ರಾಷ್ಟ್ರೀಯ

ಮದುವೆ ಮಂಟಪಕ್ಕೆ ಕುಡಿದು ಬಂದ ವರ: ಮುಂದೆ ಆದದ್ದೇ ಬೇರೆ…!

Pinterest LinkedIn Tumblr

ಬಿಹಾರ: ಮದುವೆ ಮಂಟಪಕ್ಕೆ ವರ ಬರುತ್ತಿದ್ದಂತೆಯೇ ವಧು ತನ್ನ ವಿವಾಹವನ್ನೇ ರದ್ದುಗೊಳಿಸಿದ ಘಟನೆ ಬಿಹಾರದ ಚಾಪ್ರದಲ್ಲಿ ನಡೆದಿದೆ.

ರಿಂಕಿ ಕುಮಾರಿ ಮದುವೆಯನ್ನು ಕ್ಯಾನ್ಸಲ್ ಮಾಡಿದ ವಧು. ರಿಂಕಿ ಮದುವೆ ಬಬ್ಲು ಕುಮಾರ್ ಜೊತೆ ನಿಶ್ಚಯವಾಗಿತ್ತು. ಇಬ್ಬರ ಮದುವೆ ನಡೆಯಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ವಧು ಮದುವೆಯನ್ನೇ ರದ್ದುಗೊಳಿಸಿದ್ದಾಳೆ.

ವಧು-ವರರಿಗಾಗಿ ಮದುವೆ ಮಂಟಪದಲ್ಲಿ ಕಾಯುತ್ತಿದ್ದ ವೇಳೆ ಬಬ್ಲು ಕುಡಿದ ಮತ್ತಿನಲ್ಲಿ ಮದುವೆ ಮನೆಗೆ ಆಗಮಿಸಿದ್ದಾನೆ. ಅಲ್ಲದೆ ಅಲ್ಲಿ ನೆರೆದಿದ್ದ ಸಂಬಂಧಿಕರ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಇದನ್ನು ನೋಡಿದ ರಿಂಕಿ ವರ ಬಬ್ಲುನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ.

ಬಳಿಕ ಇಬ್ಬರ ಕುಟುಂಬದವರು ರಿಂಕಿಗೆ ಈ ಮದುವೆಗೆ ಒಪ್ಪಿಸಲು ಪ್ರಯತ್ನಿಸಿದ್ದಾರೆ. ಆದರೆ ರಿಂಕಿ, ಬಬ್ಲುನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ರಿಂಕಿ ಮದುವೆಗೆ ನಿರಕಾರಿಸುತ್ತಿದ್ದಂತೆ ವಧುವಿನ ಕುಟುಂಬದವರು ವರದಕ್ಷಿಣೆಗೆ ನೀಡಿದ ಹಣವನ್ನು ಹಿಂತಿರುಗಿಸಲು ಹೇಳಿದ್ದಾರೆ.

Comments are closed.