ಯುವಜನರ ವಿಭಾಗ

ಸ್ಮಾರ್ಟ್ ಫೋನ್ ಬಳಸುವವರು ಕಡ್ಡಾಯವಾಗಿ ಈ ವರದಿ ಓದಲೇಬೇಕು….!

Pinterest LinkedIn Tumblr

ಲಾಸ್ ಏಂಜಲ್ಸ್: ಮೊಬೈಲ್ ಫೋನ್’ಗಳ ಬಳಕೆ ಆರಂಭವಾದಾಗ ಅವುಗಳ ಬೆಲೆ ಸಹ ಬಹಳ ಹೆಚ್ಚಾಗಿತ್ತು. ಆದರೆ, ಟೆಲಿಕಾಂ ಕ್ಷೇತ್ರದಲ್ಲಿ ಆದ ಕ್ರಾಂತಿ ಹಾಗೂ ಬದಲಾವಣೆಗಳಿಂದಾಗಿ ಮೊಬೈಲ್ ಹಾಗೂ ಕರೆ, ಇಂಟರ್ನೆಟ್ ಗಳ ದರಗಳು ಗಣನೀಯವಾಗಿ ಇಳಿಕೆಯಾಗಿದ್ದು, ಇದರ ಪರಿಣಾಮ ಸ್ವಾರ್ಟ್ ಫೋನ್ ಗಳ ಬಳಕೆಗಳೂ ಕೂಡ ಹೆಚ್ಚಾಗಿವೆ.

ತಂತ್ರಜ್ಞಾನ ಎಂಬ ಮನೆಗೆ ಒಳ ಮೇಲೆ ಮನುಷ್ಯ ಅದರಿಂದ ಮೇಲೆ ಹೆಚ್ಚು ಅವಲಂಬಿತನಾಗಿದ್ದು, ಸ್ಮಾರ್ಟ್ ಫೋನ್ ಎಂಬ ಬಲೆಯಲ್ಲಿ ಸಿಕ್ಕು ನರಳುತ್ತಿರುವ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಯುವ ಜನತೆ ಒಂದು ಹೆಜ್ಜು ಮುಂದೆ ಹೋಗಿ, ಸ್ಮಾರ್ಟ್ ಇಲ್ಲದೆ ನಾವಿಪ್ಪ ಎನ್ನುವಷ್ಟರ ಮಟ್ಟಿಗೆ ಮೊಬೈಲ್ ಗೀಳಿಗೆ ಬಿದ್ದಿದ್ದಾರೆ.

ಸ್ಮಾರ್ಟ್ ಫೋನ್ ಗಳನ್ನು ಅತಿಯಾಗಿ ಬಳಕೆ ಮಾಡುವ ಯುವಕರಲ್ಲಿ ಮಿದುಳಿನ ಸಾಮರ್ಥ್ಯ ಕ್ಷೀಣಿಸಲಿದೆ ಎಂದು ಅಧ್ಯಯನವೊಂದು ಹೇಳಿಕೊಂಡಿದೆ.

ಜರ್ನಲ್ ಆಫ್ ದ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ ಈ ಅಧ್ಯಯನವನ್ನು ನಡೆಸಿದ್ದು, ಅಧ್ಯಯನದಲ್ಲಿ ಹೆಚ್ಚಾಗಿ ಸ್ಮಾರ್ಟ್ ಫೋನ್ ಬಳಕೆ ಮಾಡುವ ಯುವಕರಲ್ಲಿ ಮಿದುಳಿನ ಸಮಸ್ಯೆಗಳು ಹೆಚ್ಚಾಗಿ ಕಂಡು ಬಂದು, ಮಿದುಳಿನ ಸಾಮರ್ಥ್ಯ ಕ್ಷೀಣಿಸಿರುವುದು ಕಂಡು ಬಂದಿದೆ.

ಸ್ಮಾರ್ಟ್ ಫೋನ್ ಹೆಚ್ಚಾಗಿ ಬಳಕೆ ಮಾಡುವ ಯುವಕರಲ್ಲಿ ಎಡಿಹೆಚ್’ಡಿ ಸಾಮಾನ್ಯ ಅಟೆನ್’ಷನ್ ಡಿಫಿಸಿಟ್ ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್ ಎಂಬ ಸಮಸ್ಯೆಗಳು ಕಾಣಿಸಿಕೊಳ್ಳಲಿದೆ ಎಂದು ಅಧ್ಯಯನದ ವರದಿಗಳು ತಿಳಿಸಿವೆ.

ಅಧ್ಯಯನಕ್ಕೆ ವಿಜ್ಞಾನಿಗಳು ಒಟ್ಟು 4,100 ಅರ್ಹ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡಿದ್ದು, 15 ಮತ್ತು 16 ವರ್ಷಗಳ ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದಾರೆ.

