ಯುವಜನರ ವಿಭಾಗ

ಹುಡುಗ-ಹುಡುಗಿ ಮಧ್ಯೆ ಅರಳುವ ಪ್ರೀತಿ ಬಗ್ಗೆ ವಿಜ್ಞಾನ ಬಿಚ್ಚಿಟ್ಟ ಸತ್ಯವೇನು..?

Pinterest LinkedIn Tumblr

ಯಾರ ಮೇಲಾಯ್ತೋ ಅವರ ಮೇಲೆ ಪ್ರೀತಿ ಹುಟ್ಟುತ್ತೆ. ಅದಕ್ಕೆ ‘ಪ್ರೀತಿ ಕುರುಡು…’ ಎನ್ನುತ್ತಾರೆ. ವಿಜ್ಞಾನವೂ ಈ ಹೇಳಿಕೆಯನ್ನು ಅನುಮೋದಿಸುತ್ತದೆ. ರಾಬರ್ಟ್ ಫ್ರೇಯೆರ್ ತಮ್ಮ ಪ್ರಯೋಗದಲ್ಲಿ ನ್ಯೂರೋ ಕೆಮಿಕಲ್, ಇನಾಯಿಲ್ ಇಥಾಯಿಲ್ ಅಮೀನ್ ಕಾರಣದಿಂದ ಸಂಗಾತಿ ತಪ್ಪುಗಳು ಕಾಣೋದೇ ಇಲ್ಲವಂತೆ ಪ್ರೇಮ ಪಾಶದಲ್ಲಿ ಬಿದ್ದಿರುವವವರಿಗೆ. ಇದು ಯಾವಾಗಲೂ ಒಂದೇ ತರಹ ಇರೋದಿಲ್ಲ. ಅದಕ್ಕೆ ಪ್ರೀತಿಯಲ್ಲಿ ಕೆಲವೊಮ್ಮೆ ಏರಿಳಿತವಾಗುತ್ತದೆ.

ದೇಹದ ಕಾಮನೆ: ಕಾಮನೆ ಎಂಬುದು ಸೆಕ್ಸ್ ಹಾರ್ಮೋನ್ ಟೆಸ್ಟೋಸ್ಟೆರಾನ್ ಮತ್ತು ಇಸ್ಟ್ರೋಜನ್‌ನಿಂದ ಹುಟ್ಟುತ್ತದೆ. ಟೆಸ್ಟೋಸ್ಟೆರಾನ್ ಕೇವಲ ಪುರುಷರಲ್ಲಿ ಮಾತ್ರವಲ್ಲ, ಮಹಿಳೆಯರಲ್ಲೂ ಸಕ್ರಿಯವಾಗಿರುತ್ತದೆ.

ಮನದ ಕಾಮನೆ: ಇಲ್ಲೇ ಆರಂಭವಾಗುತ್ತೆ ಪ್ರೇಮ. ಇಲ್ಲಿ ಜನರು ಪ್ರೀತಿಯಲ್ಲಿ ಬೀಳುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಎದುರಿನವರ ತಪ್ಪು ಏನೆಂಬುವುದೇ ಅರಿವಿಗೆ ಬರುವುದಿಲ್ಲ. ಅವರು ಹೆಚ್ಚಾಗಿ ಪ್ರೇಮಿಯ ಬಗ್ಗೆಯೇ ಯ ಚಿಸುತ್ತಿರುತ್ತಾರೆ. ಪ್ರೀತಿಯ ಈ ಸ್ಥರದಲ್ಲಿ ನ್ಯೂರೋ ಟ್ರಾನ್ಸ್ ಮೀಟರ್‌ ಸಮೂಹ ಮತ್ತು ಮೊನೊ ಅಮಿನಸ್ ಮುಖ್ಯ ಪಾತ್ರ ವಹಿಸುತ್ತದೆ. ಈ ನ್ಯೂರೋ ಕೆಮಿಕಲ್ ಕಾರಣದಿಂದ ತಮ್ಮ ಪ್ರೇಮಿ ಏನು ಮಾಡಿದರೂ ಸರಿ ಎಂದೆನಿಸುತ್ತದೆ. ಅವರು ತಪ್ಪು ಮಾಡಿದರೂ ಅದನ್ನು ತಪ್ಪೆಂದು ಮನಸ್ಸು ಒಪ್ಪಿ ಕೊಳ್ಳುವುದೇ ಇಲ್ಲ. ತಪ್ಪೆಲ್ಲವೂ ಸರಿ ಎನಿಸುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಕಾಣುವುದು ಕೇವಲ ಪ್ರೀತಿ ಮಾತ್ರ. ಅದಕ್ಕೆ ಹೇಳುವುದು ಪ್ರೀತಿ ಕುರುಡೆಂದು.

Comments are closed.