ಯುವಜನರ ವಿಭಾಗ

ನೀವು ಹುಡುಗಿಯನ್ನು ಪ್ರಪೋಸ್‌ ಮಾಡುವ ಮುನ್ನ ಈ ವರದಿ ಓದಿ….ಇದು ಖಂಡಿತ ನಿಮಗೆ ಸಹಕಾರಿ ಆಗುತ್ತೆ…

Pinterest LinkedIn Tumblr

ಯಾರಾದರು ಇಷ್ಟವಾದರೆ ಲವ್‌ ಎಟ್‌ ಫಸ್ಟ್ ಸೈಟ್‌ ಎಂದು ಆತುರಪಟ್ಟು ಪ್ರಪೋಸ್‌ ಮಾಡಬೇಡಿ. ಹೀಗೆ ಆತುರಪಟ್ಟು ಲವ್‌ಗೆ ಬಿದ್ದವರಲ್ಲಿ ಕೆಲವರಷ್ಟೆ ಚೆನ್ನಾಗಿ ಇರುತ್ತಾರೆ. ಪ್ರಪೋಸ್‌ ಮಾಡುವ ಮುನ್ನ ಸ್ವಲ್ಪ ಯೋಚಿಸಿ ಪ್ರಪೋಸ್‌ ಮಾಡಿ, ಅದರಲ್ಲೂ ನೀವು ನಿಮ್ಮಲ್ಲಿಯೇ ಈ ಪ್ರಶ್ನೆ ಕೇಳಿ ಕೊಂಡರೆ ಒಂದು ಕ್ಲಾರಿಟಿ ಸಿಗುತ್ತದೆ.

ಮೊದಲ ನೋಟಕ್ಕೆ ನಿಮಗೆ ಯಾರೋ ಇಷ್ಟವಾಗಿ ಅವರನ್ನು ಮದುವೆಯಾಗಬೇಕು ಎಂದು ನಿರ್ಧರಿಸಿ ಅವರನ್ನು ಪ್ರಪೋಸ್‌ ಮಾಡಬೇಕೆಂದು ಯೋಚಿಸಿದ್ದೀರಾ? ಹಾಗಾದರೆ ಈ ಲೇಖನ ನಿಮಗಾಗಿ.

ಒಂದು ಸಂಬಂಧದ ರೂಪ ಪಡೆಯುವಾಗ ಕೇವಲ ನಿಮ್ಮ ಇಷ್ಟ, ಆಸಕ್ತಿ ಮಾತ್ರ ಮುಖ್ಯವಲ್ಲ. ಹಾಗಂತ ನಿಮ್ಮ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಹೇಳದೆ ಇರಲಿಕ್ಕೆ ಆಗದು. ಆದ್ದರಿಂದ ನೀವು ಇಷ್ಟ ಪಡುವ ವ್ಯಕ್ತಿಯ ವ್ಯಕ್ತಿತ್ವ, ಅಭಿರುಚಿ ಮೊದಲು ಅರಿಯಿರಿ. ಆಕರ್ಷಣೆಯೆಂಬ ಮಾಯೆಯ ಹೊರತಾಗಿಯೂ ವಾಸ್ತವದಲ್ಲಿ ಯೋಚಿಸಿ. ಒಂದಿಷ್ಟು ಪ್ರಶ್ನೆಗಳನ್ನು ಹಾಕಿಕೊಂಡು ಅದಕ್ಕೆ ಉತ್ತರ ಹುಡುಕಿ.

ನೀವು ಆಕರ್ಷಣೆಗೆ ಒಳಗಾದ ವ್ಯಕ್ತಿಯ ಬಗ್ಗೆ ಎಷ್ಟು ಗೊತ್ತು? ಅವರ ಓದೇನು? ಅಭಿರುಚಿಯೇನು? ಕೆಲಸವೇನು? ಹಿನ್ನೆಲೆಯೇನು ಎಂಬುದನ್ನು ತಿಳಿದುಕೊಳ್ಳಬೇಕು.

ಅವರ ವಿಚಾರಗಳು, ಭಾವನೆಗಳನ್ನು ತಿಳಿಯಲು ಅವರಲ್ಲಿ ಸ್ನೇಹ ಸಂಪಾದಿಸಿ. ಪ್ರೀತಿ ಗೆಳೆತನಕ್ಕಿಂತ ಒಳ್ಳೆಯ ಪೂರ್ವ ಪರೀಕ್ಷೆ ಮತ್ತೊಂದಿಲ್ಲ. ಗೆಳೆತನದಲ್ಲಿ ನಿಮಗೆ ಅವರೇನು ಅಂತ ಗೊತ್ತಾಗಿ ಬಿಡುತ್ತದೆ. ತದನಂತರ ಪ್ರೀತಿಯ ಹಸ್ತ ಚಾಚಬಹುದು.

ಎಲ್ಲಕ್ಕೂ ಮುಖ್ಯವಾಗಿ ಒಳ್ಳೆಯ ಕೇಳುಗರಾಗಿ. ನಿಮ್ಮ ಮತ್ತು ಅವರ ಮಧ್ಯೆ ನೀವೇ ಹೆಚ್ಚು ಮಾತನಾಡುವುದರಿಂದ ಅವರೇನು ಅಂತ ತಿಳಿಯುವುದಿಲ್ಲ. ಹೆಚ್ಚು ಕೇಳಿಸಿಕೊಳ್ಳಿ. ಕೇಳಿಸಿಕೊಳ್ಳುವುದರಿಂದ ಅವರ ವ್ಯಕ್ತಿತ್ವವನ್ನು ಆಳವಾಗಿ ಅರಿಯಬಹುದು.

ಸಾಧ್ಯವಾದರೆ ಅವರ ಮನೆಯವರನ್ನು ಪರಿಚಯ ಮಾಡಿಕೊಳ್ಳಿ. ಅವರ ಮನ ಗೆಲ್ಲುವ ಪ್ರಯತ್ನ ಮಾಡಿ. ವಿಶ್ವಾಸಗಳಿಸಿಕೊಳ್ಳಿ.

ಎಲ್ಲಕ್ಕಿಂತ ಮುಖ್ಯವಾಗಿ ಅವರು ನಿಮಗೆಷ್ಟು ಸೂಕ್ತ? ಅವರ ಭಾವಗಳು ನಿಮಗೆಷ್ಟು ಹಿಡಿಸಬಹುದು? ಬದುಕಿನುದ್ದಕ್ಕೂ ಅವರೊಂದಿಗೆ ನೀವು ಹೇಗೆ ಇರಬಲ್ಲಿರಿ? ನೀವು ಅವರೊಂದಿಗೆ ಚೆನ್ನಾಗಿರಬಹುದು ಅನಿಸುತ್ತಾ? ಸುರಕ್ಷೆ ಮನೋಭಾವ ಇದೆಯಾ? ಇವಕ್ಕೆಲ್ಲ ಉತ್ತರ ಹೌದು ಎನ್ನುವುದಾದರೆ ನೀವು ಅವರ ಮುಂದೆ ನಿಂತು ಪ್ರೀತಿಯ ಪ್ರಸ್ತಾಪ ಮಾಡಬಹುದು.

Comments are closed.