ಯುವಜನರ ವಿಭಾಗ

ಹುಡುಗಿಯರನ್ನು ಬುಟ್ಟಿಗೆ ಹಾಕಿಕೊಳ್ಳಲು ಹುಡುಗರು ಎಂತೇಥಾ ಸುಳ್ಳುಗಳನ್ನು ಹೇಳುತ್ತಾರೆ ನೋಡಿ…!

Pinterest LinkedIn Tumblr

ಹುಡುಗಿಯರನ್ನು ಇಂಪ್ರೆಸ್‌ ಮಾಡಲು ಕೆಲವೊಮ್ಮೆ ಹುಡುಗರು ಸಾಕಷ್ಟು ಸುಳ್ಳುಗಳನ್ನು ಹೇಳುತ್ತಾರೆ, ನಾಟಕ ಮಾಡುತ್ತಾರೆ. ಅದರಲ್ಲೂ ಸಾಮಾನ್ಯವಾಗಿ ಈ ರೀತಿಯ ನಾಟಕ ಮಾಡಿ ಇಂಪ್ರೆಸ್‌ ಮಾಡಲು ನೋಡುತ್ತಾರೆ.

ನಿಮ್ಮ ಇಷ್ಟದ ವಸ್ತುಗಳು ಅವನಿಗೆ ಇಷ್ಟ ಎಂಬಂತೆ ನಟಿಸುವುದು
ಎಲ್ಲರೂ ಅಲ್ಲ ಕೆಲವರು ಈ ರೀತಿಯ ನಟನೆ ಮಾಡುತ್ತಾರೆ. ಒಂದು ವೇಳೆ ನಿಮಗೆ ನಾಯಿ ಅಂದರೆ ಪ್ರಾಣ ಅಂತ ಅವನಿಗೆ ಗೊತ್ತಿದ್ದರೆ ಅವನಿಗೂ ನಾಯಿ ಕಂಡ್ರೆ ತುಂಬಾ ಇಷ್ಟ ಎಂಬಂತೆ ತೋರಿಸಿಕೊಳ್ಳುವುದು.

ಬ್ರೇಕ್‌ ಅಪ್‌ ಸ್ಟೋರಿ ಹೇಳಿ ಅನುಕಂಪ ಗಿಟ್ಟಿಸಿಕೊಳ್ಳುವುದು
ಹಳೆಯ ಲವ್‌ ಸ್ಟೋರಿ ಹೇಳಿ ಆ ಸ್ಟೋರಿಯಲ್ಲಿ ಈತನನ್ನು ತುಂಬಾ ಒಳ್ಳೆಯವನಂತೆ ಬಿಂಬಿಸಿ ಅನುಕಂಪಗಿಟ್ಟಿಸಿಕೊಳ್ಳುವುದು.

ದೇಹದಾರ್ಢ್ಯದ ಕುರಿತು ಬಡಾಯಿ ಕೊಚ್ಚಿಕೊಳ್ಳುವುದು
ನಾನು ಒಂದು ನಿಮಿಷದಲ್ಲಿ 50 ಪುಶ್‌ ಅಪ್‌ ಹೊಡೆಯುತ್ತೇನೆ, ಟ್ರೆಡ್‌ಮಿಲ್‌ನಲ್ಲಿ ಒಂದು ಗಂಟೆ ಓಡುತ್ತೇನೆ ಹೀಗೆಲ್ಲಾ ಯಾರಾದರೂ ಹೇಳುತ್ತಿದ್ದರೆ ಅವರು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ನೀವೇ ಪರೀಕ್ಷಿಸುವುದು ಒಳ್ಳೆಯದು.

ಕೈ ತುಂಬಾ ದುಡ್ಡು ಇರುವಂತೆ ಪೋಸ್‌ ನೀಡುವುದು
ಕೆಲವರು ಹುಡುಗಿಯರನ್ನು ಇಂಪ್ರೆಸ್‌ ಮಾಡಲು ಕೈ ತುಂಬಾ ದುಡ್ಡು ಇರುವಂತೆ ಪೋಸ್‌ ನೀಡುವುದು ಮಾಡುತ್ತಾರೆ. ಹೀಗೆ ಪೋಸ್‌ ನೀಡುವ ಹುಡುಗರು ನೆನೆಪಿನಲ್ಲಿಡಬೇಕಾದ ಅಂಶವೆಂದರೆ ನಿಮ್ಮ ಹಣ ಮಾತ್ರ ನೋಡಿ ಇಂಪ್ರೆಸ್‌ ಆಗುವವರು ತುಂಬಾ ಕಾಲ ನಿಮ್ಮೊಂದಿಗೆ ಇರಲ್ಲ.

ನಿಮ್ಮ ಫ್ರೆಂಡ್ಸ್ ಮೂಲಕ ನಿಮ್ಮನ್ನು ಇಂಪ್ರೆಸ್‌ ಮಾಡುವುದು
ಕೆಲವು ಹುಡುಗರು ಅವರಿಗೆ ನಿಮ್ಮ ಫ್ರೆಂಡ್ಸ್‌ ಸರ್ಕಲ್‌ ಕಂಡ್ರೆ ಅಷ್ಟೇನು ಇಷ್ಟವಿಲ್ಲದಿದ್ದರೂ ನಿಮ್ಮನ್ನು ಇಂಪ್ರೆಸ್‌ ಮಾಡಲು ಅವರ ಜತೆ ತುಂಬಾ ಫ್ರೆಂಡ್ಲಿ ಆಗಿ ಇರುತ್ತಾರೆ.

ಸದಾ ನಿನದೇ ಧ್ಯಾನ
‘ಇಡೀ ದಿನ ನಿಮ್ಮ ಧ್ಯಾನದಲ್ಲಿಯೇ ಇರುತ್ತೇನೆ’ ಎನ್ನುವ ಹೋಳು ಮಾತಿಗೆ ಮರುಳಾಗಬೇಡಿ.

Comments are closed.