ಆ ರಾತ್ರಿಯೆಲ್ಲ ಒಬ್ಬರನ್ನೊಬ್ಬರು ನೋಡ್ತಾ ಕಳೆದು ಬಿಟ್ಟೆವು. ಬೇಡ ಬೇಡ ಅಂದರೂ ಅವಳು ತಂದಿದ್ದ ಚಿಪ್ಸ್, ಕೂಲ್‌ಡ್ರಿಂಕ್ಸ್ ಕೊಡ್ತಾನೇ ಇದ್ಳು ರಾತ್ರಿ ಮೂರಕ್ಕೆ ತುಮಕೂರಿನಲ್ಲಿ ಟೀ ಕುಡಿಸಿದಳು. ಬೆಳಗಿನ ಜಾವ 4ಕ್ಕೆಲ್ಲ ನಾನಿಳಿಯಬೇಕಾದ ಜಾಗ ಬಂದೇ ಬಿಡ್ತು.
ಅವತ್ತು ನನ್ನ ಸೀನಿಯರ್ ಮದುವೆಗೆ ಅಂತ ಮೂಡಬಿದಿರೆಗೆ ಹೋಗಿದ್ದೆ. ಮದುವೆ ಮುಗಿಸಿಕೊಂಡು, ತುರ್ತು ಕೆಲಸದ ನಿಮಿತ್ತ ನಾನು ಅದೇ ದಿನ ಬೆಂಗಳೂರಿಗೆ ಬರಲೇಬೇಕಿತ್ತು. ಹೀಗಾಗಿ ಬೆಂಗಳೂರಿನ ಬಸ್ ಹತ್ತಿದ್ದೆ. ಇಯರ್‌ಫೋನ್ ಹಾಕಿಕೊಂಡು ಸಾಂಗ್ ಕೇಳ್ತಾ ಇದ್ದೆ. ಆಗ್ಲೆ ನನ್ನ ಸೀಟಿನ ಪಕ್ಕದಲ್ಲಿ ಕುಂತಿದ್ದ ಆ ಹುಡುಗಿಯತ್ತ ಕಣ್ಣುಗಳು ತಿರುಗಿದ್ದು. ಅವಳು ಕೂಡ ಎರಡು ಮೂರು ಬಾರಿ ನನ್ನತ್ತ ನೋಡಿದಳು. ರಾತ್ರಿ 12 ಗಂಟೆಗೆ ಹಾಸನದ ರೆಸ್ಟೋರೆಂಟ್ ಒಂದರಲ್ಲಿ ಊಟಕ್ಕೆ ಅಂತ ಬಸ್ ನಿಲ್ಲಿಸಿದ್ರು. ಅವಳು ಕೂಡ ನನ್ನ ಪಕ್ಕದಲ್ಲೇ ಊಟಕ್ಕೆ ಕುಳಿತಳು. ನಂತರ, ಎಲ್ಲಿಗೆ ಹೋಗ್ತಾ ಇದ್ದೀರಾ, ಏನು ಮಾಡ್ಕೊಂಡಿದ್ದೀರಾ ಅಂತೆಲ್ಲ ವಿಚಾರಿಸಿದಳು. ನಾನಂತೂ ಪೂರ್ತಿ ಬಯೊಡೆಟಾವನ್ನೇ ಹೇಳಿಬಿಟ್ಟೆ. ಅವಳು ಮೂಡಬಿದಿರೆಯ ಕಾಲೇಜಿನಲ್ಲಿ ಓದ್ತಾ ಇದ್ದಾಳೆ ಅಂತ ಗೊತ್ತಾಯ್ತು. ಅವಳ ಕಣ್ಣೋಟ, ಕೆಂಪು ಕೆಂಪಾದ ಮುದ್ದು ಮುಖ, ಜೇನದನಿ, ವಿಪರೀತ ಅನ್ನುವಂಥ ಬೋಲ್ಡ್‌ನೆಸ್, ಎರಡು ನಿಮಿಷಕ್ಕೊಮ್ಮೆ ತಲೆ ಕೊಡವುತ್ತಿದ್ದ ಸ್ಟೈಲ್… ವಾಹ್, ಎಷ್ಟು ವರ್ಣಿಸಿದರೂ ಕಡಿಮೆಯೇ ಅವಳನ್ನು..