ಡಿಜಿಟಲ್ ಮಾಧ್ಯಮಗಳನ್ನು ಯುವಕರೇ ಹೆಚ್ಚು ಬಳಕೆ ಮಾಡುತ್ತಿರುವುದರನ್ನು ಅಧ್ಯಯನಕ್ಕೆ ಯುವಕರನ್ನೇ ಬಳಕೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳನ್ನು ಮೂರು ಭಾಗಗಳನ್ನಾಗಿ ಮಾಡಿದ ವಿಜ್ಞಾನಿಗಳು, ಮೊದಲನೇ ಭಾಗದ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಬಳಕೆ ಮಾಡದಂತೆ, ಇನ್ನೊಂದು ಭಾಗದ ವಿದ್ಯಾರ್ಥಿಗಳು ಮಧ್ಯಮದಲ್ಲಿ ಸ್ಮಾರ್ಟ್ ಫೋನ್ ಬಳಕೆ ಮಾಡುವಂತೆ ಹಾಗೂ ಮತ್ತೊಂದು ಭಾಗದ ವಿದ್ಯಾರ್ಥಿಗಳಿಗೆ ಅತೀ ಹೆಚ್ಚಾಗಿ ಫೋನ್ ಬಳಕೆ ಮಾಡುವಂತೆ ತಿಳಿಸಿದ್ದಾರೆ.

2014 ರಿಂದ 2016 ಅವಧಿಯ ನಡುವಲ್ಲಿ ಈ ಅಧ್ಯಯನವನ್ನು ನಡೆಯಲಾಗಿದ್ದು. ಪ್ರತೀ 6 ತಿಂಗಳಿಗೊಮ್ಮೆ ವಿಜ್ಞಾನಿಗಳು ವಿದ್ಯಾರ್ಥಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅತೀ ಹೆಚ್ಚು ಸ್ಮಾರ್ಟ್ ಫೋನ್ ಬಳಕೆ ಮಾಡಿದ್ದ ವಿದ್ಯಾರ್ಥಿಗಳು ಎಡಿಹೆಚ್’ಡಿ ರೋಗಕ್ಕೊಳಗಾಗಿರುವುದು ಕಂಡು ಬಂದಿದೆ.

ಎಡಿಹೆಚ್’ಡಿ ಎಂಬ ರೋಗಕ್ಕೊಳಗಾದ ಯುವಕರು ಸ್ಥಿರಚಿತ್ತರಾಗಿ ಯಾವುದರ ಬಗ್ಗೆಯೂ ಗಮನ ಹರಿಸಲು ಅಸಮರ್ಥರಾಗುತ್ತಾರೆ. ಬಹಳ ಸಮಯ ಅವರು ಪುಸ್ತಕಗಳೊಂದಿಗೆ ಗಮನವಿಟ್ಟು ಓದಲಾರರು. ಓದಿನಲ್ಲಿ ಯುವಕರು ಆಸಕ್ತಿ ಕಳೆದುಕೊಳ್ಳುತ್ತಾರೆ. ಕೆಲ ಪೋಷಕರು ತಮ್ಮ ಮಕ್ಕಳಿಗೆ ಪುಸಲಾಯಿಸಿ, ಮುದ್ದು ಮಾಡಿ ಸರಿದಾರಿಗೆ ತರಲು ಯತ್ನ ನಡೆಸಿದರೆ, ಮತ್ತೆ ಕೆಲ ಪೋಷಕರು ಬೈದು, ಹೊಡೆದು ಹೆದರಿಸುವ ಪ್ರಯತ್ನಗಳನ್ನು ಮಾಡುತ್ತಾರೆ.

ಹೊರಗಿನಿಂದ ದೂರುಗಳು ಬರಲಾಂರಭಿಸಿದಾಗ ಯುವಕರು ಮತ್ತಷ್ಟು ಹತಾಶರಾಗುತ್ತಾರೆ. ಆದರೆ, ಈ ಬಗೆಯ ಹತಾಶೆ ಹಾಗೂ ಸಿಟ್ಟಿಗೇಳುವುದು ಸಮಸ್ಯೆಗೆ ಪರಿಹಾರವಲ್ಲ. ಯುವಕರಿಗೆ ಕಾಡುತ್ತಿರುವ ಸಮಸ್ಯೆಯನ್ನು ಕಂಡು ಹಿಡಿದು ಪರಿಹಾರ ಹುಡುಕುವುದು ಮುಖ್ಯ. ಸಕಾಲಕ್ಕೆ ಸಮಸ್ಯೆಗಳನ್ನು ಗುರ್ತಿಸಿ, ಚಿಕಿತ್ಸೆ ಕೊಡಿಸುವುದು ಮುಖ್ಯವಾಗಿರುತ್ತದೆ.

Comments are closed.