ಮತದಾರರ ಪಟ್ಟಿಯಲ್ಲಿ ಹೆಸರು ಇದೆಯಾ ಎಂಬುದನ್ನು ಖಾತರಿ ಪಡಿಸಲು ವೋಟರ್ ಹೆಲ್ಪ್ಲೈನ್‘ ಸಹಾಯಕ. ಗೂಗಲ್ ಪ್ಲೆ ಸ್ಟೋರ್ನಲ್ಲಿ ಲಭ್ಯವಿರುವ ಈ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಂಡು, ನಿಮ್ಮ ಹೆಸರು, ತಂದೆ ಅಥವಾ ಗಂಡನ ಹೆಸರು, ವಯಸ್ಸು ಮತ್ತು ಕೆಲ ಮಾಹಿತಿಯನ್ನು ಒದಗಿಸಿದರೆ ಸಾಕು. ಕ್ಷಣಾರ್ಧದಲ್ಲೇ ನಿಮ್ಮ ಗುರುತಿನ ಚೀಟಿಯನ್ನು ನಿಮ್ಮ ಮೊಬೈಲ್ ಸ್ಕ್ರೀನ್ನಲ್ಲಿ ಕಾಣಬಹುದು.
ಲೋಕಸಭಾ ಚುನಾವಣಾ ದಿನಾಂಕ ನಿಗದಿಯಾಗಿದೆ. ಮತದಾರ ಮತ ಹಾಕಲು ಗುರುತಿನ ಚೀಟಿ ಕಡ್ಡಾಯವಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಅಗತ್ಯ. ಹಾಗಿದ್ದಾಗ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಖಾತರಿ ಪಡಿಸುವುದು ಹೇಗೆ..? ಇಲ್ಲಿದೆ ಮಾಹಿತಿ
ವೋಟರ್ ಹೆಲ್ಪ್ಲೈನ್
ಮತದಾರರ ಪಟ್ಟಿಯಲ್ಲಿ ಹೆಸರು ಇದೆಯಾ ಎಂಬುದನ್ನು ಖಾತರಿ ಪಡಿಸಲು ‘ವೋಟರ್ ಹೆಲ್ಪ್ಲೈನ್‘ ಸಹಾಯಕ. ಗೂಗಲ್ ಪ್ಲೆ ಸ್ಟೋರ್ನಲ್ಲಿ ಲಭ್ಯವಿರುವ ಈ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಂಡು, ನಿಮ್ಮ ಹೆಸರು, ತಂದೆ ಅಥವಾ ಗಂಡನ ಹೆಸರು, ವಯಸ್ಸು ಮತ್ತು ಕೆಲ ಮಾಹಿತಿಯನ್ನು ಒದಗಿಸಿದರೆ ಸಾಕು. ಕ್ಷಣಾರ್ಧದಲ್ಲೇ ನಿಮ್ಮ ಗುರುತಿನ ಚೀಟಿಯನ್ನು ನಿಮ್ಮ ಮೊಬೈಲ್ ಸ್ಕ್ರೀನ್ನಲ್ಲಿ ಕಾಣಬಹುದು. ಮಾತ್ರವಲ್ಲದೆ, 1950 ಸಂಖ್ಯೆಗೆ ಉಚಿತ ಸಂದೇಶವನ್ನು ಕಳುಹಿಸುವ ಮೂಲಕ ಹೆಸರನ್ನು ಖಾತರಿಪಡಿಸಿಕೊಳ್ಳಬಹುದು.
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೇ ಹೋದಲ್ಲಿ ಅಥವಾ ಡಿಲೀಟ್ ಆಗಿದ್ದಲ್ಲಿ ಅರ್ಹ ಮತದಾರರು ಫಾರಂ ನಂ. 6 ಅನ್ನು ಭರ್ತಿ ಮಾಡಿ ಭೂತ್ ಮಟ್ಟದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು. ಮಾರ್ಚ್ 19ರ ವರೆಗೆ ಹೊಸ ಮತದಾರರು ಅರ್ಜಿ ಸಲ್ಲಿಸಬಹುದು.
Comments are closed.