ಕರ್ನಾಟಕ

ಟೀಚರ್‌ಗೆ ಅವಾಜ್ ಹಾಕಿದ ವಿದ್ಯಾರ್ಥಿಯ ವಿಡಿಯೋ ವೈರಲ್: ಇದೇನಾ ಸಭ್ಯತೆ?(Video)

Pinterest LinkedIn Tumblr

ವಿಶೇಷ ವರದಿ: ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಷ್ವರ, ಗುರು ಸಾಕ್ಷಾತ್ ಪರಬ್ರಹ್ಮಃ ತಸ್ಮೈ ಶ್ರೀ ಗುರುವೇ ನಮ: ಎಂಬ ಸುಭಾಷಿತದಂತೆಯೇ ಹೆತ್ತುಹೊತ್ತ ತಂದೆ ತಾಯಿ ಬಳಿಕ ಪೂಜ್ಯ ಸ್ಥಾನವನ್ನು ವಿದ್ಯೆ ಕಲಿಸಿದ ಗುರುವಿಗೆ ನೀಡುವ ಸಂಸ್ಕ್ರತಿ ನಮ್ಮದು. ಆದರೆ ಇಲ್ಲೊಬ್ಬ ವಿದ್ಯಾರ್ಥಿ ತನ್ನ ಗುರುವಿಗೆ ಏಕವಚನದಲ್ಲಿ ಕಿಂಚಿತ್ತೂ ಕೂಡ ತಾಯಿ ಸ್ಥಾನದಲ್ಲಿರುವ ಆ ಶಿಕ್ಷಕಿಗೆ ಗೌರವ ನೀಡದೇ ಅವಜ್ ಹಾಕಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋ ವಾಟ್ಸಾಪ್, ಫೇಸ್ ಬುಕ್ ಸೇರಿದಂತೆ ವಿವಿಧ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಇದೇನಾ ಸಭ್ಯತೆ, ಇದೇನಾ ಸಂಸ್ಕ್ರತಿ- ಯುವ ಜನಾಂಗ ತಪ್ಪು ದಾರಿ ತುಳಿಯುತ್ತಿದೆ ಎಂಬಂತೆ ಬರೆದುಕೊಂಡು ವಿಡಿಯೋ ಶೇರ್ ಮಾಡುತ್ತಿದ್ದಾರೆ.

Comments are closed.