ಆ ರಾತ್ರಿಯೆಲ್ಲ ಒಬ್ಬರನ್ನೊಬ್ಬರು ನೋಡ್ತಾ ಕಳೆದು ಬಿಟ್ಟೆವು. ಬೇಡ ಬೇಡ ಅಂದರೂ ಅವಳು ತಂದಿದ್ದ ಚಿಪ್ಸ್, ಕೂಲ್‌ಡ್ರಿಂಕ್ಸ್ ಕೊಡ್ತಾನೇ ಇದ್ಳು ರಾತ್ರಿ ಮೂರಕ್ಕೆ ತುಮಕೂರಿನಲ್ಲಿ ಟೀ ಕುಡಿಸಿದಳು. ಬೆಳಗಿನ ಜಾವ 4ಕ್ಕೆಲ್ಲ ನಾನಿಳಿಯಬೇಕಾದ ಜಾಗ ಬಂದೇ ಬಿಡು¤. “ಬಾಯ್’ ಅಂತ ಅವಳತ್ತ ಮತ್ತೂಂದು ಸ್ಮೈಲ್ ಎಸೆದು ಬಸ್ ಇಳಿದೆ. ಬಸ್ ಮುಂದೆ ಸಾಗ್ತಾ ಇದ್ರೂ ಅವಳು ಕಿಟಕಿಯಿಂದ ಇಣುಕಿ ಬಾಯ್ ಮಾಡುತ್ತಲಿದ್ದಳು.
ಅವಳಾಗೇ ಫೋನ್ ನಂಬರ್ ಕೇಳಿದ್ದರಿಂದ ಸಂಭ್ರಮದಿಂದಲೇ ನಂಬರ್ ಕೊಟ್ಟು ಬಂದಿದ್ದೆ. ಇಡೀ ರಾತ್ರಿ ಮನಸ್ಸು ಬಿಚ್ಚಿ (?!) ಮಾತಾಡಿದವಳು ಫೋನ್ ಮಾಡುತ್ತಾಳೆಂಬ ನಿರೀಕ್ಷೆ ಇತ್ತು. ಒಂದು ವಾರವಾದ್ರೂ ಫೋನ್ ಬರಲಿಲ್ಲ. ಅವಳೆಲ್ಲಿ ಮಾಯವಾದಳ್ಳೋ ನಾನರಿಯೆ. ಆ ಚೆಂದುಳ್ಳಿ ಚೆಲುವೆಗಾಗಿ ಹೃದಯ ಈಗಲೂ ಕನವರಿಸುತ್ತಿದೆ. ಈ ಹುಚ್ಚು ಹೃದಯ ನಿನ್ನನ್ನು ನೋಡಬೇಕೆಂಬ ಒಂದೇ ಕಾರಣದಿಂದ ಮತ್ತೆ ಮೂಡಬಿದಿರೆಗೆ ಬರುತ್ತಿದೆ ಕಣೇ. ಆಗಲಾದರೂ ಸಿಗುವೆಯಾ ಎಂದು ಯಾಚನೆಯ ದನಿಯಲ್ಲಿ ಕೇಳುತ್ತಿದೆ. ಒಂದೇ ರಾತ್ರಿಯಲ್ಲಿ ನನ್ನ ಮನಸ್ಸು, ಹೃದಯ ಎರಡನ್ನೂ ಕದ್ದುಕೊಂಡು ಹೋಗಿರುವ ಆ ಹೃದಯಚೋರಿಗೆ ಈ ನನ್ನ ಪ್ರೇಮ ಪತ್ರ. ನನ್ನ ಮೋಹದ ಮಾತು ಈಗಲೇ ತಲುಪಲಿ. ಅವಳು ಅಯ್ಯೋ ಪಾಪ ಅಂದುಕೊಂಡು-ಪ್ರೀತಿಯಿಂದ ಅಲ್ಲದಿದ್ರೆ ಪರವಾಗಿಲ್ಲ; ಕನಿಕರದಿಂದಾದ್ರೂ ಒಮ್ಮೆ ಫೋನ್ ಮಾಡಲಿ…
ಅಂಥದೊಂದು ನಿರೀಕ್ಷೆಯೊಂದಿಗೇ ಕಾದು ಕುಳಿತಿರುವ-
ಪ್ರಕಾಶ್ ಡಿ. ರಾಂಪೂರ್ (ರಾಯಚೂರು)
-ಉದಯವಾಣಿ
Comments are closed.