ಅಂತರಾಷ್ಟ್ರೀಯ

ಈ ‘ಶ್ರೀಮಂತ’ ಕುರುಡ ಭಿಕ್ಷುಕನ ಬಳಿ ಇದೆ ಮೂರು ಮನೆ-5 ಲಕ್ಷ ಬ್ಯಾಂಕ್​ ಬ್ಯಾಲೆನ್ಸ್ ! ಈತನ ವರಮಾನ ಕೇಳಿದ್ರೆ ಶಾಕ್ ಆಗುವುದು ಖಂಡಿತ !

Pinterest LinkedIn Tumblr

ಭಿಕ್ಷೆ ಬೇಡಿ ಜೀವನ ಸಾಗಿಸುವುದು ಬಹಳ ಕಷ್ಟದ ಕೆಲಸ ಎನ್ನುತ್ತಾರೆ ಹಲವರು. ಆದರೆ ಭಿಕ್ಷೆ ಬೇಡುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಅದರಲ್ಲೇ ಯಶಸ್ಸು ಕಂಡಿದ್ಧಾರೆ. ಶ್ರೀಲಂಕಾದ ಶ್ರೀಮಂತ ಕುರುಡ ಭಿಕ್ಷುಕನೊಬ್ಬನ ಕಥೆ ಕೇಳಿದರೆ ನೀವು ಆಶ್ಚರ್ಯ ಪಡುತ್ತೀರಿ.

ಆತ 65 ವರ್ಷದ ಕುರುಡ ಭಿಕ್ಷುಕ. ಕಳೆದ 25 ವರ್ಷಗಳಿಂದ ರೈಲುಗಳಲ್ಲಿ ಭಿಕ್ಷೆ ಬೇಡುತ್ತಿದ್ದಾನೆ. ಈ ಭಿಕ್ಷೆ ಬೇಡಿದ ಹಣದಿಂದಲೇ ಮೂರು ಮನೆಗಳನ್ನು ಕಟ್ಟಿದ್ದಾನೆ. ಇದರ ಜೊತೆಗೆ ಬ್ಯಾಂಕ್​ ಅಕೌಂಟ್​ ಕೂಡ ಹೊಂದಿದ್ದು, 5 ಲಕ್ಷ ಬ್ಯಾಂಕ್​ ಬ್ಯಾಲೆನ್ಸ್​​ ಹೊಂದಿದ್ದಾನೆ. ವಿಷಯ ತಿಳಿದ ರೈಲ್ವೆ ಪೊಲೀಸರು ಅನುಮಾನಗೊಂಡು ಆತನನ್ನು ಬಂಧಿಸಿದ್ಧಾರೆ.

“ಕಟ್ಟಿರುವ ಮೂರು ಮನೆಗಳಲ್ಲಿ ಎರಡು ಮನೆಗಳನ್ನು ವರದಕ್ಷಿಣೆಯಾಗಿ ಇಬ್ಬರು ಹೆಣ್ಣು ಮಕ್ಕಳಿಗೆ ಕೊಟ್ಟಿದ್ದೇನೆ. ಉಳಿದಿರುವ ಇನ್ನೊಂದು ಮನೆಯನ್ನು ಬಾಡಿಗೆಗೆ ಕೊಡಲು ಪ್ಲಾನ್​ ಮಾಡುತ್ತಿದ್ದೇನೆ,” ಎಂದು ವಿಚಾರಣೆ ವೇಳೆ ಭಿಕ್ಷುಕ ಹೇಳಿದ್ದಾನೆ.

ಭಿಕ್ಷುಕನನ್ನು ಬಂಧಿಸಿದ ವೇಳೆ ಆತನ ಬಳಿ ಸುಮಾರು 4 ಸಾವಿರ ಹಣ ಇತ್ತು. ಅದು ಗಂಪಹಾ-ಕೊಲಂಬೋ ನಡುವೆ ಪ್ರಯಾಣಿಸುವ ಪ್ರಯಾಣಿಕರಿಂದ ಸಂಗ್ರಹಿಸಿದ ಹಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆತನ ಹೆಂಡತಿ ಕಾಲವಾಗಿದ್ದು, ಗಂಪಹಾ ನಗರದಲ್ಲಿ ವಾಸವಿದ್ದಾನೆ. ತನ್ನ ಇಬ್ಬರು ಹೆಣ್ಣುಮಕ್ಕಳು ಸ್ವಂತ ಕಾರುಗಳನ್ನು ಹೊಂದಿದ್ದು, ಅಳಿಯಂದಿರು ಕೂಡ ಒಳ್ಳೆಯ ಕೆಲಸದಲ್ಲಿ ಇದ್ದಾರೆ. ನಾನು ಭಿಕ್ಷೆ ಬೇಡುವ ಕೆಲಸವನ್ನು ಮಾತ್ರ ಮರೆತಿಲ್ಲ ಎಂದು ಭಿಕ್ಷುಕ ಹೇಳಿದ್ದಾನೆ.

ಕುರುಡುತನ ನನ್ನ ಪಾಲಿಗೆ ಒಳ್ಳೆಯ ವರವಾಗಿದೆ. ಇದರಿಂದಾಗಿ ನಾನು ತಿಂಗಳಿಗೆ ಒಂದೂವರೆ ಲಕ್ಷ ಸಂಪಾದಿಸುತ್ತಿದ್ದೇನೆ. ನಾನು ರೈಲುಗಳಲ್ಲಿ ಭಿಕ್ಷೆ ಬೇಡುವುದು ನನ್ನ ಇಬ್ಬರೂ ಮಕ್ಕಳಿಗೂ ಗೊತ್ತು ಎಂದು ಆತ ತಿಳಿಸಿದ್ದಾನೆ.

Comments are closed.