ಯುವಜನರ ವಿಭಾಗ

ನಿಮ್ಮ ಪ್ರೇಯಸಿಯನ್ನು ಮೊದಲು ಭೇಟಿ ಮಾಡುತ್ತಿದ್ದಿರಾದರೆ ಈ ತಪ್ಪನ್ನು ಖಂಡಿತ ಮಾಡಬೇಡಿ….

Pinterest LinkedIn Tumblr

ಪ್ರೀತಿ ಮಾಡಿರೋರೆಲ್ಲ ತಮ್ಮ ಹುಡುಗಿಯನ್ನು ಭೇಟಿಯಾಗಬೇಕು, ಎದುರು ಬದುರು ಕೂತು ತುಂಬಾ ಮಾತನಾಡಬೇಕು ಎಂದು ಬಯಸುತ್ತಾರೆ. ಆದರೆ ಈ ಸಮಯದಲ್ಲಿ ಹುಡುಗರು ಮಾಡುವ ತಪ್ಪುಗಳು ಹುಡುಗಿಯರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮೊದಲ ಭೇಟಿಯಲ್ಲಿ ಮೂಡ್ ಹಾಳಾಗುವುದು ಖಂಡಿತಾ. ಬದಲಾಗಿ ಹೇಗಿದ್ದರೆ ಒಳಿತು?

  • ನಾನೇ ಶ್ರೇಷ್ಠನೆಂಬ ಅಹಂಕಾರ ಬೇಡ. ಏಕೆಂದರೆ ಪ್ರೀತಿ ಎಂದರೆ ಅಲ್ಲಿ ಇಬ್ಬರೂ ಸಮ. ಆದುದರಿಂದ ಯಾವತ್ತೂ ಸಂಗತಿಯನ್ನು ಕೀಳಾಗಿ ನೋಡಬೇಡಿ.
  • ಪ್ರೀತಿಸುತ್ತಿದ್ದರೆ ಆಕೆಯ ಸಾಮಿಪ್ಯ ಸುಖಕ್ಕಾಗಿ ಮನಸು ಬಯಸುತ್ತಿರುತ್ತದೆ. ಆದರೆ ಮೊದಲ ಭೇಟಿಯಲ್ಲಿಯೇ ಆಕೆಯನ್ನು ಟಚ್ ಮಾಡಲು, ಕಿಸ್ ಮಾಡಲು ಬಯಸಬೇಡಿ. ಇದರಿಂದ ಮೊದಲ ಇಂಪ್ರೆಷನ್ ಕೆಟ್ಟದಾಗಿರುತ್ತದೆ. ಜೊತೆಗೆ ಹುಡುಗಿ ಮೂಡ್ ಕೂಡ ಹಾಳಾಗುತ್ತದೆ.
  • ಪ್ರೇಮಿಯನ್ನು ಭೇಟಿಯಾಗಲು ಹೋದಾಗ ಯಾವತ್ತೂ ಏನೇನೋ ಡ್ರೆಸ್ ಮಾಡಿಕೊಂಡು ಹೋಗಬೇಡಿ. ಬದಲಾಗಿ ನೀಟ್ ಆಗಿ ಡ್ರೆಸ್ ಮಾಡಿಕೊಳ್ಳಿ.
  • ಹಿಂದಿನ ಪ್ರೀತಿಯ ಬಗ್ಗೆ, ಅದ್ರಲ್ಲೂ ಹಿಂದಿನ ಗರ್ಲ್ ಫ್ರೆಂಡ್ ಬಗ್ಗೆ ಆಕೆಯ ಬಳಿ ಮಾತನಾಡುವುದೇ ಬೇಡ. ಇದರಿಂದ ಹೊಸ ಸಂಬಂಧ ಹಾಳಾಗೋದು ಖಂಡಿತಾ.
  • ಮೊದಲ ಭೇಟಿಯಲ್ಲಿ ಖಂಡಿತಾ ಸೆಕ್ಸ್ ಬಗ್ಗೆ ಮಾತನಾಡಬೇಡಿ. ಇದು ಸಂಬಂಧವನ್ನು ಮುರಿಯುತ್ತದೆ.
  • ಅಪ್ಪಿ ತಪ್ಪಿಯೂ ಅವರ ತೀರಾ ಪರ್ಸನಲ್ ವಿಷಯದ ಬಗ್ಗೆ ಕೇಳಬೇಡಿ. ಅವರಿಗೆ ಮುಜುಗರವಾಗಬಹುದು.
  • ಆಕೆಗೂ ಮಾತನಾಡಲು ಅವಕಾಶ ಕೊಡಿ. ಸುಮ್ಮನೆ ನೀವೇ ಗೊಣಗುತ್ತಿರಬೇಡಿ.
  • ಜಾಸ್ತಿ ಫ್ಲರ್ಟ್ ಮಾಡಬೇಡಿ. ಫ್ಲರ್ಟ್ ಹೆಲ್ತಿಯಾಗಿದ್ದರೆ ಓಕೇ. ಆದರೆ ಅದು ವಿಪರೀತವಾದರೆ ಮುಂದೆ ಏನೂ ಉಳಿಯೋದೇ ಇಲ್ಲ.

Comments are closed.