾಡುವಂತೆ ಘೋಷಣೆ ಹೊರಡಿಸಿತು. ಬಳಿಕ ಫ್ರೆಂಡ್​ಶಿಪ್​ ಡೇ ಹರಿಕಾರ ಹಾಲ್​ಮಾರ್ಕ್​​​ ಕಾರ್ಡ್​​ನ ಸಂಸ್ಥಾಪಕ ಜಾಯ್ಸ್​​ಹಾಲ್​ ಆಗಸ್ಟ್​​ 2 ರಂದು ಗೆಳೆಯರ ದಿನವನ್ನು ಆಚರಿಸುವಂತೆ ಘೋಷಿಸಿದರು. ಭಾರತದಲ್ಲಿ ಆಗಸ್ಟ್​​ ತಿಂಗಳ ಮೊದಲ ಭಾನುವಾರ ಫ್ರೆಂಡ್​ಶಿಪ್​ ಡೇ ಆಚರಿಸಲಾಗುತ್ತದೆ.

ವಿವಿಧ ದೇಶಗಳು, ಜನರು ಮತ್ತು ಸಂಸ್ಕೃತಿಗಳ ನಡುವೆ ಉತ್ತಮ ಬಂಧವನ್ನು ಬೆಸೆಯಲು ಈ ಫ್ರೆಂಡ್​ಶಿಪ್​ ಡೇ ಆಚರಣೆ ಮಾಡಲಾಗುತ್ತದೆ. “ಗೆಳೆತನ ಸೌಹಾರ್ದತೆ, ನಂಬಿಕೆ ಮತ್ತು ಉತ್ತಮ ಬಂಧವನ್ನು ರೂಪಿಸುತ್ತದೆ. ಸ್ನೇಹದಿಂದ ಬದಲಾವಣೆ ಸಾಧ್ಯ, ಏನನ್ನಾದರೂ ಕೊಡುಗೆ ನೀಡೋಣ,’ ಎಂದು ವಿಶ್ವಸಂಸ್ಥೆ ಹೇಳುತ್ತದೆ.

Comments are closed.